ಭಾರತವನ್ನು ಎರಡು ಭಾಗ ಮಾಡಿ ಒಂದು ಭಾಗ ಕ್ರೈಸ್ತರಿಗೆ ನೀಡಬೇಕು ಮತ್ತೊಂದು ಭಾಗ ಉಳಿದವರಿಗೆ, ಕ್ರೈಸ್ತರ ಭಾಗ ಪ್ರತ್ಯೇಕ ರಾಷ್ಟ್ರ ಕ್ರೈಸ್ತ ಭಾರತ ಬೇಕು, ಪಾದ್ರಿ ತಲೆಕೆಟ್ಟ ಹೇಳಿಕೆ ಪರ ಹಲವರ ವಾದ ಆಂಧ್ರ ಪ್ರದೇಶ ಪಾದ್ರಿ ವಿವಾದಾತ್ಮಕ ಹೇಳಿಕೆಗೆ ಮತ್ತೊಂದೆಡೆ ಆಕ್ರೋಶ

ಅಮರಾವತಿ(ಆ.30): ಇತರ ದೇಶಗಳಿಗ ಹೋಲಿಸಿದರೆ ಅತೀ ಹೆಚ್ಚು ಸ್ವಾತಂತ್ರ್ಯವಿರುವುದು ಭಾರತದಲ್ಲಿ. ಇದೇ ಕಾರಣಕ್ಕೆ ವಿವಾದಾತ್ಮಕ ಹೇಳಿಕೆ, ಪ್ರಚೋದನೆಗಳು ಕೂಡ ಹೆಚ್ಚು. ಇದೀಗ ಅಮರಾವತಿಯ ಕ್ರಿಶ್ಚಿಯನ್ ಪಾದ್ರಿ ನೀಡಿದ ಹೇಳಿಕೆಗೆ ಪರ ವಿರೋಧ ವ್ಯಕ್ತವಾಗಿದೆ. ಉಪೇಂದ್ರ ಅನ್ನೋ ಪಾದ್ರಿ, ಭಾರತವನ್ನೇ ಇಬ್ಭಾಗ ಮಾಡಲು ಹೊರಟ್ಟಿದ್ದಾನೆ. ಅದರಲ್ಲಿ ಒಂದು ಭಾಗ ಕ್ರೈಸ್ತರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಉಗ್ರ ಸಂಘಟನೆ ಸೇರಿದ ಕೇರಳ ಮಹಿಳೆಯರನ್ನು ಭಾರತಕ್ಕೆ ಕರೆತರಲು ಹೈಕೋರ್ಟ್ ನಕಾರ!

ಬೈಬಲ್ ಒಪನ್ ಯುನಿವರ್ಸಿಟಿ ಇಂಟರ್‌ನ್ಯಾಶಲ್ ಸಂಸ್ಥೆಯ ಉಪ ನಿರ್ದೇಶಕ ಹಾಗೂ ಪಾದ್ರಿ ಉಪೇಂದ್ರ ಈ ತಲೆಕಟ್ಟ ಹೇಳಿಕೆ ನೀಡಿದ್ದಾನೆ. ಭಾರತವನ್ನು ಇಬ್ಬಾಗ ಮಾಡಿ ಒಂದು ಭಾಗ ಕ್ರೈಸ್ತರಿಗೆ ನೀಡಬೇಕು. ಕ್ರೈಸ್ತರಿಗೆ ನೀಡಿದ ಭಾಗ ಪ್ರತ್ಯೇಕ ರಾಷ್ಟ್ರ. ಅದು ಕ್ರೈಸ್ತ ಭಾರತ ಎಂದು ಹೇಳಿದ್ದಾನೆ. ಅಖಿಲ ಭಾರತ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್((AITCC)) ಪರವಾಗಿ ಪಾದ್ರಿ ಈ ಬೇಡಿಕೆ ಮುಂದಿಟ್ಟಿದ್ದಾನೆ.

Scroll to load tweet…

ಉಪೇಂದ್ರ ಪಾದ್ರಿ ಮಾತನಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಭಾರತ ಇಬ್ಬಾಗ ಮಾತ್ರವಲ್ಲ. ಒಂದು ಭಾಗದಲ್ಲಿ ಸಂಪೂರ್ಣ ಕ್ರೈಸ್ತರೇ ಇರಲಿದ್ದಾರೆ. ಮತ್ತೊಂದು ಭಾಗದ ತಂಟೆಗೆ ನಾವು ಬರುವುದಿಲ್ಲ. ನೀವೇನಾದರು ನಮಗೆ ಸಂಬಂಧವಿಲ್ಲ ಎಂದಿದ್ದಾನೆ.

ಏಕಾಏಕಿ ಪ್ರತ್ಯಕ್ಷವಾಯ್ತು ಶಿಲುಬೆ! ಚರ್ಚ್ ನಿರ್ಮಾಣಕ್ಕೆ ಸರ್ಕಾರಿ ಜಾಗದ ಮೇಲೆ ಕಣ್ಣು

ಹೇಳಿಕೆ ಜೊತೆ ಮತ್ತೊಂದು ದುರಂತ ಎಂದರೆ ಈ ವಿಡಿಯೋವನ್ನು ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದ SC ST ಹಕ್ಕುಗಳ ವೇದಿಕೆ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಸಂಸ್ಥೆಯಲ್ಲಿ ವಕೀಕಲು ಸೇರಿದಂತೆ ಹಲವು ಗಣ್ಯವ್ಯಕ್ತಿಗಳು ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದ ಹಕ್ಕುಗಳಿಗೆ ಹೋರಾಟ ನಡೆಸುವ ವೇದಿಕೆಯಾಗಿದೆ. ಈ ಟ್ವಿಟರ್ ಖಾತೆಯಲ್ಲಿ ಭಾರತ ಇಬ್ಬಾಗದ ವಿಡಿಯೋ ಹರಿಬಿಟ್ಟಿರುವುದು ಅತೀ ದೊಡ್ಡ ದುರಂತವಾಗಿದೆ.

ಪಾದ್ರಿ ಉಪೇಂದ್ರ ಮಹಾರಾಷ್ಟ್ರ ಹಾಗೂ ತೆಲಂಗಾಣದ ಆಖಿಲ ಭಾರತ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ. ಕ್ರೈಸ್ತ ಹುಡುಗಿಯರನ್ನು ಇತರ ಧರ್ಮದ ಯುವಕರು ಟಾರ್ಗೆಟ್ ಮಾಡಿದ್ದಾರೆ ಎಂದು ಇತ್ತೀಚೆಗೆ ಕೇರಳದ ಬಿಶಪ್ ಕ್ರೈಸ್ತ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತ ಇಬ್ಬಾಗ ಬೇಡಿಕೆಗಳು ಬಂದಿದೆ.

ಕ್ರೈಸ್ತ ಧರ್ಮಕ್ಕೆ ಬಂಜಾರ ಸಮುದಾಯ ಬಲವಂತದ ಮತಾಂತರ

ಪಾದ್ರಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ರೈಸ್ತ ಸಮುದಾಯ ಭಾರತದಲ್ಲಿ ಶಾಂತಿ, ಸೌಹಾರ್ಧತೆ ಹೆಸರಿನಲ್ಲಿ ಮತಾಂತರ ಮಾಡುತ್ತಲೇ ಇದೆ. ಕೆಲ ಸಮುದಾಯಕ್ಕೆ ಆರ್ಥಿಕ ನೆರವು, ಸಹಾಯ ಮಾಡಿ ವ್ಯವಸ್ಥಿತವಾಗಿ ಮತಾಂತರ ಮಾಡುತ್ತಿದ್ದಾರೆ. ಇದೀಗ ಕ್ರೈಸ್ತ ಪಾದ್ರಿಯ ಬಾಯಿಯಿಂದಲೆ ಅವರ ಉದ್ದೇಶ ಹೊರಬಿದ್ದಿದೆ. ಹೀಗಾಗಿ ಈ ರೀತಿಯ ಆಲೋಚನೆ ಕೂಡ ಬರಬಾರದು. ಅದಕ್ಕಾಗಿ ಕಠಿಣ ನಿಯಮ ಅಗತ್ಯ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.