ವಿಶ್ವಕ್ಕೇ ಲಸಿಕೆ ನೀಡಿ ಮೆಚ್ಚುಗೆ ಗಳಿಸಿದ್ದ ಭಾರತದಲ್ಲಿ ಲಸಿಕೆ ಬರ!
ವಿಶ್ವಕ್ಕೇ ಲಸಿಕೆ ನೀಡಿದ್ದ ಭಾರತದಲ್ಲಿ ಲಸಿಕಾ ಬರ ವಿದೇಶೀ ಲಸಿಕೆಗೆ ಕೈ ಒಡ್ಡಿ ನಿಂತ ಭಾರತ

ನವದಹಲಿ(ಏ.17): ಇತ್ತೀಚೆಗೆ ನೆರೆ ದೇಶಗಳಿಗೆ ಕೊರೋನಾ ಲಸಿಕೆಯನ್ನು ಉಚಿತ ಕೊಡುಗೆ ನೀಡಿದ್ದಲ್ಲದೇ, ಜಾಗತಿಕ ಮಟ್ಟದ ಕೋವ್ಯಾಕ್ಸ್ ಯೋಜನೆ ಅಡಿ 60 ದೇಶಗಳಿಗೆ ಕೋವಿಡ್ ನಿರೋಧಕ ಲಸಿಕೆ ಪೂರೈಸಿದ್ದ ಭಾರತ ಈಗ ಖುದ್ದು ‘ಲಸಿಕಾ ಸಂಕಷ್ಟ’ಕ್ಕೆ ಸಿಲುಕಿಸಿದೆ. ಇದು ಬರೀ ದೇಶದ ಜನರಷ್ಟೇ ಅಲ್ಲ, ವಿಶ್ವವನ್ನೂ ಚಿಂತೆಗೀಡು ಮಾಡಿದೆ.
ಭಾರತದಲ್ಲಿ ಸೀರಂ ಇನ್ಸ್‌ಟಿಟ್ಯೂಟ್‌ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳನ್ನು ಉತ್ಪಾದಿಸಲಾಗುತ್ತಿದೆ. ವಿಶ್ವಾದ್ಯಂತ ಲಸಿಕೆ ಬೇಡಿಕೆ ಹೆಚ್ಚಿದ್ದರಿಂದ ಸ್ಪಂದಿಸಿದ್ದ ಮೋದಿ ಸರ್ಕಾರ ವಿದೇಶಗಳಿಗೆ ಭಾರತೀಯ ಉತ್ಪಾದಿತ ಲಸಿಕೆಗಳನ್ನು ಪೂರೈಸಿತ್ತು. ಇದರ ನಡುವೆ ಭಾರತದಲ್ಲಿ ಬಿರುಗಾಳಿ ಎಬ್ಬಿಸಿರುವನ ಕೊರೋನಾ 2ನೇ ಅಲೆಯಿಂದಾಗಿ ಹೆಚ್ಚೆಚ್ಚು ಜನರು ಲಸಿಕೆ ಪಡೆಯಲು ಮುಂದಾಗಿದ್ದಾರೆ. ಹೀಗಾಗಿ ಲಸಿಕೆಯ ಕೊರತೆ ಭಾರತದ ಉದ್ದಗಲಕ್ಕೂ ಕಂಡುಬರುತ್ತಿದೆ.
ಈ ಎಲ್ಲ ಕಾರಣಕ್ಕೆ, ಒಂದೊಮ್ಮೆ ವಿದೇಶೀ ಲಸಿಕೆಗಳಿಗೆ ಮನ್ನಣೆ ನೀಡದೇ ಮೂಗು ಮುರಿದಿದ್ದ ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿದೆ. ಮೊದಲನೆಯದಾಗಿ ರಷ್ಯಾದ ಸ್ಪುಟ್ನಿಕ್-5 ಲಸಿಕೆಗೆ ಅನುಮತಿಸಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಇನ್ನಿತರ ವಿದೇಶೀ ಲಸಿಕೆಗಳಿಗೂ ಅನುಮೋದನೆ ನೀಡಲು ತೀರ್ಮಾನಿಸಿದೆ.
ಕಚ್ಚಾವಸ್ತು ಕೊರತೆ ಹಾಗೂ ವಿದೇಶಗಳಿಂದ ಅಗತ್ಯ ವಸ್ತುಗಳ ಆಮದು ಏರುಪೇರಾಗಿರುವುದು ಭಾರತದಲ್ಲಿನ ಲಸಿಕೆ ಉತ್ಪಾದನೆ ಕುಂಠಿತಕ್ಕೆ ಕಾರಣ ಎಂದು ಹೇಳಲಾಗಿದೆ. ಇದು ಭಾರತದ ಲಸಿಕೆಯನ್ನೇ ನಂಬಿಕೊಂಡಿದ್ದ ವಿಶ್ವದ ಬಡದೇಶಗಳಿಗೆ ಚಿಂತೆ ಉಂಟು ಮಾಡಿದ