Asianet Suvarna News Asianet Suvarna News

114 ದಿನದ ಬಳಿಕ ಭಾರತದಲ್ಲಿ 500ರ ಗಡಿ ದಾಟಿದ ಕೋವಿಡ್ ಪ್ರಕರಣ, ಮತ್ತೆ ಅಲರ್ಟ್!

2020ರಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣ ಕಾಣಿಸಿಕೊಂಡ ಬೆನ್ನಲ್ಲೇ ಭಾರತ ಲಾಕ್‌ಡೌನ್ ಸೇರಿದಂತೆ ಹಲವು ಕಠಿಣ ನಿರ್ಬಂಧ ವಿಧಿಸಿತು. ಲಸಿಕೆ ವಿತರಣೆ ಆರಂಭಗೊಂಡ ಬಳಿಕ ಭಾರತ ಕೋವಿಡ್ ಪ್ರಕರಣದಲ್ಲಿ ಸಂಪೂರ್ಣ ನಿಯಂತ್ರ ಸಾಧಿಸಿತ್ತು. ಇದೀಗ ಮತ್ತೆ ಭಾರತದಲ್ಲಿ ಕೋವಿಡ್ ಕೇಸ್ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.
 

India report 524 fresh covid 19 cases in last 24 hours after 114 days Health Ministry data ckm
Author
First Published Mar 13, 2023, 4:53 PM IST

ನವದೆಹಲಿ(ಮಾ.13): ಭಾರತ ಕೋವಿಡ್ ವೈರಸ್‌ ವಿರುದ್ಧ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಅತ್ಯುತ್ತಮ ಕೋವಿಡ್ ಲಸಿಕೆ ಮೂಲಕ ವೈರಸ್‌ನಿಂದ ಮುಕ್ತವಾಗಿದೆ. ಆದರೆ ಕಳೆದೆರಡು ತಿಂಗಳಿನಿಂದ ಭಾರತದಲ್ಲಿ ಜ್ವರ, ಶೀತ ಕೆಮ್ಮು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇನ್ಲುಫ್ಲುಯೆಂಜಾ ಹರಡುವಿಕೆಯಿಂದ ಭಾರತದಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೊಂದು ಆಘಾತ ಎದುರಾಗಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 524 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ನಿಧಾನವಾಗಿ ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಇನ್ಲುಫ್ಲುಯೆಂಜಾ ಜೊತೆ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿರುವುದು ಇದೀಗ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಾರ್ಚ್ 12 ರಂದು ಭಾರತದಲ್ಲಿ 524 ಕೋವಿಡ್ ಪ್ರಕರಣ ದಾಖಲಾಗಿದೆ. ಈ  ಮೂಲಕ ಸಕ್ರೀಯ ಕೋವಿಡ್ ಪ್ರಕರಣ ಸಂಖ್ಯೆ 3,809 ಕ್ಕೆ ಏರಿಕೆಯಾಗಿದೆ. ಇತರ ದೇಶಗಳಿಗ ಹೋಲಿಸಿದರೆ ಹಾಗೂ ಭಾರತದಲ್ಲಿ ಈ ಹಿಂದೆ ದಾಖಲಾದ ಕೋವಿಡ್ ಸಂಖ್ಯೆ, ಪ್ರಮಾಣಕ್ಕೆ ಹೋಲಿಸಿದರೆ ಇದೀಗ ಅತೀ ಕಡಿಮೆ ಪ್ರಕರಣ ವರದಿಯಾಗಿದೆ. ಆದರೆ ಪ್ರತಿ ದಿನ ಇದೀಗ 500 ಪ್ರಕರಣಗಳು ದಾಖಲಾಗುತ್ತಿರುವುದು ಆತಂಕ ಹೆಚ್ಚಿಸಿಸಿದೆ. 114 ದಿನಗಳ ಬಳಿಕ ಭಾರತದಲ್ಲಿ 500ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

ಎಚ್‌3ಎನ್‌2 ಕೂಡ ಕೋವಿಡ್‌ ರೀತಿಯಲ್ಲೇ ಹಬ್ಬುತ್ತೆ: ತಜ್ಞರ ಎಚ್ಚರಿಕೆ

ಕೋವಿಡ್‌ಗೆ ಬಲಿಯಾದವರ ಸಂಖ್ಯೆ ನಿಯಂತ್ರಣದಲ್ಲಿದೆ. ಕಳೆದ ಒಂದು ವಾರದಲ್ಲಿ 6 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಇದುವರೆಗೆ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 5,30,782. ಭಾರತದಲ್ಲಿ ಇದುವರೆಗೆ ದಾಖಲಾದ ಕೋವಿಡ್ ಪ್ರಕರಣ ಸಂಖ್ಯೆ 4.46 ಕೋಟಿ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡಾ 0.01 . ಇನ್ನು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವವ ಸಂಖ್ಯೆ ಶೇಕಡಾ 98.80. 

ಬೆಂಗಳೂರಿನಲ್ಲಿ ಮಾರ್ಚ್ 12 ರಂದು  39 ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ಪಾಸಿಟಿವಿಟಿ ದರ ಶೇ.7.70 ದಾಖಲಾಗಿದೆ. ಸೋಂಕಿನಿಂದ 22 ಜನ ಗುಣಮುಖರಾಗಿದ್ದಾರೆ. ಕೋವಿಡ್ ಮರಣ ದಾಖಲಾಗಿಲ್ಲ. ಬೆಂಗಳೂರಿನಲ್ಲಿ 335 ಸಕ್ರಿಯ ಸೋಂಕು ಪ್ರಕರಣಗಳಿದ್ದು, 42 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 73 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 10 ಮಂದಿ ಮೊದಲ ಡೋಸ್‌, 16 ಮಂದಿ ಎರಡನೇ ಡೋಸ್‌ ಮತ್ತು 47 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 601 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು

ಶನಿವಾರ(ಮಾ.11) ಬೆಂಗಳೂರಲ್ಲಿ 57 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಭಾನುವಾರ ಈ ಸಂಖ್ಯೆ 39ಕ್ಕೆ ಇಳಿಕೆಯಾಗಿದೆ. ಭಾನುವಾರ ಕೋವಿಡ್ ಟೆಸ್ಟಿಂಗ್ ಸಂಖ್ಯೆ ಇಳಿಕೆಯಾಗಿರುವ ಕಾರಣ ಪ್ರಕರಣಗದಲ್ಲಿ ಇಳಿಕೆಯಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.  ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದೆ. ಹೀಗಾಗಿ ಎಚ್ಚರಿಕೆ ವಹಿಸಲು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.

Follow Us:
Download App:
  • android
  • ios