Asianet Suvarna News Asianet Suvarna News

ಕೇರಳದಲ್ಲಿ ಮತ್ತೆ 22,000 ಕೇಸ್‌, ಆದರೂ ನಿರ್ಬಂಧ ಸಡಿಲಿಕೆ!

* ಕೇರಳದಲ್ಲಿ ಬುಧವಾರ ಮತ್ತೆ 22414 ಹೊಸ ಕೋವಿಡ್‌ ಪ್ರಕರಣ

* ರಾಜ್ಯದಲ್ಲಿ ಸತತ 7 ದಿನ 20000ಕ್ಕಿಂತ ಹೆಚ್ಚು ಕೇಸ್‌

* ರಾಜ್ಯಾದ್ಯಂತ ಹೇರಲಾಗಿದ್ದ ನಿರ್ಬಂಧಗಳನ್ನು ಮತ್ತಷ್ಟು ಸಡಿಲ

Lack of active surveillance low levels of contact tracing Central team on Kerala Covid surge pod
Author
Bangalore, First Published Aug 5, 2021, 12:26 PM IST

ತಿರುವನಂತಪುರಂ(ಆ.05): ಕೇರಳದಲ್ಲಿ ಬುಧವಾರ ಮತ್ತೆ 22414 ಹೊಸ ಕೋವಿಡ್‌ ಪ್ರಕರಣ ದಾಖಲಾಗಿದ್ದು, 108 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸತತ 7 ದಿನ 20000ಕ್ಕಿಂತ ಹೆಚ್ಚು ಕೇಸ್‌ ದಾಖಲಾಗಿತ್ತು. ಆದರೆ ಸೋಮವಾರ ಒಂದು ದಿನ ಅದು 13000ಕ್ಕಿಳಿದಿತ್ತಾದರೂ, ಮಂಗಳವಾರ ಮತ್ತೆ 20,000ದ ಗಡಿದಾಟಿತ್ತು.

ಬುಧವಾರವೂ ಆ ಬೆಳವಣಿಗೆ ಮುಂದುವರೆದಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34,71,563ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,76,048ಕ್ಕೆ ತಲುಪಿದೆ. ಈ ನಡುವೆ ರಾಜ್ಯದಲ್ಲಿ ಸೋಂಕು ಏರುಮುಖದಲ್ಲಿದ್ದರೂ, ರಾಜ್ಯ ಸರ್ಕಾರ, ರಾಜ್ಯಾದ್ಯಂತ ಹೇರಲಾಗಿದ್ದ ನಿರ್ಬಂಧಗಳನ್ನು ಮತ್ತಷ್ಟುಸಡಿಲಗೊಳಿಸಿದೆ.

ಬಹುತೇಕ ವಹಿವಾಟು ಮತ್ತು ಪ್ರವಾಸಿ ತಾಣಗಳನ್ನು ವಾರದ 5 ದಿನದ ಬದಲಾಗಿ 6 ದಿನ ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಅಂಗಡಿ ಮುಂಗಟ್ಟು ತೆರೆಯುವ ಸಮಯವನ್ನು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ವಿಸ್ತರಿಸಿದೆ.

Follow Us:
Download App:
  • android
  • ios