ಭಾರತದಲ್ಲಿ ಸಿಎಎ ಜಾರಿಯಾಗಿದೆ. ಪ್ರಧಾನಿ ಮೋದಿ 3ನೇ ಅವಧಿಯಲ್ಲಿ ಎನ್ಆರ್‌ಸಿ ಜಾರಿಯಾಗಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದೀಗ ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಬೆದರಿಕೆ ಹಾಕಿದೆ. ಎನ್‌ಆರ್‌ಸಿ ಜಾರಿ ಮಾಡಿ ಮುಸ್ಲಿಮರಿಗೆ ತೊಂದರೆ ಕೊಟ್ಟರೆ ಭಾರತವನ್ನೇ ಹೊತ್ತಿ ಉರಿಸುತ್ತೇವೆ ಎಂದು ಬೆದರಿಕೆ ಹಾಕಿದೆ. 

ಕೋಲ್ಕತಾ(ಏ.08) ಭಾರತದಲ್ಲಿ ಪ್ರಧಾನಿ ಮೋದಿಯ 10 ವರ್ಷದ ಆಡಳಿತದಲ್ಲಿ ಕೆಲ ಮಹತ್ವದ ನಿರ್ಧಾರಗಳು ನಡೆದಿದೆ. ಈ ಪೈಕಿ ಆರ್ಟಿಕಲ್ 370 ರದ್ದು, ತ್ರಿವಳಿ ತಲಾಕ್ ನಿಷೇಧ, ಸಿಎಎ ಜಾರಿ ಸೇರಿದಂತೆ ಕೆಲವು ಪ್ರಮುಖವಾಗಿದೆ. ಇದರ ಜೊತೆಗೆ ಎನ್ಆರ್‌ಸಿ ಕೂಡ ಭಾರಿ ಚರ್ಚೆಯಾಗಿದೆ. ಪ್ರಧಾನಿ ಮೋದಿ ಮೂರನೇ ಅವಧಿಯಲ್ಲಿ ಎನ್ಆರ್‌ಸಿ ಜಾರಿಯಾಗಲಿದೆ ಎಂದು ಬಿಜೆಪಿ ಆತ್ಮವಿಶ್ವಾಸದಿಂದ ಹೇಳಿಕೊಂಡಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಸರ್ವೆಗಳು ಮೂರನೇ ಬಾರಿಗೆ ಮೋದಿ ಸರ್ಕಾರ ಆಡಳಿತ ನಡೆಸಲಿದೆ ಎಂದು ಭವಿಷ್ಯ ನುಡಿಯುತ್ತಿದೆ. ಹೀಗಾಗಿ ಎನ್ಆರ್‌ಸಿ ಜಾರಿ ಖಚಿತ ಅನ್ನೋ ಮಾತುಗಳು ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಕೇಂದ್ರ ಸಚಿವ ಶಂತನು ಠಾಕೂರ್‌ಗೆ ಬೆದರಿಕೆ ಹಾಕಿದೆ. ಪಶ್ಚಿಮ ಬಂಗಾಳದಲ್ಲಿ ಎನ್ಆರ್‌ಸಿ ಜಾರಿಯಾದರೆ ಬಂಗಾಳ ಮಾತ್ರವಲ್ಲ ಇಡೀ ಭಾರತಕ್ಕೆ ಬೆಂಕಿ ಇಡುತ್ತೇವೆ ಎಂದು ಎಚ್ಚರಿಸಿದೆ.

ಕೇಂದ್ರದ ರಾಜ್ಯ ಖಾತೆ ಸತಿವ ಶಂತನು ಠಾಕೂರ್‌ಗೆ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಪತ್ರದ ಮೂಲಕ ಬೆದರಿಕೆ ಹಾಕಿದೆ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮ್ ಸಮುದಾಯಕ್ಕೆ ತೊಂದರೆ ಕೊಟ್ಟರೆ ಲಷ್ಕರ್ ಪ್ರತೀಕಾರ ತೀರಿಸಲಿದೆ. ಬಂಗಾಳ ಮಾತ್ರವಲ್ಲ, ಇಡೀ ದೇಶವನ್ನೇ ಉರಿಸುತ್ತೇವೆ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ಶ್ರೀರಾಮ ಹೇಳಿಲ್ಲ, ಚುನಾವಣೆಗೂ ಮೊದಲು ಬಿಜೆಪಿಯಿಂದ ಗಲಭೆ ಸೃಷ್ಟಿ, ಮಮತಾ ಬ್ಯಾನರ್ಜಿ ವಾಗ್ದಾಳಿ!

ಶಂತನು ಠಾಕೂರ್ ಇತ್ತೀಚೆಗೆ ಟಿಎಂಸಿ ನಾಯಕರಿಗೆ ನೇರ ಸವಾಲು ಹಾಕಿದ್ದರು. ಗೂಂಡಾಗಳಂತೆ ವರ್ತಿಸುವ ಟಿಎಂಸಿ ಕಾರ್ಯಕರ್ತರಿಗೆ ಪೌರತ್ವ ನೀಡುವುದಿಲ್ಲ ಎಂದು ಬೆದರಿಸಿದ್ದರು. ನಿಮ್ಮನ್ನು ಮಮತಾ ಬ್ಯಾನರ್ಜಿ ಕಾಪಾಡುತ್ತಾರೋ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಲಷ್ಕರ್ ಇ ತೈಬಾ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿದೆ.

ಶಂತನು ಹಾಗೂ ಟಿಎಂಸಿ ನಡುವೆ ನೇರಾನೇರಾ ಪೈಪೋಟಿ ಇದೆ. ಈಗಾಗಲೇ ಹಲವು ಬಾರಿ ಶಂತನು ಠಾಕೂರ್ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ವಾಗ್ವಾದಗಳು ನಡೆದಿದೆ. ಈ ಘಟನೆಗಳ ಬೆನ್ನಲ್ಲೇ ಶಂತನು ಠಾಕೂರ್‌ಗೆ ಬೆದರಿಕೆ ಪತ್ರ ಬಂದಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ಏರತೊಡಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ವೋಟ್ ಶೇರ್ ಹೆಚ್ಚಿಸಲಿದೆ ಅನ್ನೋ ಸಮೀಕ್ಷಾ ವರದಿಗಳು ಟಿಎಂಸಿ ನಿದ್ದೆಗೆಡಿಸಿದೆ ಎಂದೇ ಹೇಳಲಾಗುತ್ತಿದೆ.

ಲೋಕ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಂ.1 ಪಕ್ಷವಾಗಲಿದೆ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್