ಭಾರತದ ರೆಜಿಸ್ಟ್ರಾರ್‌ ಜನರಲ್‌ ವರದಿಯಲ್ಲಿ ಸಾವಿನ ಲೆಕ್ಕ  2020ರಲ್ಲಿ ಶೇ 6.2ರಷ್ಟುಸಾವಿನ ಪ್ರಮಾಣದಲ್ಲಿ ಏರಿಕೆ 2021ರಲ್ಲಿ 3.32 ಲಕ್ಷ ಸೋಂಕಿತರು ಮೃತ  

ನವದೆಹಲಿ(ಮೇ.04): ದೇಶದಲ್ಲಿ 2020ನೇ ಸಾಲಿನಲ್ಲಿ ಒಟ್ಟು 81.2 ಲಕ್ಷ ಜನರು ಸಾವನ್ನಪ್ಪಿದ್ದು, ಅದರಲ್ಲಿ 1.48 ಲಕ್ಷ ಜನರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಭಾರತದ ರೆಜಿಸ್ಟ್ರಾರ್‌ ಜನರಲ್‌ ನೀಡಿದ ಮಾಹಿತಿಯಂತೆ, ‘2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ 6.2ರಷ್ಟುಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 2017ರಲ್ಲಿ 76.4 ಲಕ್ಷ ಸಾವುಗಳು ವರದಿಯಾಗಿದ್ದವು. 

2020ರಲ್ಲಿ ದೇಶದಲ್ಲಿ ಕಂಡುಬಂದ ಮೊದಲ ಕೋವಿಡ್‌ ಅಲೆಯಲ್ಲಿ 1.48 ಲಕ್ಷ ಜನರು ಬಲಿಯಾಗಿದ್ದಾರೆ. ಅದೇ 2021ರಲ್ಲಿ 3.32 ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ. ಈವರೆಗೆ ದೇಶದಲ್ಲಿ 5.23 ಲಕ್ಷ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ’ ಎಂದು ಅಂಕಿಅಂಶಗಳು ತಿಳಿಸಿವೆ.

Covid Crisis: ಇನ್ಮುಂದೆ ಮಾಸ್ಕ್‌ ಧರಿಸದಿದ್ರೆ 250 ದಂಡ..!

ಕೋವಿಡ್‌ಗೆ ಬಲಿಯಾದ ಆರೋಗ್ಯ ಕಾರ‍್ಯಕರ್ತರಿಗೆ 808 ಕೋಟಿ ವಿಮೆ ಪಾವತಿ
ಕೋವಿಡ್‌ ಸಾಂಕ್ರಾಮಿಕಕ್ಕೆ ತುತ್ತಾಗಿ ಸಾವಿಗೀಡಾದ 1,616 ಆರೋಗ್ಯ ಕಾರ‍್ಯಕರ್ತರಿಗೆ 808 ಕೋಟಿ ರು. ವಿಮಾ ಪರಿಹಾರ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು. ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಸೌಲಭ್ಯ ಒದಗಿಸುವ ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಪ್ಯಾಕೇಜ್‌’ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿತ್ತು. ಈ ಯೋಜನೆ 50 ಲಕ್ಷ ರು.ವರೆಗೆ ವಿಮೆಯನ್ನು ಒಳಗೊಂಡಿದೆ. ಆರೋಗ್ಯ ಕಾರ್ಯಕರ್ತರ ಹೋರಾಟದಿಂದ ದೇಶ ಈಗ ಕೋವಿಡ್‌ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಮಹಾರಾಷ್ಟ್ರದ 201 ಜನರಿಗೆ 100.5 ಕೋಟಿ ರು. ಆಂಧ್ರಪ್ರದೇಶದ 160 ಜನರಿಗೆ 80 ಕೋಟಿ ರು. ಪರಿಹಾರ ವಿತರಿಸಲಾಗಿದೆ ಎಂದು ಅವರು ಹೇಳಿದರು.

Covid 4th Wave: ಬೂಸ್ಟರ್‌ ಡೋಸ್‌ ಅಂತರ ಶೀಘ್ರ 6 ತಿಂಗಳಿಗೆ ಇಳಿಕೆ ಸಾಧ್ಯತೆ

ಏಪ್ರಿಲ್‌ನಲ್ಲಿ ಕೋವಿಡ್‌ಗೆ 5 ಬಲಿ: ಅತಿ ಕನಿಷ್ಠ
ಬಹುತೇಕರಿಗೆ ಲಸಿಕೆ ನೀಡಿಕೆ, ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ, ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಪರಿಣಾಮ ರಾಜ್ಯದಲ್ಲಿ ಈಗ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದ್ದು, ಕಳೆದ ಏಪ್ರಿಲ್‌ ತಿಂಗಳಲ್ಲಿ ಅತ್ಯಂತ ಕನಿಷ್ಠ 5 ಜನರು ಮೃತರಾಗಿದ್ದಾರೆ. ಇದು 2020ರ ಮಾಚ್‌ರ್‍ ಬಳಿಕ ತಿಂಗಳೊಂದರಲ್ಲಿ ದಾಖಲಾದ ಕನಿಷ್ಠ ಸಂಖ್ಯೆಯ ಸಾವು ಆಗಿದೆ.

ಏಪ್ರಿಲ್‌ 4 ಮತ್ತು 6ರಂದು ಬೆಂಗಳೂರು ನಗರದಲ್ಲಿ ತಲಾ ಒಬ್ಬರು, ಏ.8ರಂದು ಗದಗದಲ್ಲಿ ಒಬ್ಬರು ಮತ್ತು ಏ.30ರಂದು ಬೆಳಗಾವಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಮೊದಲ ಬಾರಿಗೆ ಕಾಣಿಸಿಕೊಂಡ 2020ರ ಮಾಚ್‌ರ್‍ನಲ್ಲಿ ಮೂವರು ಮೃತರಾಗಿದ್ದರು. ನಂತರದ ಏಪ್ರಿಲ್‌ನಲ್ಲಿ 21 ಜನರು ಮೇ ತಿಂಗಳಲ್ಲಿ 22 ಸಾವು ಸಂಭವಿಸಿತ್ತು. ನಂತರದ ತಿಂಗಳಲ್ಲಿ ನೂರಕ್ಕಿಂತ ಹೆಚ್ಚು ಜನರು ಕೋರೊನಾಗೆ ಬಲಿಯಾಗುತ್ತಿದ್ದರು. ಸೋಂಕು ಪ್ರಕರಣ ಏರಿಕೆಯೊಂದಿಗೆ ಸಾವಿನ ಸಂಖ್ಯೆ ಹೆಚ್ಚಳ ಕಂಡು ಬಂದಿತ್ತು. ಅದರಲ್ಲೂ ಎರಡನೇ ಅಲೆ ತೀವ್ರವಾಗಿದ್ದ 2021ರ ಮೇ ತಿಂಗಳಿನಲ್ಲಿ ಬರೋಬ್ಬರಿ 15,523 ಮಂದಿ ಮೃತಪಟ್ಟಿದ್ದರು.

2022ರ ಜನವರಿಯಲ್ಲಿ ಆರಂಭವಾದ ಮೂರನೇ ಅಲೆ ವೇಳೆ ಸೋಂಕಿನ ಪ್ರಕರಣ ವೇಗವಾಗಿ ಏರಿಕೆ ಆಗಿದ್ದರೂ ಹೆಚ್ಚಿನ ಸಾವು ಸಂಭವಿಸಿರಲಿಲ್ಲ. ಮೂರನೇ ಅಲೆಗೆ ಕಾರಣವಾಗಿದ್ದ ಕೊರೋನಾದ ರೂಪಾಂತರಿ ತಳಿ ‘ಓಮಿಕ್ರೊನ್‌’ ವೇಗವಾಗಿ ಹಬ್ಬಿದ್ದರೂ ಶ್ವಾಸಕೋಶಕ್ಕೆ ಹಾನಿ ಮಾಡುವ ಕ್ಷಮತೆ ಇರಲಿಲ್ಲ, ಹೀಗಾಗಿ ಸಾವಿನ ಸಂಖ್ಯೆ ಕಡಿಮೆ ಆಗಿದೆ. ಜತೆಗೆ ಕೋವಿಡ್‌ಗೆ ಸುಲಭ ತುತ್ತಾಗಿದ್ದ ಹಿರಿಯ ನಾಗರಿಕರು ಲಸಿಕೆ ಪಡೆದಿದ್ದರಿಂದ ಮೂರನೇ ಅಲೆ ಅಷ್ಟೊಂದು ಮಾರಣಾಂತಿಕವಾಗಿರಲಿಲ್ಲ ಎಂದು ತಜ್ಞರು ಹೇಳುತ್ತಾರೆ.