Asianet Suvarna News Asianet Suvarna News

ಶ್ರೀರಾಮ ಹೇಳಿಲ್ಲ, ಚುನಾವಣೆಗೂ ಮೊದಲು ಬಿಜೆಪಿಯಿಂದ ಗಲಭೆ ಸೃಷ್ಟಿ, ಮಮತಾ ಬ್ಯಾನರ್ಜಿ ವಾಗ್ದಾಳಿ!

ಶ್ರೀರಾಮ ಗಲಭೆ ಸೃಷ್ಟಿಸಲು ಎಲ್ಲೂ ಹೇಳಿಲ್ಲ. ಆದರೆ ಶ್ರೀರಾಮನ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತದ್ದಂತೆ ಗಲಭೆ ಸೃಷ್ಟಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದೀಗ ಮಮತಾ ಹೇಳಿಕೆ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ.
 

BJP plan to create riot in West bengal 2 days before first phase of Lok sabha election 2024 ckm
Author
First Published Apr 7, 2024, 7:34 PM IST

ಕೋಲ್ಕತಾ(ಏ.07)  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಕೋಲಾಹ ಸೃಷ್ಟಿಯಾಗಿದೆ. ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಲೋಕಸಭಾ ಚುನಾವಣೆಯಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ಹವಣಿಸುತ್ತಿದೆ ಎಂದಿದ್ದಾರೆ. ಶ್ರೀರಾಮ ಗಲಭೆ, ಹಿಂಸಾಚಾರವನ್ನು ಹೇಳಿಲ್ಲ. ಆದರೆ ಬಿಜೆಪಿ ಮಾಡುತ್ತಿದೆ. ಇದೀಗ ರಾಷ್ಟ್ರೀಯ ತನಿಖಾ ದಳವನ್ನು ಬಂಗಾಳಕ್ಕೆ ಕಳುಹಿಸಿ ಗಲಭೆ ಸೃಷ್ಟಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಎಪ್ರಿಲ್ 19ಕ್ಕೆ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕೂ ಎರಡೂ ದಿನ ಮೊದಲು ಅಂದರೆ ಏಪ್ರಿಲ್ 17ರಂದು ಬಿಜೆಪಿ ಹಿಂಸಾಚರ ಸೃಷ್ಟಿಸಲಿದೆ. ಈ ಮೂಲಕ ಭಾರಿ ಷಡ್ಯಂತ್ರಕ್ಕೆ ಬಿಜೆಪಿ ಪ್ಲಾನ್ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಶ್ರೀರಾಮ ಈ ರೀತಿ ಗಲಭೆ ಸಷ್ಟಿಸಲು ಹೇಳಿಲ್ಲ ಆದರೆ ಶ್ರೀರಾಮನ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ಗಲಭೆ ಸೃಷ್ಟಿ ಮಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಾಂಬ್ ಬ್ಲಾಸ್ಟ್‌ ಪ್ರಕರಣದ ತನಿಖೆಗೆ ಬಂದ ಎನ್‌ಐಎ ಅಧಿಕಾರಿಗಳ ವಿರುದ್ಧವೇ ಲೈಂಗಿಕ ಕಿರುಕುಳ ಕೇಸ್

2022ರ ಬಾಂಬ್ ಸ್ಫೋಟದ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಪೂರ್ವ ಮಿಡ್ನಾಪುರ್ ವಲಯಕ್ಕೆ ದಾಳಿ ಮಾಡಿದ್ದರು. ಟಿಎಂಸಿ ನಾಯಕನ ಮನೆ ಮೇಲೆ ರೇಡ್‌ಗೆ ಮುಂದಾದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಷ್ಟೇ ಅಲ್ಲ ಎನ್ಐಎ ಅಧಿಕಾರಿಗಳ ಮೇಲೆ ಮಹಿಳಾ ಕಿರುಕುಳ ಪ್ರಕರಣ ಕೂಡ ದಾಖಲಾಗಿದೆ. ಈ ಘಟನೆ ಉಲ್ಲೇಖಿಸಿ ಮಾತನಾಡಿದ ಮಮತಾ ಬ್ಯಾನರ್ಜಿ,  ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಗಲಭೆ ಸೃಷ್ಟಿಸುತ್ತಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ  ಚುನಾವಣೆಗೆ ಕೆಲ ದಿನಗಳಿರುವಾಗಲೇ ಗಲಭೆ ಸೃಷ್ಟಿಸುತ್ತಿದೆ. ಈ ಮೂಲಕ ಜನರಲ್ಲಿ ಭಯದ ವಾತಾವಣರ ಸೃಷ್ಟಿ ಮಾಡುತ್ತಿದೆ. ಜೊತೆಗೆ ಬಿಜೆಪಿ ಅಕ್ರಮವಾಗಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  

 

 

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕೂಡ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಕುತಂತ್ರ ಬಯಲಿಗೆಳೆಯುತ್ತೇವೆ ಎಂದಿದ್ದಾರೆ. ಚುನಾವಣೆ ಬಳಿಕ ಬಿಜೆಪಿ ಷಡ್ಯಂತ್ರಗಳು ಬಯಲಾಗಲಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳ: ಟಿಎಂಸಿ ಫೈರ್‌ ಬ್ರಾಂಡ್‌ ಮಹುವಾಗೆ ರಾಜಮಾತೆ ಸವಾಲು..!

Follow Us:
Download App:
  • android
  • ios