ಶತ್ರು ರಾಷ್ಟ್ರದಲ್ಲಿ ನಡುಕ: 2 ತಿಂಗಳಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ಕ್ಷಿಪಣಿ ಲಿಸ್ಟ್!
ಲಡಾಖ್ ಗಡಿ ಸಮಸ್ಯೆ, ಪಾಕಿಸ್ತಾನ ಉಗ್ರರ ನುಸುಳುವಿಕೆ ಸೇರಿದಂತೆ ಭಾರತದ ಗಡಿ ಉದ್ವಿಘ್ನವಾಗಿದೆ. ಎದುರಾಳಿಗಳಿಗೆ ತಕ್ಕ ತಿರುಗೇಟು ನೀಡುತ್ತಿರುವ ಭಾರತೀಯ ಸೇನೆ, ತನ್ನ ಸಾಮರ್ಥ್ಯ ಬಲಪಡಿಸುತ್ತಿದೆ. ರಾಫೆಲ್ ಯುದ್ಧವಿಮಾನ ಸೇರಿದಂತೆ ಹಲವು ಫೈಟರ್ ಜೆಟ್ ಭಾರತೀಯ ಸೇನೆ ಕೈಸೇರಿದೆ. ಇದರ ಜೊತೆಗೆ DRDO ಅಭಿವೃದ್ಧಿ ಪಡಿಸಿರುವ ಕ್ಷಿಪಣಿಗಳ ಪರೀಕ್ಷೆ ಯಶಸ್ವಿಯಾಗಿದೆ. ಕಳೆದ 2 ತಿಂಗಳಲ್ಲಿ ಭಾರತ 11 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ 11 ಕ್ಷಿಪಣಿಗಳ ಮಾಹಿತಿ ಇಲ್ಲಿದೆ.
ಒಡಿಶಾದ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ಲಾಂಚ್ ಕಾಂಪ್ಲೆಕ್ಸ್‌ನಿಂದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟೆಡ್ ವೆಹಿಕಲ್ (HSTDV) ಪರೀಕ್ಷೆಯನ್ನು DRDO ಯಶಸ್ವಿಯಾಗಿ ನಡೆಸಿತು. ಸೆಪ್ಟೆಂಬರ್ 7 ರಂದು ಪರೀಕ್ಷೆ ನಡೆಸಲಾಗಿತ್ತು.
ಸೆ.22 ರಂದು ABHYAS ಹೈ ಸ್ಪೀಡ್ ಎಕ್ಸಾಂಪಡೇಬಲ್ ಏರಿಯಲ್ ಟಾರ್ಗೆಟ್(HEAT) ಪರೀಕ್ಷೆಯನ್ನು DRDO ಯಶಸ್ವಿಯಾಗಿ ನಡೆಸಿತು
ಸೆ. 23 ರಂದು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ MBT ಅರ್ಜುನ್ (ACC&S)) ಲೇಸರ್-ಗೈಡೆಡ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು DRDO ಅಭಿವೃದ್ಧಿಪಡಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸಿತು.
ಸೆ.23ರಂದು ಪೃಥ್ವಿ ಮಿಸೈಲ್ -II ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು. ಗರಿಷ್ಠ 350 ಕೀಲೋಮೀಟರ್ ದೂರದ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ.
ಸೆ.30 ರಂದು DRDO ಅಭಿವೃದ್ಧಿ ಪಡಿಸಿದ ಬ್ರಹ್ಮೋಸ್ ಲ್ಯಾಂಡ್ ಅ್ಯಟಾಕ್ ಕ್ರೂಸ್ ಮಿಸೈಲ್((LACM) ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು. ಒಡಿಶಾದ ಬಾಲಸೊರ್‌ನಲ್ಲಿ ಈ ಪರೀಕ್ಷೆ ನಡೆಸಲಾಯಿತು.
ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಮಿಸೈಲ್ ಪರೀಕ್ಷೆಯನ್ನು ಅಕ್ಟೋಬರ್ 1 ರಂದು ನಡೆಸಲಾಯಿತು. ಈ ಪರೀಕ್ಷೆ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ DRDO ಹಾಗೂ ಭಾರತೀಯ ಸೇನೆಯನ್ನು ಅಭಿನಂದಿಸಿದರು.
ಅಕ್ಟೋಬರ್ 3 ರಂದು ಸೂಪರ್ ಸಾನಿಕ್ ಶಾರ್ಯ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು 700 ರಿಂದ 1000 ಕಿಲೋಮೀಟರ್ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಸೂಪರ್ ಸಾನಿಕ್ ಕ್ಷಿಪಣಿಗೆ ಸಹಾಯಕ ಟಾರ್ಪೆಡೊ( (SMART)ಪರೀಕ್ಷೆಯನ್ನು ಒಡಿಶಾ ಕಡಲ ತೀರದಲ್ಲಿ ನಡೆಸಲಾಯಿತು. ಅಕ್ಟೋಬರ್ 5 ರಂದು ಈ ಪರೀಕ್ಷೆ ನಡೆಸಲಾಯಿತು.
ಆ್ಯಂಟಿ ರೇಡಿಯೇಶನ್ ಮಿಸೈಲ್ ರುದ್ರಂ1 ಕ್ಷಿಪಣಿಯನ್ನು ಅಕ್ಟೋಬರ್ 9 ರಂದು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ರೇಡಾರ್ ಕಣ್ತಪ್ಪಿಸಿ ಎದುರಾಳಿಗಳನ್ನು ಹೊಡೆದುರುಳಿಸುವ ಶಕ್ತಿ ಈ ಮಿಸೈಲ್‌ಗಿದೆ.
DRDO ಅಭಿವೃದ್ಧಿ ಪಡಿಸಿರುವ ಮೇಡ್ ಇನ್ ಇಂಡಿಯಾ ಸೂಪರ್ ಸಾನಿಕ್ ಮಿಸೈಲ್ ಕ್ಷಿಪಣಿಯನ್ನು ಅಕ್ಟೋಬರ್ 18 ರಂದು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ.