ನವದೆಹಲಿ(ಆ.29):  ಮಹಿಳಾ ಸಬಲೀಕರಣ ವಿಚಾರದಲ್ಲಿ ಭಾರತ ಸರ್ಕಾರ ಹಲವು ಯೋಜನೆಗಳು ಯಶಸ್ವಿಯಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿದೆ. ಮುಂದುವರಿದ ಭಾಗವಾಗಿ ಭಾರತೀಯ ಸೇನೆ, ವಾಯುಪಡೆ, ನೌಕಾಪಡೆಗಳಲ್ಲೂ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಭದ್ರತಾ ವ್ಯವಸ್ಥೆಯಲ್ಲಿ ಮಾತ್ರವಲ್ಲ, ಕಾನೂನು ಪಾಲನೆಯಾದ ಪೊಲೀಸ್ ವಿಭಾಗದಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಮಹಿಳಾ ಸಬಲೀಕರಣ ಕುರಿತು ವಿಶ್ವ ಸಂಸ್ಥೆ ಹೊಸ ವಿಧೇಯಕ ಪಾಸ್ ಮಾಡಿದೆ. ಇದಕ್ಕೆ ಭಾರತ ಸಂಪೂರ್ಣ ಬೆಂಬಲ ನೀಡೋ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ.

ಮೊನ್ನೇ ಅಷ್ಟೇ ಬಿಜೆಪಿ ಸೇರಿದ್ದ ಮಾಜಿ IPS ಅಣ್ಣಾಮಲೈ ವಿರುದ್ಧ ಕೇಸ್ ಬುಕ್.

ವಿಶ್ವ ಸಂಸ್ಥೆಯ ಭಾರತದ ಪರ್ಮನೆಂಟ್ ಮಿಶನ್ ಭದ್ರತಾ ಮಂಡಳಿಯ ಶಾಂತಿಪಾಲನಾ ಕಾರ್ಯಚರಣೆಗಳಲ್ಲಿ ಮಹಿಳಾ ಸಿಬ್ಬಂದಿಯ ಪೂರ್ಣ ಹಾಗೂ ಪರಿಣಾಮಕಾರಿ ಭಾಗವಹಿಸುವಿಕೆ ಕುರಿತು ವಿಶ್ವ ಸಂಸ್ಥೆ ಹೊಸ ರಸಲ್ಯೂಶನ್ ಪಾಸ್ ಮಾಡಿದೆ. ಈ ರಸಲ್ಯೂಶನ್‌ಗೆ ಭಾರತ ಸಂಪೂರ್ಣ ಬೆಂಬಲ ನೀಡಿದೆ.  ಇಂಡೋನೇಷ್ಯಾ ಮಂಡಿಸಿದ ನಿರ್ಣಯವನ್ನು  ಭಾರತ ಬೆಂಬಲಿಸುತ್ತದೆ ಎಂದಿದೆ.

2019-20ರ ಕೌನ್ಸಿಲ್ ಸಭೆಯಲ್ಲಿ ಶಾಂತಿಪಾಲನೆ ಇಂಡೋನೇಷ್ಯಾದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ವಿಶ್ವ ಸಂಸ್ಥೆಯಲ್ಲಿ ಇಂಡೋನೇಷ್ಯಾ ಮೊದಲ ಅಧ್ಯಕ್ಷತೆ ಪಡೆದಾಗ ಶಾಂತಿಪಾಲನೆಗೆ ಮಹಿಳೆಯರಿಗೆ ಆದ್ಯತೆ ನೀಡುವ ಕರಡು ನಿರ್ಣಯವನ್ನು ಮುಂದಿಟ್ಟಿತ್ತು.  ಇದೀಗ ವಿಶ್ವ ಸಂಸ್ಥೆ ಈ ಕರಡು ನಿರ್ಣಯದ ಮೇಲೆ ರಸಲ್ಯೂಶನ್ ಪಾಸ್ ಮಾಡಿದೆ. ಇದಕ್ಕೆ ಭಾರತ ಸಹಮತ ವ್ಯಕ್ತಪಡಿಸಿದೆ.