Asianet Suvarna News Asianet Suvarna News

ದೇಶದಲ್ಲಿ 42,982 ಹೊಸ ಕೊರೋನಾ ಕೇಸ್ ಪತ್ತೆ, ಲಾಕ್‌ಡೌನ್ ಆತಂಕದಲ್ಲಿ ಜನತೆ!

  • ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ
  • ಕಳೆದ 24 ಗಂಟೆಯಲ್ಲಿ 42 ಸಾವಿರಕ್ಕೂ ಅಧಿಕ ಕೇಸ್ ಪತ್ತೆ
  • ಕೇರಳ ಒಂದೇ ರಾಜ್ಯದಲ್ಲಿ 22 ಸಾವಿರ ಕೇಸ್, ಮತ್ತೆ ಲಾಕ್‌ಡೌನ್ ಆತಂಕ
     
India witness 42982 fresh Covid cases in last 24 hours government warn pandemic still raging ckm
Author
Bengaluru, First Published Aug 5, 2021, 3:49 PM IST
  • Facebook
  • Twitter
  • Whatsapp

ನವದೆಹಲಿ(ಆ.05): ಕೊೊರೋನಾ ವೈರಸ್ ಪ್ರಕರಣ ಸಂಖ್ಯೆ ಆತಂಕ ಹೆಚ್ಚಿಸುತ್ತಿದೆ. ಎಲ್ಲವೂ ಶಾಂತವಾಗುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಕೊರೋನಾ ಆರ್ಭಟ ಆರಂಭಗೊಂಡಿದೆ. ಕೇರಳದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣದಿಂದ ನೆರೆ ರಾಜ್ಯ ಕರ್ನಾಟಕದಲ್ಲೂ ಕೋವಿಡ್ ಹೆಚ್ಚಾಗುತ್ತಿದೆ. ಇದರಿಂದ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 42 ಸಾವಿರಕ್ಕೂ ಅಧಿಕ ಕೊರೋನಾ ಕೇಸ್ ಪತ್ತೆಯಾಗಿದೆ. ಇನ್ನು 562 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಕೇರಳದಲ್ಲಿ ಮತ್ತೆ 22,000 ಕೇಸ್‌, ಆದರೂ ನಿರ್ಬಂಧ ಸಡಿಲಿಕೆ!

ಳೆದ 24 ತಾಸುಗಳಲ್ಲಿ 42,982 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕೇರಳದಲ್ಲಿ 22,000 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಇನ್ನು ಕರ್ನಾಟಕದಲ್ಲಿ ಸರಿಸುಮಾರು 2,000 ಹೊಸ ಕೇಸ್ ಪತ್ತೆಯಾಗುತ್ತಿವೆ. ಕೇರಳದ ಜೊತೆ ಗಡಿ ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ. ಆದರೂ ಕೊರೋನಾ ಪ್ರಕರಣ ಸಂಖ್ಯೆ ಇಳಿಕೆಯಾಗುತ್ತಿಲ್ಲ.

ಇದೀಗ ಕೊರೋನಾ ಗುಣಮುಖರ ಸಂಖ್ಯೆಗಿಂತ ಹೊಸ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಮತ್ತಷ್ಟು ಆತಂಕಕಾರಿಯಾಗಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 42 ಸಾವಿರಕ್ಕೂ ಅಧಿಕ ಹೊಸ ಕೊರೋನಾ ಪ್ರಕರಣ ದಾಖಲಾಗಿದ್ದರೆ, ಕೊರೋನಾದಿಂದ ಗುಣಮುಖರಾದ ಸಂಖ್ಯೆ 41,726.  ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 3,09,74,748 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ಪರಿಹಾರ

ಕೊರೋನಾ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ.  ಇದುವರೆಗೆ 48.93 ಕೋಟಿಗಿಂತ ಹೆಚ್ಚಿನ ಅಂದರೆ 48,93,42,295 ಡೋಸ್ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 37,55,115 ಲಸಿಕೆ ಡೋಸ್ ನೀಡಲಾಗಿದೆ.

ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ದೇಶಾದ್ಯಂತ ಕೊರೋನಾ ಟೆಸ್ಟ್ ಕೂಡ ಹೆಚ್ಚಿಸಲಾಗಿದೆ. ಕಳೆದ 24 ಗಂಟೆಯಲ್ಲಿ 16,64,030 ಪರೀಕ್ಷೆಗಳನ್ನು ನಡೆಸಲಾಗಿದೆ.  ಇದರೊಂದಿಗೆ ಇಲ್ಲಿಯ ತನಕ ಒಟ್ಟು 47.48 ಕೋಟಿಗಿಂತ ಹೆಚ್ಚಿನ ಅಂದರೆ 47,48,93,363 ಪರೀಕ್ಷೆಗಳನ್ನು ನಡೆಸಲಾಗಿದೆ.

ಚೀನಾದಲ್ಲಿ ಮತ್ತೆ ಕೋವಿಡ್‌ ಸದ್ದು: 1 ನಗರ ಸೀಲ್‌ಡೌನ್‌!

ಒಂದೆಡೆ, ದೇಶದೆಲ್ಲೆಡೆ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದ ಪರಿಣಾಮ, ವಾರದ ಪಾಸಿಟಿವಿಟಿ ದರ ಪ್ರಸ್ತುತ 2.37%ಗೆ ಮತ್ತು ದೈನಂದಿನ ಪಾಸಿಟಿವಿಟಿ ದರ ಇಂದು 2.58%ಗೆ ಇಳಿಕೆ ಕಂಡಿದೆ. ದೈನಂದಿನ ಪಾಸಿಟಿವಿಟಿ ದರ ಸತತ 59 ದಿನಗಳಿಂದ 5% ಮಟ್ಟದಿಂದ ಕೆಳಗಿದೆ.

Follow Us:
Download App:
  • android
  • ios