ಡೆಲ್ಲಿ ಮಂಜು

ನವದೆಹಲಿ, (16) : ಲಾಕ್ ಡೌನ್ ಮತ್ತು ಜಾಗೃತಿ. ಇವೆರಡು ಮಾತ್ರ ಮಹಾಮಾರಿ ಕೊರೊನಾ ಕಟ್ಟಿ ಹಾಕುವ ಅಸ್ತ್ರಗಳು ಅನ್ನೋದು ಮತ್ತೆ ಪ್ರೂವ್ ಆಯ್ತು. ಆದರೂ ಆ 'ಭಯ' ಮಾತ್ರ ದೆಹಲಿ ಸರ್ಕಾರವನ್ನು ಕಾಡುತ್ತಲೇ ಇದೆ.

ನವದೆಹಲಿಯಲ್ಲಿ ಈಗ 5ನೇ ವಾರದ ಲಾಕ್ ಡೌನ್ ಘೋಷಣೆಯಾಗಿದೆ. ಸೋಂಕಿತರ ಸಂಖ್ಯೆ ಇಳಿಯುತ್ತಿದೆ. ಗುಣಮುಖರ ಸಂಖ್ಯೆ ನಿತ್ಯವೂ ಹೆಚ್ಚುತ್ತಿದೆ. ಆದರೂ ಕೂಡ ದೆಹಲಿ ಸರ್ಕಾರ ಮತ್ಯಾವ ಭಯಕ್ಕೆ ಮತ್ತೊಂದು ವಾರ ಲಾಕ್ ಡೌನ್ ಘೋಷಣೆ ಮಾಡ್ತು ಅನ್ನೋ ಮಾತು ಎಲ್ಲೆಡೆಯೂ ಚರ್ಚೆಯಾಗುತ್ತಿದೆ.

ಲಸಿಕೆ ಪಡೆದವರು ಸಂಪೂರ್ಣ ಸೇಫ್; ಅಧ್ಯಯನ ನೀಡಿದ ಮಾಹಿತಿ

ಮೂರಂಕೆಯಲ್ಲೇ ಇದೆ ಸಾವಿನ ಸಂಖ್ಯೆ ; ಆಕ್ಸಿಜನ್ ಕೊರತೆ ಸಂಭವಿಸಿ ಅದೆಷ್ಟು ಮಂದಿ ತಮ್ಮ ಆಧಾರ ಸ್ತಂಭ ಕಳೆದುಕೊಂಡರೋ ಗೊತ್ತಿಲ್ಲ. ಆದ್ರೆ ಇವತ್ತು ಅಂಥ ಪ್ರಾಣವಾಯು  ದೆಹಲಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿದೆ. ಇದರರ್ಥ ಆಕ್ಸಿಜನ್ ಅಗತ್ಯ ಇರುವ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇದೇ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ನಮಗೆ ಹೆಚ್ಚುವರಿ ಆಕ್ಸಿಜನ್ ಬೇಡ ಬೇರೆ ರಾಜ್ಯಗಳಿಗೆ ಪೂರೈಕೆ ಮಾಡಿ ಅಂಥ ಧಾರಾಳವಾಗಿ ಹೇಳಿಬಿಟ್ಟಿದೆ.

ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮಾತ್ರ ಪಕ್ಕಾ ಗುಣಮುಖರಾಗಿ ಮನೆಗೆ ಮರಳುತ್ತಾರೆ ಅನ್ನೋ ಮಾತು ಮಾತ್ರ ಧೈರ್ಯವಾಗಿ ಹೇಳಲು ದೆಹಲಿ ಸರ್ಕಾರಕ್ಕೆ ಆಗುತ್ತಿಲ್ಲ. ಕಾರಣ, 300 ಆಸುಪಾಸಿನಲ್ಲೇ ಕೂತಿರುವ ಸಾವಿನ ಸಂಖ್ಯೆ. ಯಮನ ಈ ಫಾಸಿ ತಪ್ಪಿಸಲು ಕೇಜ್ರಿವಾಲ್ ಸರ್ಕಾರ ಇನ್ನಿಲ್ಲದ ಕಸರತ್ತು  ನಡೆಸುತ್ತಿದೆ.  ಆದರೂ ಕಡಿಮೆಯಾಗದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

ಲಾಕ್ ಡೌನ್ ಇದ್ರೆ ಲಸಿಕೆ ಹಾಕಲು ಸಹಾಯ: ಲಾಕ್ ಡೌನ್ ನಿಂದ ಸೋಂಕು ಇಳಿದಂತೆಯೂ ಆಗುತ್ತೆ. ಲಸಿಕೆ ಹಾಕಿ ಸೋಂಕು ನಿಯಂತ್ರಣ ಮಾಡಿದಂತೆಯೂ ಆಗುತ್ತದೆ. ಹಾಗಾಗಿ ಲಾಕ್ ಡೌನ್ ಅಸ್ತ್ರ 5 ನೇ ವಾರವೂ ಬಳಸಲಾಗಿದೆ. ಇದರ ಜೊತೆ ಆರೋಗ್ಯ ಮೂಲಸೌಕರ್ಯ ಗಳು ಒದಗಿಸಲು ಸಹಾಯವಾಗುತ್ತೆ. ಇದರ ಜೊತೆಗೆ ಜನರಲ್ಲಿ ಜಾಗೃತಿ ಹೆಚ್ಚಾದರೆ ಕೊರೊನಾ ನಿಯಂತ್ರಣ ದೊಡ್ಡ ಸಮಸ್ಯೆ ಆಗಲಾರದು ಅನ್ನೋದು ಡೆಲ್ಲಿ ಸರ್ಕಾರದ ಲೆಕ್ಕಾಚಾರ.

ದೆಹಲಿಯಲ್ಲಿ ಸೋಂಕು ಶೇ.75 ರಷ್ಟು ಇಳಿದಿದೆ. ಏಪ್ರಿಲ್ ತಿಂಗಳಲ್ಲಿ 28 ಸಾವಿರಕ್ಕೂ ಹೆಚ್ಚು ಪ್ರಕರಣ ಗಳು ವರದಿಯಾಗಿದ್ದವು. ಮೇ16 ರ ಹೊತ್ತಿಗೆ 6 ಸಾವಿರ ಆಸುಪಾಸಿಗೆ ಬಂದಿವೆ. ಈ ಇಳಿಕೆಯ ಹಿಂದಿರುವ ಗುಟ್ಟು ಲಾಕ್ ಡೌನ್ ಅನ್ನೋದು ಮಾತ್ರ ಸತ್ಯ