ನವದೆಹಲಿ (ಮೇ 08)  ಪ್ರಧಾನಿ ನರೇಂದ್ರ ಮೋದಿ ಶನಿವಾರ ಯುರೋಪಿಯನ್ ಕೌನ್ಸಿಲ್ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು.  ವರ್ಷುವಲ್ ಶರಂಗಸಭೆಯನ್ನು ಪೋರ್ಚುಗಲ್ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಆಯೋಜಿಸಿದ್ದರು.

ಪೋರ್ಚುಗೀಸ್ ಪ್ರಧಾನಿ, ಎಲ್ಲಾ ಇಯು ನಾಯಕರ ಸಮ್ಮುಖದಲ್ಲಿ ತಮ್ಮ ಸ್ಥಾನವನ್ನು ಒಸಿಐ (ಸಾಗರೋತ್ತರ ನಾಗರಿಕ)  ಎಂದು ಉಲ್ಲೇಖಿಸಿಕೊಂಡರು. ಶೃಂಗಸಭೆಯಲ್ಲಿ ಭಾಗವಹಿದಿದ್ದ ಬೆಲ್ಜಿಯಂನ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಅವರು ಪ್ರಧಾನಿ ಮೋದಿ ಅವರಿಗೆ ಕೆಮ್ ಚೋ ಎಂದು ಸ್ವಾಗತಿಸಿದ್ದು ವಿಶೇಷ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನೆರವಾದ ಭಾರತವನ್ನು ಎಲ್ಲ ನಾಯಕರು ಕೊಂಡಾಡಿದರು.  ಭಾರತಕ್ಕೆ ನಾವು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂಬುದನ್ನು ತಿಳಿಸಿದರು.

ಯುರೋಪಿನ ರಾಷ್ಟ್ರಗಳ ನಾಯಕರೊಂದಿಗೆ ಮೋದಿ ಮಾತನಾಡಿದರು.  COVID ಸಂಬಂಧಿತ ಚಿಕಿತ್ಸೆಗಳು ಮತ್ತು ಲಸಿಕೆಗಳಿಗಾಗಿ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳನ್ನು (ಟಿಆರ್‍ಪಿಎಸ್) ಮನ್ನಾ ಮಾಡಲು ಒತ್ತಾಯಿಸಬೇಕು ಎಂದು ಮೋದಿ ಕೇಳಿಕೊಂಡರು.

ಕೊರೋನಾ ಪೀಡಿತ ರಾಜ್ಯಗಳ ಸಿಎಂಗಳ ಜತೆ ಮೋದಿ ಮಾತು

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಪಿಎಂ ಮೋದಿಯವರನ್ನು ಶ್ಲಾಘಿಸಿ, ನಾವು ಯುರೋಪಿಯನ್ ಯೂನಿಯನ್ ಫ್ಲಾಗ್ ಆಫ್ ಇಂಡಿಯಾದ ಕಾರ್ಯತಂತ್ರದ ಸಹಭಾಗಿತ್ವದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದೇವೆ ಎಂದು ತಿಳಿಸಿದರು.

ಹೊಸ ಪಾಲುದಾರಿಕೆ; ಇಯು ಕೌನ್ಸಿಲ್ ಅಧ್ಯಕ್ಷರು ಭಾರತದೊಂದಿಗೆ  ಹೊಸ ಒಪ್ಪಂದಗಳ ಸೂತ್ರ ಪ್ರಕಟಿಸಿದರು.ವ್ಯಾಪಾರ, ಹೂಡಿಕೆ ಮತ್ತು ಭೌಗೋಳಿಕ ಸೂಚನೆಗಳ ಕುರಿತು ಮೂರು ಒಪ್ಪಂದಗಳ ಕುರಿತು ಮಾತುಕತೆ  ನಡೆದಿದೆ.  ಸಂಪರ್ಕ ಸಾಧನ- ಮಾನವ ಹಕ್ಕುಗಳ ಸಂವಾದ - ಇಂಡೋ-ಪೆಸಿಫಿಕ್ ಮತ್ತು ಅದರಾಚೆ ಭದ್ರತಾ ಸಹಕಾರದಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡುವ ಬದ್ಧತೆಗೆ ಒಳಗಾದರು. ಕೊರೋನಾ  ಹೋರಾಟದಲ್ಲಿ ಭಾರತಕ್ಕೆ ಯುರೋಪಿಯನ್ ರಾಷ್ಟ್ರಗಳು ಎಲ್ಲ ನೆರವು ನೀಡಲಿವೆ ಎಂದು ತಿಳಸಿದರು. 

"