Asianet Suvarna News Asianet Suvarna News

ಕೋವಿಡ್‌ ಗುಣಮುಖರಲ್ಲಿ ಕ್ಷಯ ಪತ್ತೆಗೆ ಅಭಿಯಾನ

  • ಕೋರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕ್ಷಯ ರೋಗ ಪತ್ತೆ
  • ಸೋಂಕು ಮುಕ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಕ್ಷಯರೋಗ ಪತ್ತೆ ಆಂದೋಲನ 
Tuberculosis test   for recovered Covid patients snr
Author
Bengaluru, First Published Aug 10, 2021, 7:35 AM IST
  • Facebook
  • Twitter
  • Whatsapp

 ಬೆಂಗಳೂರು (ಆ.10):  ಕೋರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕ್ಷಯ ರೋಗ ಪತ್ತೆಯಾಗುತ್ತಿರುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಮುಕ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಕ್ಷಯರೋಗ ಪತ್ತೆ ಆಂದೋಲನ ನಡೆಸಲು ಸರ್ಕಾರ ನಿರ್ಧರಿಸಿದೆ.

ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡ ಬಳಿಕ ಕ್ಷಯರೋಗದ ಪತ್ತೆ ಪ್ರಮಾಣ ಕಡಿಮೆ ಆಗಿದ್ದರೂ ಕೂಡ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಕನಿಷ್ಠ 24 ಮಂದಿಯಲ್ಲಿ ಕ್ಷಯ ರೋಗ ವರದಿಯಾಗಿದೆ. 

ಹೈಸ್ಕೂಲ್‌ ಮಕ್ಕಳ ಪೋಷಕರಿಗೆ ಆದ್ಯತೆಯ ಮೇರೆಗೆ ಲಸಿಕೆ

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ರೋಗ ನಿರೋಧಕತೆ ಕಡಿಮೆ ಇರುವುದು ಮತ್ತು ಕೋವಿಡ್‌ನಿಂದ ಶ್ವಾಸಕೋಶಕ್ಕೆ ಹಾನಿ ಆಗಿರುವುದು ಕ್ಷಯ ರೋಗ ಕಾಣಿಸಿಕೊಳ್ಳಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್‌ 16 ರಿಂದ ಆ.31ರವರೆಗೆ ರಾಜ್ಯವ್ಯಾಪಿ ಆಂದೋಲನ ನಡೆಸಲು ರಾಷ್ಟ್ರೀಯ ಆರೋಗ್ಯ ಅಭಿಯಾನ ಸುತ್ತೋಲೆ ಹೊರಡಿಸಿದೆ.

Follow Us:
Download App:
  • android
  • ios