ದೇಶದಲ್ಲಿ ಕೊರೋನಾ ಇಳಿಮುಖ: 147 ದಿನಗಳ ಬಳಿಕ ಅತೀ ಕಡಿಮೆ ಕೇಸ್

* ದೇಶದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ
* 147 ದಿನಗಳ ಬಳಿಕ ದೇಶದಲ್ಲಿ ಅತೀ ಕಡಿಮೆ ಕೋವಿಡ್ ಪ್ರಕರಣ ಪತ್ತೆ
* ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ

India reports 28204 new corona cases On August 10th lowest in 147 days rbj

ನವದೆಹಲಿ, (ಆ.10): ಭಾರತದಲ್ಲಿ ಕೊರೋನಾ ಇಳಿಮುಖವಾಗಿದ್ದು, ಇಂದು (ಆ.10) 147 ದಿನಗಳ ಬಳಿಕ  ಅತೀ ಕಡಿಮೆ ಪ್ರಮಾಣದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿರುವುದು ಸಂತಸದ ವಿಷಯವಾಗಿದೆ.

ಇಂದು (ಆ.10)  28,204 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 373 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಒಟ್ಟು ಪ್ರಕರಣಗಳ ಸಂಖ್ಯೆ 3,19,98,158ಕ್ಕೇರಿದ್ರೆ, ಒಟ್ಟು  428,682 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್‌ ಗುಣಮುಖರಲ್ಲಿ ಕ್ಷಯ ಪತ್ತೆಗೆ ಅಭಿಯಾನ

ಇನ್ನುಕಳೆದ 24 ಗಂಟೆಗಳಲ್ಲಿ 41,511 ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ ಒಟ್ಟು 3,11,80,968ಕ್ಕೆ ಏರಿಕೆಯಾಗಿದೆ.

ಕೊರೋನಾ ಪಾಸಿಟಿವಿಟಿ ದರ ಶೇ.1.87ಕ್ಕೆ ಇಳಿದ್ದು,  ಕೋವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.45 ಕ್ಕೆ ಏರಿಕೆಯಾಗಿದೆ. ಇದು ಇದುವರೆಗಿನ ಗರಿಷ್ಠ ಚೇತರಿಕೆಯ ದರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 54,91,647 ಲಕ್ಷ ಕೋವಿಡ್ ಡೋಸ್ ನೀಡಲಾಗಿದೆ. ಒಟ್ಟು ದೇಶದಲ್ಲಿ ಈವರೆಗೆ 51,45,00268 ಕೋಟಿ ಡೋಸ್ ನೀಡಲಾಗಿದೆ. 

 ಸೋಮವಾರದವರೆಗೆ ಒಟ್ಟು 4,83,27,8545 ಕೊರೋನಾ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 15,11,313 ಒಂದೇ ದಿನದಲ್ಲಿ ಪರೀಕ್ಷೆ ಮಾಡಲಾಗಿದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

Latest Videos
Follow Us:
Download App:
  • android
  • ios