ಪಾಟ್ನಾ(ಜೂ.10): ದೇಶದಲ್ಲಿ ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಸತತ ಮೂರನೇ ದಿನವೂ ಒಂದು ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 93 ಸಾವಿರಕ್ಕೂ ಅಧಿಕ ಹೊಸ ಕೇಸ್‌ಗಳು ದಾಖಲಾಗಿವೆ. ಇದು ದೇಶವನ್ನು ನಿಟ್ಟುಸಿರು ಬಿಡುವಂತೆ ಮಾಡಿದೆಯಾದರೂ, ಸಾವಿನ ಸಂಖ್ಯೆ ಕೊಂಚ ಆತಂಕ ಹುಟ್ಟಿಸಿದೆ. ಆದರೆ ಇದರ ಹಿಂದೆಯೂ ಒಂದು ಕಾರಣ ಇದೆ ಎಂಬುವುದು ಉಲ್ಲೇಖನೀಯ. 

ಬೆಚ್ಚಿ ಬೀಳಿಸಿದೆ ಬಿಹಾರದ ಸಾವಿನ ಸಂಖ್ಯೆ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,187 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದ್ದರೂ, ಸರ್ಕಾರಿ ದಾಖಲೆ ಅನ್ವಯ, ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸಂಖ್ಯೆ 6,

138 ಎಂದು ತೋರಿಸಲಾಗಿದೆ. ಇದು ಈವರೆಗಿನ ದಾಖಲೆಯ ಅಂಕಿ ಅಂಶವಾಗಿದೆ. ಆದರೆ ಹೀಗಾಗುವುದರ ಹಿಂದೆ ಕೆಲ ಕಾರಣವಿದೆ. ಇಲ್ಲಿ ಬಿಹಾರದ ಕಳೆದ ಕೆಲಲ ದಿನಗಳ ಸಾವಿನ ಸಂಖ್ಯೆಯನ್ನು ಒಂದೇ ದಿನ ನಮೂದಿಸಲಾಗಿದೆ. ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಒಟ್ಟು 3,951 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಇಲ್ಲಿ ದೇಶದಲ್ಲೇ ಅತೀ ಹೆಚ್ಚು, 9429 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ ಈವರೆಗೆ ಒಟ್ಟು 7.15 ಲಕ್ಷ ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 6.98 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಆದರೆ 7,352 ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. 

ಸದ್ಯ ಬಿಹಾರದ ಈ ಎಡವಟ್ಟಿಗೆ ಕಾರಣವೇನು? ಕಳೆದ ಕೆಲ ದಿನಗಳಿಂದ ಸಾವಿನ ಸಂಖಧಯೆ ನೀಡದೇ ಒಂದೇ ದಿನ ಕೊಟ್ಟಿದ್ದೇಕೆ? ಎಂಬ ಕುರಿತಾಗಿ ತನಿಖೆ ನಡೆಸಲು ಆದೇಶಿಸಲಾಗಿದೆ

ತಮಿಳುನಾಡು, ಕೇರಳದಲ್ಲಿ ಅತೀ ಹೆಚ್ಚು ಕೇಸ್‌: ಕರ್ನಾಟಕದಲ್ಲಿ ಹೆಚ್ಚು ಸಕ್ರಿಯ ಪ್ರಕರಣ

ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಕೇರಳದಲ್ಲಿ 16 ಸಾವಿರ ಪ್ರಕರಂಗಳು ದಾಖಲಾಗಿವೆ, ಅತ್ತ ತಮಿಳುನಾಡಿನಲ್ಲಿ ಅತ್ಯಧಿಕ 17 ಸಾವಿರ ಕೆಸ್‌ಗಳು ದಾಖಲಾಗಿವೆ. ಇನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಹತ್ತು ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ. ಆದರೆ ಕರ್ನಾಟಕದಲ್ಲಿ ದೇಶದಲ್ಲೇ ಅತೀ ಹೆಚ್ಚು  2.15 ಲಕ್ಷ ಸಕ್ರಿಯ ಪ್ರಕರಣಗಳಿವೆ. ಈ ಪಟ್ಟಿಯಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ.