* ವಿಶ್ವಾದ್ಯಂತ ಕೊರೋನಾ ಹೊಸ ತಳಿ ಒಮಿಕ್ರಾನ್ ಆತಂಕ* ಒಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ಬೆಡ ಎಂದ ಏಮ್ಸ್ ನಿರ್ದೇಶಕ* ಭಾರತಕ್ಕೂ ಬ್ರಿಟನ್‌ ಪರಿಸ್ಥಿತಿ ಎದುರಾಗಬಹುದು

ನವದೆಹಲಿ(ಡಿ.20): ಕೋವಿಡ್‌ನ ಹೊಸ ರೂಪಾಂತರವಾದ ಓಮಿಕ್ರಾನ್ (Covid New Variant Omicron) ಪ್ರಪಂಚದ ಅನೇಕ ದೇಶಗಳಲ್ಲಿ ಆತಂಕ ಉಂಟುಮಾಡಲು ಪ್ರಾರಂಭಿಸಿದೆ. ಓಮಿಕ್ರಾನ್ ಪ್ರಕರಣಗಳಿಂದ ಕೋವಿಡ್ -19 ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಇದರಿಂದಾಗಿ ಕೋವಿಡ್‌ನ ಮೂರನೇ ಅಲೆಯ (Covid Third Wave) ಭೀತಿಯೂ ಸೃಷ್ಟಿಯಾಗಿದೆ. ಭಾರತದಲ್ಲಿ 150 ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳಿವೆ. ಏತನ್ಮಧ್ಯೆ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ದೆಹಲಿಯ (AIIMS Delhi) ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಭಾನುವಾರ ಓಮಿಕ್ರಾನ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹೊಸ ರೂಪಾಂತರಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಇದನ್ನೆದುರಿಸಲು ಕಟ್ಟುನಿಟ್ಟಿನ ಸಿದ್ಧತೆಗಳನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ, ಆದರೆ ಬ್ರಿಟನ್‌ನಂತೆ ಇಲ್ಲಿ ಪರಿಸ್ಥಿತಿಯು ಹದಗೆಡುವುದಿಲ್ಲ ಎಂಬ ಭರವಸೆ ಹಾಗೂ ಆಶಾಕಿರಣ ನಮ್ಮಲ್ಲಿರಬೇಕು ಎಂದಿದ್ದಾರೆ.

ಬ್ರಿಟನ್‌ನಲ್ಲಿ ಕೊರೋನಾ ಪ್ರಕರಣಗಳಲ್ಲಿ ಭಾರೀ ಜಿಗಿತ ಕಂಡುಬಂದಿರುವ ಸಮಯದಲ್ಲಿ ಡಾ. ರಣದೀಪ್ ಗುಲೇರಿಯಾ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. UK ಪ್ರಸ್ತುತ ಸಂಪೂರ್ಣವಾಗಿ Omicron ಬಲೆಯಲ್ಲಿದೆ ಹಾಗೂ ಪ್ರತಿದಿನ ಸುಮಾರು 10,000 ಕೋವಿಡ್ ಪ್ರಕರಣಗಳು ಇಲ್ಲಿ ವರದಿಯಾಗುತ್ತಿವೆ. ಬ್ರಿಟನ್‌ನಂತೆ ಇಲ್ಲಿನ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಡಾ.ಗುಲೇರಿಯಾ ಹೇಳಿದ್ದಾರೆ. ಪ್ರಪಂಚದ ಯಾವುದೇ ಭಾಗದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾದಾಗ, ಅದರ ವಿವರಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಇನ್ನೂ ಹೆಚ್ಚಿನ ಡೇಟಾ ಬೇಕಾಗುತ್ತದೆ ಎಂದು ಅವರು ಹೇಳಿದರು.

ಬ್ರಿಟನ್‌ನ ಆರೋಗ್ಯ ಸಂಸ್ಥೆ ಶನಿವಾರ ದೇಶದಲ್ಲಿ ಕೊರೋನಾ ವೈರಸ್‌ನ ಹೊಸ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಹೊಸ ರೂಪಾಂತರಗಳ ಜೊತೆಗೆ, 24 ಗಂಟೆಗಳಲ್ಲಿ ದೇಶದಲ್ಲಿ 10,059 ಪ್ರಕರಣಗಳು ವರದಿಯಾಗಿವೆ. ಇನ್ನು ಒಂದು ದಿನದ ಹಿಂದೆ ಬ್ರಿಟನ್‌ನ ಅಂಕಿಅಂಶಗಳ ನೋಡುವುದಾದರೆ, ಶುಕ್ರವಾರ, 3,201 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಒಮಿಕ್ರಾನ್‌ನಿಂದಾಗಿ ಕೊರೋನಾ ವೈರಸ್ ಪ್ರಕರಣಗಳು 24 ಗಂಟೆಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿಯಬಹುದು.

ನಾವು ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಬಗ್ಗೆ ಮಾತನಾಡಿದರೆ, ದೇಶದಲ್ಲಿ ಇದುವರೆಗೆ 151 ಜನರು ಅದರಿಂದ ಪ್ರಭಾವಿತರಾಗಿದ್ದಾರೆ. ಮಹಾರಾಷ್ಟ್ರ ಮತ್ತೊಮ್ಮೆ ಕೋವಿಡ್‌ನ ಗರಿಷ್ಠ ಸಂಖ್ಯೆಯ ಹೊಸ ರೂಪಾಂತರಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರ (54), ದೆಹಲಿ (22), ರಾಜಸ್ಥಾನ (17) ಮತ್ತು ಕರ್ನಾಟಕ (14), ತೆಲಂಗಾಣ (20), ಗುಜರಾತ್ (9), ಕೇರಳ (11), ಆಂಧ್ರಪ್ರದೇಶ (12), ಚಂಡೀಗಢ (1), ತಮಿಳುನಾಡು (1) ಮತ್ತು ಪಶ್ಚಿಮ ಬಂಗಾಳ (1) ಸೇರಿದಂತೆ ದೇಶದ 12 ರಾಜ್ಯಗಳಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಸೋಂಕು ದೃಢಪಟ್ಟಿದೆ.