ಒಡಿಶಾ(ಅ.20): ಭಾರತದ ಡಿಫೆನ್ಸ್ ರೀಸರ್ಚ್ ಅ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್(DRDO) ಒಂದರ ಮೇಲೊಂದರಂತೆ ಕ್ಷಿಪಣಿ ಅಭಿವೃದ್ಧಿ ಪಡಿಸಿ ಪರೀಕ್ಷೆ ನಡೆಸುತ್ತಿದೆ. ಕಳೆದರಡು ತಿಂಗಳಲ್ಲಿ DRDO 12 ಅತ್ಯಾಧುನಿಕ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ ಸ್ಟಾಂಡ್ ಆಫ್ ಆ್ಯಂಟಿ ಟಾಕ್ ಮಿಸೈಲ್ SANT ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ.

ಶತ್ರು ರಾಷ್ಟ್ರದಲ್ಲಿ ನಡುಕ: 2 ತಿಂಗಳಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ಕ್ಷಿಪಣಿ ಲಿಸ್ಟ್!

ಒಡಿಶಾ ಕರಾವಳಿ ತೀರದಲ್ಲಿ ಅತ್ಯಾಧುನಿಕ SANT ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದೆ. ಈ ಕ್ಷಿಪಣಿ ಶೀಘ್ರದಲ್ಲೇ ಭಾರತೀಯ ವಾಯುಸೇನೆಯನ್ನು ಅಧೀಕೃತವಾಗಿ ಸೇರಿಕೊಳ್ಳಲಿದೆ. ಇತ್ತೀಚಗೆ ಭಾರತೀಯ ವಾಯುಸೇನೆ, ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಮಾಡಿದ DRDO ಶುಭಕೋರಿತ್ತು.

ಕಳೆದೆರಡು ತಿಂಗಳಲ್ಲಿ DRDO ಸ್ಟಾಂಡ್ ಆಫ್ ಆ್ಯಂಟಿ ಟಾಕ್ ಮಿಸೈಲ್(SANT)ಕ್ಷಿಪಣಿ ಸೇರಿದಂತೆ ಒಟ್ಟು 12 ಮಿಸೈಲ್ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.  

ಹೈಪರ್‌ಸಾನಿಕ್‌ ಟೆಕ್ನಾಲಜಿ ಡೆಮೊನ್‌ಸ್ಪ್ರೇಟರ್‌ ವೆಹಿಕಲ್‌, ಶರವೇಗದೊಂದಿಗೆ ವೈಮಾನಿಕ ದಾಳೀ ಮಾಡುವ ಅಭ್ಯಾಸ್,  ಟ್ಯಾಂಕ್‌ ಹೊಡೆದುರುಳಿಸುವ ಲೇಸರ್‌ ನಿರ್ದೇಶಿತ ಕ್ಷಿಪಣಿ,  ಪೃಥ್ವಿ-2 ಕ್ಷಿಪಣಿಯ ರಾತ್ರಿ ಪರೀಕ್ಷೆ,  ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ,  ಲೇಸರ್‌ ನಿರ್ದೇಶಿತ ಆ್ಯಂಟಿ ಟ್ಯಾಂಕ್‌ ಕ್ಷಿಪಣಿ,  ಶೌರ್ಯ ಸೂಪರ್‌ಸಾನಿಕ್‌ ಕ್ಷಿಪಣಿ,  ಕ್ಷಿಪಣಿ ಸಹಾಯದ ಟಾರ್ಪೆಡೋ ಹಾಗೂ ರಾಡಾರ್‌ ಧ್ವಂಸಗೊಳಿಸುವ ರುದ್ರಂ 1 ಸೇರಿದಂತೆ 12 ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ.