ಬಹುಶ; ರೈಲು ಕೂಡ ಇಷ್ಟೊಂದು ಸದ್ದು ಮಾಡುತ್ತೆ ಅನ್ನೋದು ಈಗಲೇ ಗೊತ್ತಾಗುತ್ತಿರುವುದು. ವರ್ಷಕೊಮ್ಮೆ ಬಜೆಟ್ ನಲ್ಲಿ ಅರ್ಧ ದಿನ ಮಾಧ್ಯಮಗಳಲ್ಲಿ ಶಬ್ದ ಮಾಡಿಹೋಗುತ್ತಿತ್ತು. ಆದ್ರೆ ಕಳೆದ ವರ್ಷದಿಂದ ಬಜೆಟ್ ಒಂದೇ ಆದ ಮೇಲೆ ಆ ಸದ್ದಿನ ನರದ ಉಸಿರು ಕೂಡ ನಿಂತು ಹೋಯ್ತು.

ಉಂಗಿಬಂಡಿ ಜನರ ಪ್ರಯಾಣದ ಜೀವನಾಡಿ ಅನ್ನೋದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಮಧ್ಯಮ ವರ್ಗದಿಂದ ಹಿಡಿದು ಶ್ರಮಿಕ ವರ್ಗದ ತನಕ ರೈಲು ಅವಲಂಬನೆ ಹೆಚ್ಚು. ಇಂಥ ಜೀವನಾಡಿ ಈಗ ರಾಜಕೀಯ ನಾಡಿಗಳನ್ನು ಬಿಗಿ ಮಾಡುತ್ತಿದೆ. ಹೊರರಾಜ್ಯದಿಂದ ರೈಲು ಬಂದ್ರೆ ಸಾಕು ಈಗ ಸರ್ಕಾರ ಗಳಿಗೆ ನಡುಕ ಶುರುವಾಗುತ್ತಿದೆ.

ನಿಸ್ವಾರ್ಥ ಸೇವೆಗೆ ಸೇನೆ ಸೆಲ್ಯೂಟ್; ಚಪ್ಪಾಳೆ ಮೂಲಕ ದೇಶದ ಧನ್ಯವಾದ

ಹಾಳಾದ ಕೊರೊನಾ ಹನಿಜ್ವರ ಇಂಡಿಯಾ ಬಾಗಿಲು ಬಡಿದ ಮೇಲೆ ಹಿಂದುಸ್ತಾನ ಲಾಕ್ ಡೌನ್ ಗೆ ಒಳಗಾಗಬೇಕಾಯ್ತು. ಅದ್ರೆ ಹನಿಜ್ವರ ಹರಡುತ್ತದೆ ಎಂಬ ಭಯವೋ ಅಥವಾ ಆತುರದ ನಿರ್ಧಾರವೋ ಅಂತೂ ಇಡೀ ಭಾರತಕ್ಕೆ ಬೀಗ ಹಾಕಲಾಯ್ತು. ಬೀಗ ಹಾಕಿದ ಫಲ ಎಲ್ಲಿದ್ದವರು ಅಲ್ಲೇ ಉಳಿದ್ರು. ಈಗ ಎಲ್ಲಿ ನೋಡಿದ್ರು ಹಸಿವು..ಅಕ್ರೋಶ... ಧಿಕ್ಕಾರ.. ರಸ್ತೆ ಬಂದ್.. ಇವುಗಳ ಹಿಂದೆ ಇರೋದು ಸಾವಿರಾರು ನೋವಿನ ಕಥೆಗಳು;

ಪಿಟ್ಸ್ ಇತ್ತು ಅಂಥ ಬಂದ್ವಿ..!  ಇದು ಅಮ್ಮ ಮತ್ತು ಮಗನ ನೋವಿನ ಕಥೆ ಮತ್ತು ವ್ಯಥೆ. ನ್ಯೂ ಡೆಲ್ಲಿ ರೈಲ್ವೆ ನಿಲ್ದಾಣದ ಮುಂದೆ ಕೂತು ಒಂದೇ ಉಸಿರಿಂದ ಶಾಪ ಹಾಕುತ್ತಿದ್ದಳು ಆ ತಾಯಿ. ನಮ್ಮ ಊರಿಗೆ ನಾವು ಹೋಗ್ತಿವಿ ಅಂದ್ರೆ ಈಗ ಬೇಡ.. ಆಗ ಬೇಡ ಅಂತಿದ್ದಾರೆ ಅನ್ನೋದು ಆಕೆಯ ಅಳಲು.

ಊರು ಬಿಹಾರದಲ್ಲಿದೆ. ನನ್ನ ಮಗನಿಗೆ ಪಿಟ್ಸ್ ಬರ್ತಾ ಇತ್ತು. ದೆಹಲಿ ಸರ್ಕಾರಿ ದಾವಾಖಾನೆಗೆ ಅಂಥ ಬಂದ್ವಿ ನೋಡಿ. ಎರಡು ತಿಂಗಳು ಆಗೋಯ್ತು. ರೋಡ್ ಪುಟ್ ಪಾತ್ ನಮಗೆ ಮನೆ. ಯಾರಾದ್ರು ಕೊಟ್ರೆ ಇಷ್ಟು ದಾಲು..ಚಾವಲ್.. ! ಡಾಕ್ಟರು ಇಲಾಜ್ ಮಾಡೋಕೆ ಮೂರು ದಿನ ಬೇಕು ಅಂದ್ರು. ಹೊರಗಡೆ ಬಂದ್ರೆ ಲಾಕ್ ಡೌನ್.. ಎಲ್ಲಿಗೆ ಹೋಗೋದು ಈ ವಯಸ್ಸಲ್ಲಿ ಅಂದಳು ಆಕೆ..

ರಾಜಧಾನಿಯಲ್ಲಿ ಬಂದ್ರೆ ಕೊರೊನಾ ಬರಲ್ವಾ? ರಾಜಧಾನಿ ಎಕ್ಸ್‌ಪ್ರೆಸ್‌, ಇನ್ನೊಂದು ಎಕ್ಸ್‌ಪ್ರೆಸ್‌ ಅಂಥ ಟಿಕೆಟ್ ಫಿಕ್ಸ್ ಮಾಡಿ ದುಡ್ಡು ಇರೋರ್ನ ಊರಿಗೆ ಕರೆಸಿಕೊಳ್ಳಲು ಆಗುತ್ತೆ. ಬಡವರು ಊರಿಗೆ ಬಂದ್ರೆ ಕೊರೊನಾ ಬರುತ್ತಾ? ನಮ್ಮ ಗೋಳು ಕೇಳೋಕೆ ಸಾಧ್ಯವಿಲ್ಲ ಬಿಡಿ ಅಂದ್ರು ಗಾರೆ ಕೆಲಸದ ಬಿಹಾರ ಮೂಲದ ಮೇಸ್ತ್ರಿ.

ಇದು ಭಾರತ; ದೇವಾಲಯದಲ್ಲಿ ಇಪ್ತಾರ್

ನಮ್ದು 10 ಹುಡುಗರ ಟೀಂ... ಕೈಯಲ್ಲಿ ಕೆಲಸ ಇಲ್ಲ. ಮನೆ ಬಾಡಿಗೆ ಕೊಡೋಕೆ ದುಡ್ಡಿಲ್ಲ. ಫಾಲ್ ಸೀಲಿಂಗ್ ಹಾಕೋದು ನಮ್ಮ ಕೆಲಸ. ಎಲ್ಲಿಗೆ ಹೋಗೋದು ನೀವೆ ಹೇಳಿ. ರೈಲು ಬಿಡ್ತಿವಿ ಅಂದ್ರು ನಾವು ಇಲ್ಲಿಗೆ ಬಂದ್ವಿ. ಇಲ್ಲಿ ಪೊಲೀಸರು ಬಿಡ್ತಾ ಇಲ್ಲ. ಮೂರು ದಿನ ಆದ್ಮೆಲೆ ಬಿಹಾರಕ್ಕೆ ಕರ್ಕೊಂಡು ಹೋಗ್ತಿವಿ ಅಂತಾರೆ. ಎಲ್ಲಿ ಇರೋದು ಹೇಳಿ ಅಂದ ಅಬ್ದುಲ್ ಮೇಸ್ತ್ರಿ.

ಶ್ರಮಿಕ್ ರೈಲು ಮತ್ತು 24 ಹಸುಗೂಸುಗಳು...! ಇಂದೊಂದು ವಿಭಿನ್ನ ಧಿಕ್ಕು. ರೈಲ್ವೆ ಅಧಿಕಾರಿಗಳ ಮಾಹಿತಿಯೂ ಕೂಡ. ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತಲುಪಿಸುವ ಜೊತೆ ಜೊತೆಯಲ್ಲೇ ಈ ಕೆಲಸ ಕೂಡ ಮಾಡಿದ್ವಿ ಅಂತಾರೆ. ಮೇ 1 ರಿಂದ 21 ರ ತನಕ ಹೆಚ್ಚು ಕಡಿಮೆ 24 ಮಂದಿ ತಾಯಂದಿರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

16 ಮಂದಿ ರೈಲ್ವೆ ಕೋಚ್ ಗಳಲ್ಲೇ ಜನ್ಮ ನೀಡಿದ್ರೆ ಉಳಿದವರು ಸಮೀಪದ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಅವರ ನೋವಿಗೆ ಸ್ಪಂದಿಸಿ ಮಾರ್ಗ ಮಧ್ಯೆ ಅವರನ್ನು ಆಸ್ಪತ್ರೆ ಗೆ ದಾಖಲಿಸದ್ವು ಅಂತಾರೆ.

 ರೈಲ್ವೇ ಕೋಚ್ ನಲ್ಲಿ ಪ್ರಸವವಾದಾಗ ಸುತ್ತಮುತ್ತಲಿದ್ದ ಮಹಿಳೆಯರು ಸಹಾಯಕ್ಕೆ ನಿಂತ್ರು.  ಅಹಮದಾಬಾದ್- ಬಾಂದ್ರ ಟ್ರೈನ್ ನಲ್ಲಿ ಮಧುಕುಮಾರಿ ಎಂಬಾಕೆ ಪ್ರಸವದ ನೋವು ಕಾಣಿಸಿಕೊಂಡ್ತು. ಪಕ್ಕದ ಮಹಿಳೆಯೊಬ್ಬರು ಸಹಾಯಕ್ಕೆ ನಿಂತ್ರು. ನಂತರ 110 ಕಿ.ಮೀಟರ್ ಕ್ರಮಿಸಿ ಝಾನ್ಸಿ ಆಸ್ಪತ್ರೆ ಗೆ ದಾಖಲಿಸಲಾಯ್ತು ಅಂತಾರೆ ರೈಲ್ವೆ ಅಧಿಕಾರಿಗಳು.

ಉತ್ತರಪ್ರದೇಶದ ಮಧು ಕುಮಾರಿ ಪತಿ ಮನೋಜ್ ಹೇಳುವಂತೆ ಇಬ್ಬರನ್ನು ಕಳ್ಕೊಂಡೆ. ರೈಲು ಹತ್ತಿ ತಪ್ಪು ಮಾಡಿದೆ ಅಂದ್ಕೊಂಡೆ. ಆದ್ರೆ ಇಬ್ಬರು ಚನ್ನಾಗಿದ್ದಾರೆ. ಹೀಗೆ ಯುಪಿ, ಬಿಹಾರ, ಪಂಜಾಬ್, ಛತೀಸ್ ಘಡ್ ಗೆ ಬರುವಾಗ 24 ಪ್ರಸವಗಳು ರೈಲಿನಲ್ಲಿ ನಡೆದಿವೆ. 

(ಇಂಡಿಯಾ ರೌಂಡ್ಸ್ ವಿತ್ ಡೆಲ್ಲಿ ಮಂಜು)