ಗಡಿಯಲ್ಲಿ ಚೀನಾದ ಮಾರ್ಷಲ್ ಆರ್ಟ್ಸ್ ಫೈಟರ್ಸ್: ತಿರುಗೇಟಿಗೆ ಭಾರತದ ಘಾತಕ್ ಕಮಾಂಡೋ ಸಜ್ಜು!
ಗಡಿಯಲ್ಲಿ ಕುಂಗ್‌ಫä ಘಾತಕ್?| ಗಲ್ವಾನ್ ಕಣಿವೆಗೆ ಚೀನಾದಿಂದ ಮಾರ್ಷಲ್ ಆಟ್ಸ್‌ರ್ ಫೈಟರ್‌ಗಳ ರವಾನೆ| ಚೀನಾಕ್ಕೆ ತಿರುಗೇಟು ನೀಡಲು ಭಾರತದಿಂದ ಘಾತಕ್ ಕಮಾಂಡೋ ಸಜ್ಜು
ಬೀಜಿಂಗ್(ಜೂ.29): ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾದ ಮತ್ತೊಂದು ಕುತಂತ್ರ ಬಟಾಬಯಲಾಗಿದೆ. ಭಾರತ- ಚೀನಾ ಯೋಧರ ಹೊಡೆದಾಟಕ್ಕೂ ಮುನ್ನ ಪರ್ವಾತಾರೋಹಿಗಳು ಹಾಗೂ ಮಾರ್ಷಲ್ ಆಟ್ಸ್‌ರ್ ಫೈಟರ್‌ಗಳನ್ನು ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಗೆ ಚೀನಾ ರವಾನಿಸಿತ್ತು ಎಂದು ಸ್ವತಃ ಚೀನಿ ಪತ್ರಿಕೆಯೇ ವರದಿ ಮಾಡಿದೆ.
ಅಣ್ವಸ್ತ್ರ ಹೊಂದಿರುವ ಭಾರತ ಹಾಗೂ ಚೀನಾ ನಡುವೆ ಗಡಿಯಲ್ಲಿ ಸಂಘರ್ಷ ಸರ್ವೇಸಾಮಾನ್ಯ. ಆದರೆ ಜೂ.15ರಂದು ನಡೆದ ಘರ್ಷಣೆಯಿಂದಾಗಿ 5 ದಶಕಗಳಲ್ಲೇ ಮೊದಲ ಬಾರಿಗೆ ಗಡಿಯಲ್ಲಿ ನೆತ್ತರು ಹರಿದಿತ್ತು. ಆ ಘರ್ಷಣೆಗೂ ಮುನ್ನ ಮೌಂಟ್ ಎವರೆಸ್ಟ್ ಒಲಿಂಪಿಕ್ ಜ್ಯೋತಿ ರಿಲೇ ತಂಡ ಹಾಗೂ ಮಾರ್ಷಲ್ ಆಟ್ಸ್‌ರ್ ಕ್ಲಬ್ ಸೇರಿದಂತೆ 5 ಹೊಸ ಮಿಲಿಟರಿ ವಿಭಾಗಗಳು ಲಾಸಾದಲ್ಲಿ ಹಾಜರಾಗಿದ್ದವು ಎಂದು ಚೀನಾ ಸೇನೆಯ ಅಧಿಕೃತ ದಿನಪತ್ರಿಕೆ ‘ಚೀನಾ ನ್ಯಾಷನಲ್ ಡಿಫೆನ್ಸ್’ ವರದಿ ಮಾಡಿದೆ. ಅಲ್ಲದೆ ಟಿಬೆಟ್ ರಾಜಧಾನಿಯಾಗಿರುವ ಲಾಸಾದಲ್ಲಿ ನೂರಾರು ಯೋಧರು ನಿಂತಿರುವುದನ್ನು ಸರ್ಕಾರಿ ಸ್ವಾಮ್ಯದ ಟೀವಿ ವಾಹಿನಿ ಸಿಸಿಟೀವಿ ಪ್ರಸಾರ ಮಾಡಿದೆ.
ಚೀನಾದಿಂದ ಬರುವ ವಿದ್ಯುತ್ ಉಪಕರಣಗಳಲ್ಲಿ ವೈರಸ್?
ಗಲ್ವಾನ್ ಕಣಿವೆ ಕಂದಕಗಳಿಂದ ಕೂಡಿರುವುದು ಹಾಗೂ ಗಡಿಯಲ್ಲಿ ಶಸ್ತಾ್ರಸ್ತ್ರ ಬಳಸಬಾರದು ಎಂಬ ಒಪ್ಪಂದ ಇರುವ ಹಿನ್ನೆಲೆಯಲ್ಲಿ ಪರ್ವತಾರೋಹಿಗಳು ಮತ್ತು ಮಾರ್ಷಲ್ ಆಟ್ಸ್‌ರ್ ಫೈಟರ್ಸ್ಗಳನ್ನು ಚೀನಾ ಕರೆಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದಿಂದ ಘಾತಕ್ ಪಡೆ
ಚೀನಾದ ಮಾರ್ಷಲ್ ಆಟ್ಸ್‌ರ್ ಫೈಟರ್‌ಗಳಿಗೆ ಸಡ್ಡು ಹೊಡೆಯಲು ಭಾರತ ಕೂಡಾ ತನ್ನ ಘಾತಕ್ ಕಮ್ಯಾಂಡೋಗಳ ಪಡೆಯನ್ನು ಕಣಿವೆ ಪ್ರದೇಶದಲ್ಲಿ ಸಜ್ಜುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಘಾತಕ್ ಕಮ್ಯಾಂಡೋಗಳು ಭಾರತೀಯ ಸೇನಾ ಪಡೆಯ ವಿಶೇಷ ವಿಭಾಗವಾಗಿದೆ. ಒಂದು ತಂಡದಲ್ಲಿ ಒಬ್ಬರು ಜೆಸಿಒ, ಒಬ್ಬರು ಅಧಿಕಾರಿ ಮತ್ತು 22 ಕಮ್ಯಾಂಡೋಗಳನ್ನು ಒಳಗೊಂಡಿರುತ್ತದೆ. ಇಂಥ 40-45 ಜನರ ತಂಡ ಸದಾ ಕಾಲ ಸಿದ್ದವಾಗಿರುತ್ತದೆ.
ಚೀನಾಕ್ಕೆ ಭರ್ಜರಿ ತೆರಿಗೆ: ಸೋಲಾರ್ ಉಪಕರಣಗಳ ದರ ಭಾರಿ ಏರಿಕೆ?
ಈ ಯೋಧರಿಗೆ 35 ಕೆಜಿ ಭಾರ ಹೊತ್ತು ಸತತ 40 ಕಿ.ಮೀ ಓಡುವಷ್ಟುಕಠಿಣ ತರಬೇತಿ ನೀಡಲಾಗಿರುತ್ತದೆ. ಇವರಿಗೆ 43 ದಿನಗಳ ವಿಶೇಷ ತರಬೇತಿ ನೀಡಲಾಗಿರುತ್ತದೆ. ಇವರಿಗೆ ಶಸ್ತ್ರಾಸ್ತ್ರ ಬಳಸಿ ಯುದ್ಧ ಮಾಡುವ ಜೊತೆಗೆ ಮುಷ್ಠಿಯುದ್ಧದ ತರಬೇತಿಯೂ ಇರುತ್ತದೆ