Asianet Suvarna News Asianet Suvarna News

Flight Service | ಶೀಘ್ರ ಭಾರತ - ಸಿಂಗಾಪುರ ವಿಮಾನಯಾನ ಪುನರಾರಂಭ

  • ಕೋವಿಡ್‌ ಕಾರಣ ನಿಂತು ಹೋಗಿದ್ದ ಸಿಂಗಾಪುರ-ಭಾರತ ವಿಮಾನಯಾನ 
  • ಸಿಂಗಾಪುರ-ಭಾರತ ವಿಮಾನಯಾನ ನ.29ರಿಂದ ಪುನಾರಂಭವಾಗಲಿದೆ
India Singapore flights to resume from November 29 snr
Author
Bengaluru, First Published Nov 22, 2021, 7:46 AM IST

ಮುಂಬೈ (ನ.22): ಕೋವಿಡ್‌ (Covid) ಕಾರಣ ನಿಂತು ಹೋಗಿದ್ದ ಸಿಂಗಾಪುರ-ಭಾರತ (Singapore - India) ವಿಮಾನ ಯಾನ (Flight Service) ನ.29ರಿಂದ ಪುನಾರಂಭವಾಗಲಿದೆ. ನಿಗದಿತ ಪ್ರಯಾಣಿಕ ವಿಮಾನಗಳನ್ನು ಪುನರಾರಂಭಿಸುವ ಕುರಿತು ಸಿವಿಲ್‌ ಏವಿಯೇಷನ್‌ (civil Aviation) ಅಥಾರಿಟಿ ಆಫ್‌ ಸಿಂಗಾಪುರನೊಂದಿಗೆ ಭಾರತದ ನಾಗರಿಕ ವಿಮಾನ ಯಾನ ಸಚಿವಾಲಯ ಒಪ್ಪಂದ ಮಾಡಿಕೊಂಡಿವೆ. ನ.29ರಿಂದ ಚೆನ್ನೈ (chennai), ದೆಹಲಿ (Delhi) ಹಾಗೂ ಮುಂಬೈನಿಂದ (mumbai) ಪ್ರತಿದಿನ ಆರು ವಿಮಾನಗಳನ್ನು ಭಾರತ- ಸಿಂಗಾಪುರ ಪ್ರವಾಸಕ್ಕಾಗಿ ನಿಗದಿಪಡಿಸಲಾಗಿದೆ.

ಒಪ್ಪಂದದ ಪ್ರಕಾರ ವ್ಯಾಕ್ಸಿನೇಟೆಡ್‌ ಸಂಚಾರಿ ಲೇನ್‌ ಬಳಸಿ ಕ್ವಾರಂಟೈನ್‌ ರಹಿತ ವಿದೇಶ ಪ್ರಯಾಣ ಮಾಡಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಮಾನ್ಯತೆ ಪಡೆದ ಕೋವ್ಯಾಕ್ಸಿನ್‌ (Covaxin)  ಅಥವಾ ಕೋವಿಶೀಲ್ಡ್‌ ಲಸಿಕೆಯ (Covishield Vaccine) ಎರಡೂ ಡೋಸುಗಳನ್ನು ಪಡೆದವರು ಸಿಂಗಾಪುರ ಪ್ರವೇಶಿಸಬಹುದಾಗಿದೆ.

ಉತ್ತರ ಕರ್ನಾಟಕದ ಮೊದಲ ಕಾರ್ಗೊ ಸೇವೆ ಆರಂಭ :  ಕೃಷಿ ಉಡಾನ್‌ 2.0(Krishi UDAN 2.0) ಯೋಜನೆಯಡಿ ಸೇರ್ಪಡೆಯಾಗಿದ್ದ ಹುಬ್ಬಳ್ಳಿ ವಿಮಾನ(Hubballi Airport) ನಿಲ್ದಾಣದಲ್ಲಿ ಗ್ರಾಹಕರ ಸರಕು ಸಾಗಣೆ ಸೇವೆಯ ಯೋಜನೆ (Cargo) ಬುಧವಾರ ವಿದ್ಯುಕ್ತವಾಗಿ ಆರಂಭಿಸಲಾಗಿದೆ. 

ಉತ್ತರ ಕರ್ನಾಟಕದ(North Karnataka) ವೈಮಾನಿಕ ಕಾರ್ಗೋ ಸೇವೆ(Air Cargo Service) ಇದೇ ಮೊದಲನೆಯದಾಗಿದೆ. ಈ ಭಾಗದ ಕೃಷಿ ಉತ್ಪನ್ನಗಳ(Agricultural Products) ಸಾಗಾಟ, ವ್ಯಾಪಾರಕ್ಕೆ(Business) ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. 

ಹಳೆಯ ಟರ್ಮಿನಲ್‌ ಕಟ್ಟಡವನ್ನೇ ಸರಕು ಸಾಗಣೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ವ್ಯಾಪಾರ ಅಭಿವೃದ್ಧಿ ಮತ್ತು ಸಾಗಣೆ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಗತಿಗೆ ಇದು ಪೂರಕವಾಗಲಿದೆ ಎಂಬ ಆಶಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಟ್ವೀಟರ್‌ನಲ್ಲಿ(Twitter) ವ್ಯಕ್ತಪಡಿಸಿದ್ದಾರೆ. ಒಂದು ಸಾವಿರ ಚದುರ ಮೀಟರ್‌ ವಿಸ್ತಾರದಲ್ಲಿ ಕಾರ್ಗೋ ಸೇವೆ ಮುಂದುವರಿಯಲಿದ್ದು, ಒಂದು ಬಾರಿ 100 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಸರಕು ಸಾಗಿಸಬಹುದಾಗಿದೆ. ವಾರ್ಷಿಕವಾಗಿ 1500 ಮೆಟ್ರಿಕ್‌ ಟನ್‌ ನಷ್ಟು ಗೂಡ್ಸ್‌ ಗುರಿ ಹೊಂದಲಾಗಿದೆ. 

ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೆ ಕಟ್ಟಡವನ್ನು 46.27 ಲಕ್ಷ ವೆಚ್ಚದಲ್ಲಿ ಎಎಐ (Airports Authority of India) ಕಾರ್ಗೋ ಲಾಜಿಸ್ಟಿಕ್ಸ್‌ ಆ್ಯಂಡ್‌ ಅಲೈಡ್‌ ಸರ್ವೀಸಸ್‌ ಕಂಪನಿ ಲಿ. ಸಹಯೋಗದಲ್ಲಿ ಕಾರ್ಗೋ ಸೇವೆ ಆರಂಭವಾಗಿದೆ.

ಕೇಂದ್ರ ವಿಮಾನಯಾನ ಸಚಿವಾಲಯ ಈಚೆಗೆ ಕೃಷಿ ಉಡಾನ್‌ 2.0 ಯೋಜನೆಯಡಿ 53 ವಿಮಾನ ನಿಲ್ದಾಣಗಳನ್ನು(Airport) ಆಯ್ಕೆ ಮಾಡಿತ್ತು. ಅದರಲ್ಲಿ ಹುಬ್ಬಳ್ಳಿಯನ್ನು(Hubballi) ಕೂಡ ಸೇರ್ಪಡೆ ಮಾಡಲಾಗಿದೆ. ಕೈಗಾರಿಕಾ ಉತ್ಪನ್ನಗಳ ಸರಕು ಸಾಗಣೆಗೆ ಇದರಿಂದ ಉದ್ಯಮಿಗಳಿಗೆ ಸಾಕಷ್ಟು ನೆರವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ ಠಾಕರೆ ತಿಳಿಸಿದ್ದಾರೆ.

ಟಾಟಾ ಪಾಲಾದ ಏರ್‌ ಇಂಡಿಯಾ : 

 ಏರ್‌ ಇಂಡಿಯಾ (Air India) ಮಾರಾಟ ಪ್ರಕ್ರಿಯೆ ಸಂಬಂಧ ಟಾಟಾ ಸಮೂಹದ (Tata Group) ಜೊತೆಗೆ ಕೇಂದ್ರ ಸರ್ಕಾರ ಸೋಮವಾರ (ಅ .25) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅನ್ವಯ ಏರ್‌ ಇಂಡಿಯಾದ ಶೇ.100ರಷ್ಟು ಪಾಲು ಟಾಟಾ ಸಮೂಹಕ್ಕೆ ಹೋಗಲಿದೆ. ಅದಕ್ಕೆ ಬದಲಿಯಾಗಿ ಟಾಟಾ ಸಮೂಹ ಏರ್‌ ಇಂಡಿಯಾದ 15,300 ಕೋಟಿ ರು. ಸಾಲ ತೀರಿಸಲಿದೆ ಮತ್ತು ಸರ್ಕಾರಕ್ಕೆ 2700 ಕೋಟಿ ರು. ನಗದು ಹಣ ಪಾವತಿ ಮಾಡಲಿದೆ. ಅ.11ರಂದು ಏರ್‌ ಇಂಡಿಯಾದ ಶೇ.100ರಷ್ಟು ಶೇರುಗಳನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡುವುದಾಗಿ ಸರ್ಕಾರ ಹೇಳಿತ್ತು.

ಈ ಬಗ್ಗೆ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (Department of Investment and Public Asset Management) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ 'ಟಾಟಾ ಸನ್ಸ್‌ನೊಂದಿಗೆ ಸರ್ಕಾರವು ಇಂದು ಶೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ' ಎಂದು ತಿಳಿಸಿದ್ದಾರೆ . ಇದು 2003-04 ರಿಂದ ಮೊದಲ ಖಾಸಗೀಕರಣವಾಗಿದೆ. ಏರ್‌ಏಷ್ಯಾ ಇಂಡಿಯಾ (Air Asia India) ಮತ್ತು ವಿಸ್ತಾರಾ (Vistara) ವಿಮಾನಯಾನ ಸಂಸ್ಥೆಯೊಂದಿಗೆ ಈಗಾಗಲೇ  ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್‌ನ ಜತೆ ಟಾಟಾ ಜಂಟಿ ಉದ್ಯಮವನ್ನುಯ ಹೊಂದಿದೆ. ಹಾಗಾಗಿ ಏರ್‌ ಇಂಡಿಯಾ ಟಾಟಾ ಸಂಸ್ಥೆಯ ಅಧೀನದಲ್ಲಿರುವ ಮೂರನೇ ಏರಲೈನ್‌ ಸಂಸ್ಥೆ ಆಗಲಿದೆ.

Follow Us:
Download App:
  • android
  • ios