Asianet Suvarna News Asianet Suvarna News

Omicron Case:ಭಾರತದಲ್ಲಿ ಐದಕ್ಕೇರಿದ ಓಮಿಕ್ರಾನ್ ಕೇಸ್, ಫೆಬ್ರವರಿಯಲ್ಲಿ 3ನೇ ಕೋವಿಡ್ ಅಲೆ ಎಚ್ಚರಿಕೆ!

  • ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಕ್ಯೆ 5ಕ್ಕೆ ಏರಿಕೆಯಾಗಿದೆ
  • ದೆಹಲಿಯಲ್ಲಿ ಹೊಸ ರೂಪಾಂತರಿ ವೈರಸ್ ಪ್ರಕರಣ ಪತ್ತೆ
  • ಜನವರಿ ಫೆಬ್ರವರಿಯಲ್ಲಿ ಭಾರತದಲ್ಲಿ 3ನೇ ಕೊರೋನಾ ಅಲೆ
India report 5th omicron variant case in Delhi expert warns 3rd covid wave likely to peak in January ckm
Author
Bengaluru, First Published Dec 5, 2021, 3:53 PM IST
  • Facebook
  • Twitter
  • Whatsapp

ನವದೆಹಲಿ(ಡಿ.05): ಭಾರತದಲ್ಲಿ(India) ಹೊಸ ರೂಪಾಂತರಿ ವೈರಸ್ ಪ್ರಕರಣಗಳ(Mutation Virus) ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್ ಪ್ರಕರಣ(Omicron variant) ಪತ್ತೆಯಾಗಿದೆ. ತಾಂಜಾನಿಯಾದಿಂದ ದೆಹಲಿಗೆ(Delhi) ಆಗಮಿಸಿದ ವ್ಯಕ್ತಿಗೆ ಓಮಿಕ್ರಾನ್ ವೈರಸ್ ತುಗುಲಿರುವುದು ದೃಢಪಟ್ಟಿದೆ. ಇದೀಗ ದೆಹಲಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದೆ. ಇತ್ತ ಓಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆತಂಕಾರಿ ಸುದ್ದಿ ಹೊರಬಿದ್ದಿದೆ. ಜನವರಿ ಫೆಭ್ರವರಿಯಲ್ಲಿ ಭಾರತದಲ್ಲಿ 3ನೇ ಕೊರೋನಾ ಅಲೆ(Corona 3rd wave) ಅಬ್ಬರಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ತಾಂಜಾನಿಯಾದಿಂದ ಮರಳಿದ 37 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಖಚಿತವಾಗಿದೆ. ಓಮಿಕ್ರಾನ ಪ್ರಕರಣದಿಂದ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಆದೇಶ ಜಾರಿಗೊಳಿಸಿದೆ. ಇದರ ಪ್ರಕಾರ ವಿಮಾನ ನಿಲ್ದಾಣದಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.  ಹೀಗೆ ತಾಂಜಾನಿಯಾದಿಂದ ಬಂದ 17 ಪ್ರಯಾಣಿಕರ ಪೈಕಿ 12 ಮಂದಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಹೀಗಾಗಿ ಇವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್(genome sequencing) ಟೆಸ್ಟ್‌ಗೆ ಕಳುಹಿಸಲಾಗಿತ್ತು. 12 ಮಂದಿ ಪೈಕಿ ಒರ್ವನಿಗೆ ಓಮಿಕ್ರಾನ್ ತಗುಲಿರುವುದು ಖಚಿತವಾಗಿದೆ.

India Omicron Case: ಭಾರತದಲ್ಲಿ 4ನೇ ಓಮಿಕ್ರಾನ್ ಕೇಸ್ ಪತ್ತೆ, ಮುಂಬೈ ಅಲರ್ಟ್!

ಓಮಿಕ್ರಾನ್ ಕಾಣಿಸಿಕೊಂಡಿರುವ ವ್ಯಕ್ತಿಗೆ ಗಂಟಲು ನೋವು, ಸುಸ್ತು ,ಮೈ ಕೈ ನೋವು ಇರುವುದರಿಂದ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ದೇಶದಲ್ಲಿನ ಓಮಿಕ್ರಾನ್  ವೈರಸ್ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.  ಮೊದಲು ಕರ್ನಾಟಕದಲ್ಲಿ 2 ಪ್ರಕರಣಗಳು ಪತ್ತೆಯಾಗಿತ್ತು. ಸೌತ್ ಆಫ್ರಿಕಾದಿಂದ ಬಂದ ಓರ್ವ ಹಾಗೂ ಯಾವ ಸಂಪರ್ಕವಿಲ್ಲದ ವೈದ್ಯರಿಗೆ ಓಮಿಕ್ರಾನ್ ತಗುಲಿರುವುದು ಖಚಿತವಾಗಿತ್ತು ಬಳಿಕ ಜಿಂಬಾಬ್ವೆಯಿಂದ ರಾಜಸ್ಥಾನದ ಜಾಮಾನಗರಕ್ಕೆ ಬಂದ ವ್ಯಕ್ತಿಗೆ ಓಮಿಕ್ರಾನ್ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಮುಂಬೈನಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗಿತ್ತು. ಇದೀಗ ದೆಹಲಿಯಲ್ಲೂ ಕಾಣಿಸಿಕೊಂಡಿದೆ. 

ಓಮಿಕ್ರಾನ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಐಐಟಿ ಕಾನ್ಪುರದ ಪ್ರೋಫೆಸರ್ ಹಾಗೂ ಕೇಂದ್ರ ಸರ್ಕಾರ ಸಾಂಕ್ರಾಮಿಕ ರೋಗ ಅಧ್ಯಯನ ತಂಡದ ಕೋ ಫೌಂಡರ್ ಮಹೀಂದ್ರ ಅಗರ್ವಾಲ್ ಮತ್ತೊಂದು ಬೆಚ್ಚಿ ಬೀಳಿಸುವ ವರದಿ ನೀಡಿದ್ದಾರೆ.

India Omicron case:ಜಿಂಬಾಬ್ವೆಯಿಂದ ಮರಳಿದ ವ್ಯಕ್ತಿಗೆ ಓಮಿಕ್ರಾನ್ ದೃಢ , ಭಾರತದಲ್ಲಿ 3ನೇ ಪ್ರಕರಣ ಪತ್ತೆ!

ಭಾರತದಲ್ಲಿ ಮೈಲ್ಡ್ ಸಿಂಪ್ಟಸ್ ಓಮಿಕ್ರಾನ್ ಪತ್ತೆಯಾಗುತ್ತಿದೆ. ಹೆಚ್ಚಿನ ಪರೀಕ್ಷೆ ನಡೆಸಿದರೆ ಹೆಚ್ಚು ಓಮಿಕ್ರಾನ್ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ. ಇತ್ತ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಜನವರಿ ಹಾಗೂ ಫಬ್ರವರಿಯಲ್ಲಿ ಭಾರತದಲ್ಲಿ 3ನೇ ಅಲೆ ಅಬ್ಬರಿಸಲಿದೆ. ಇದೇ ವೇಳೆ ಪಂಜಾಬ್, ಉತ್ತರ ಪ್ರದೇಶ, ಗೋವಾ, ಉತ್ತರಖಂಡ ಹಾಗೂ ಮಣಿಪುರದ ವಿಧಾನಸಭಾ ಚುನಾವಣೆಗಳು ನಡೆಯಲಿದೆ. ಹೀಗಾಗಿ ಎಲ್ಲಾ ಪಕ್ಷಗಳು, ಆಡಳಿತ ಪಕ್ಷಗಳ ಗಮನ ಚುನಾವಣೆ ಮೇಲಿರಲಿದೆ. ಎಲ್ಲಾ ರ್ಯಾಲಿಗಳು, ರಾಜಕೀಯ ಸಭೆ, ಸಮಾರಂಭ, ಸಾರ್ವಜನಿಕ ಭಾಷಣಗಳು ನಡೆಯಲಿದೆ. ಇದರಿಂದ ಭಾರತದಲ್ಲಿ 3ನೇ ಮಾರ್ಚ್ ವೇಳೆಗೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ಮಹೀಂದ್ರ ಅಗರ್ವಾವಾಲ್ ಹೇಳಿದ್ದಾರೆ.

Omicron Virus: ಓಮಿಕ್ರಾನ್ ಎಚ್ಚರಿಕೆ ಅಗತ್ಯ, ಜನರ ಆತಂಕದ ಪ್ರಶ್ನೆಗೆ ಕೇಂದ್ರ ಆರೋಗ್ಯ ಇಲಾಖೆ ಉತ್ತರ

ಓಮಿಕ್ರಾನ್ ಹೆಚ್ಚಾಗುತ್ತಿರುವ ಕಾರಣ ಆತಂಕ ಪಡುವ ಅಗತ್ಯವಿಲ್ಲ. ಓಮಿಕ್ರಾನ್ ದೇಹದ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ನುಂಗಿ ಹಾಕುವ ಸಾಮರ್ಥ್ಯ ಹೊಂದಿಲ್ಲ. ಆದರೆ ಎಚ್ಚರಿಕೆ ಅತೀ ಅಗತ್ಯ ಎಂದು ಮಹೀದ್ರ ಅಗರ್ವಾಲ್ ಹೇಳಿದ್ದಾರೆ. ಸರ್ಕಾರ ಓಮಿಕ್ರಾನ್ ವೈರಸ್ ನಿಯಂತ್ರಣವನ್ನು ಯಾವ ರೀತಿ ನಿಭಾಯಿಸುತ್ತೆ ಅನ್ನೋದರಲ್ಲಿ ಎಲ್ಲವೂ ನಿಂತಿದೆ. ಸಾರ್ವಜನಿಕರ ಮೇಲೆ ನಿರ್ಬಂಧ ಹೇರಿ, ತಾವು ಚುನಾವಣೆ ಪ್ರಚಾರ, ಸಭೆ, ಸಮಾವೇಶಗಳನ್ನು ಮಾಡಿದರೆ, ಕಾರ್ಯಕರ್ತರಿಂದ ಅವರ ಕುಟುಂಬ ಹಾಗೂ ದೇಶಕ್ಕೆ 3ನೇ ಅಲೆ ಅಪ್ಪಳಿಸಲಿದೆ ಎಂದು ಮಹೀಂದ್ರ ಅಗರ್ವಾಲ್ ಹೇಳಿದ್ದಾರೆ.
 

Follow Us:
Download App:
  • android
  • ios