ನವದೆಹಲಿ(ಜು.17): ಒಂದು ವೇಳೆ ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು 1 ಕೋಟಿಗೆ ಮುಕ್ತಾಯಗೊಂಡರೆ ಅದು ನಮ್ಮ ಅದೃಷ್ಟ. ಆದರೆ, ಕೊರೋನಾ ಸೋಂಕಿತರ ಸಂಖ್ಯೆ ಇಷ್ಟಕ್ಕೇ ಸೀಮಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಅಪೋಲೋ ಆಸ್ಪತ್ರೆಗಳ ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶೋಬನಾ ಕಮಿನೇನಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಂಗ್ಲಿಷ್‌ ವೆಬ್‌ಸೈಟ್‌ವೊಂದಕ್ಕೆ ಸಂದರ್ಶನ ನೀಡಿದ ಅವರು, ‘ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಏರಿಕೆ ಆಗಿ ಇಳಿಕೆಯಾಗಬೇಕಿತ್ತು. ಆದರೆ, ಸೋಂಕು ಹೆಚ್ಚು ಮಂದಿಗೆ ವ್ಯಾಪಿಸುತ್ತಿದೆ. ಸೋಂಕು ಇದೇ ರೀತಿ ಏರಿಕೆಯಾದರೆ ಅದರ ನಿಯಂತ್ರಣ ದೊಡ್ಡ ಸವಾಲಾಗಿದೆ. ತಜ್ಞರ ಪ್ರಕಾರ ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣ 80 ಲಕ್ಷ ತಲುಪಬಹುದು ಎಂದು ಹೇಳಲಾಗುತ್ತಿದೆ. ಆದರೆ, ನನ್ನ ಪ್ರಕಾರ 1 ಕೋಟಿಯಲ್ಲಿ ಕೊರೋನಾ ಪ್ರಕರಣಗಳು ಮುಕ್ತಾಯವಾದರೂ ನಾವು ಅದೃಷ್ಟಶಾಲಿಗಳು’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನಿನ್ನೆ 4169 ಕೇಸ್‌: 1 ವಾರದಲ್ಲಿ 549 ಬಲಿ!

ಇದೇ ವೇಳೆ ಕೊರೋನಾ ಪರಿಸ್ಥಿತಿಯ ಲಾಭಕ್ಕೆ ಯತ್ನಿಸುತ್ತಿರುವ ಕೆಲ ನರ್ಸಿಂಗ್‌ಹೋಮ್‌ ಮತ್ತು ಆಸ್ಪತ್ರೆಗಳು, ಚಿಕಿತ್ಸೆಗೆ ಹೆಚ್ಚಿನ ದರ ವಿಧಿಸುತ್ತಿವೆ. ಹೀಗಾಗಿ, ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಸಮಾಲೋಚಿಸಿ ಚಿಕಿತ್ಸಾ ವೆಚ್ಚಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.