ಮುಂಬೈ (ಮೇ 08) ಕೊರೋನಾ ನಿಭಾಯಿಸಲು ಕೇಂದ್ರ ಸರ್ಕಾರ ನಿರಂತರ ಹೋರಾಟ ಮಾಡಿಕೊಂಡೆ ಬಂದಿದೆ.   ಕೊರೋನಾ ನಿರ್ವಹಣೆಗೆ ಹೊರದೇಶಗಳು ಸಹಾಯ ಸಹಕಾರ ನೀಡಲು ಮುಂದೆ ಬರುತ್ತಿವೆ ಆದರೆ ಮೋದಿ ಸರ್ಕಾರ ಅದನ್ನು ಪಡೆದುಕೊಳ್ಳಲು ಸಿದ್ಧವಿಲ್ಲ. ಇನ್ನೊಂದು ಕಡೆ ಬಹುಕೋಟಿಯ ಸೆಂಟ್ರಲ್  ವಿಸ್ಟಾ ಯೋಜನೆಯನ್ನು ನಿಲ್ಲಿಸಲು ಹಿಂದೆ ಮುಂದೆ ನೋಡುತ್ತಿದೆ.  ಭಾರತ ಇಂದು ಈ ಸ್ಥಿತಿಯಲ್ಲಿದೆ ಎನ್ನುವುದಕ್ಕೆ ನೆಹರು ಮತ್ತು ಗಾಂಧಿ ಕುಟುಂಬಗಳೇ ಕಾರಣ ... ಹೀಗೆ ಹೇಳಿದ್ದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ. 

ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಹಿಂದಿನ ಪ್ರಧಾನಿಗಳು ರೂಪಿಸಿದ ಯೋಜನೆ ಭಾರತವನ್ನು ಕಾಪಾಡುತ್ತಿದೆ ಎಂದು ಠಾಕ್ರೆ ಹೇಳಿದ್ದಾರೆ.

ಕೊಟ್ಟ ಸಹಾಯ ನೆನೆದು ನಿಮ್ಮ ಜತೆ ನಾವಿದ್ದೇವೆ ಎಂದ ಯುರೋಪಿಯನ್ ನಾಯಕರು

ಭಾರತದ ಕೊರೋನಾ ಬಗ್ಗೆ ಯುನಿಸೆಫ್ ಆತಂಕ ವ್ಯಕ್ತಪಡಿಸಿದೆ.  ಶ್ರೀಲಂಕಾ, ನೇಪಾಳ, ಮಯನ್ಮಾರ್  ಕೊರೋನಾ ಹೋರಾಟಕ್ಕೆ ಸಹಕಾರ ನೀಡಿವೆ.  ಬಿಜೆಪಿ ಮಾತ್ರ ಆತ್ಮ ನಿರ್ಭರ ಭಾರತ ಎಂದು  ಹೇಳುತ್ತಾ ದಿನ ಕಳೆಯುತ್ತಿದೆ ಎಂದು ಆರೋಪಿಸಿದ್ದಾರೆ. 

ಬಡ ರಾಷ್ಟ್ರಗಳು ಸಹಾಯ ಮಾಡುತ್ತಿದ್ದರೆ ಮೋದಿ ಸರ್ಕಾರ ಮಾತ್ರ ಇಪ್ಪತ್ತು ಸಾವಿರ ಕೋಟಿ ರೂ. ಯೋಜನೆ ಹಿಂದಕ್ಕೆ ಪಡೆಯಲು ಸಿದ್ಧರಿಲ್ಲ. ಇದರ ಹಿಂದೆ ಇರುವ ಕಾರಣ ಏನು ಎಂದು ಪ್ರಶ್ನೆ ಮಾಡಿದ್ದಾರೆ.