ಜಿ20 ಶೃಂಗಕ್ಕೆ ಭಾರತ ಬಿಡುಗಡೆ ಮಾಡಿದ ಲೋಗೋದಲ್ಲೂ ಲೋಟಸ್: ನೆಟ್ಟಿಗರು ಏನಂದ್ರು ನೋಡಿ
19 ದೇಶಗಳು ಹಾಗೂ ಐರೋಪ್ಯ ಒಕ್ಕೂಟ (ಅದರಲ್ಲಿ 27 ದೇಶಗಳಿವೆ) ಒಳಗೊಂಡ ವಿಶ್ವದ ಅತ್ಯಂತ ಪ್ರಭಾವಿ ಕೂಟ ‘ಜಿ 20’ಯ ಅಧ್ಯಕ್ಷತೆಯನ್ನು ಡಿ.1ರಿಂದ ವಹಿಸಿಕೊಳ್ಳುತ್ತಿರುವ ಭಾರತ ಈ ಐತಿಹಾಸಿಕ ಜವಾಬ್ದಾರಿಯ ಸಂಭ್ರಮಕ್ಕಾಗಿ ಲಾಂಛನ, ಧ್ಯೇಯ (ಥೀಮ್) ಹಾಗೂ ವೆಬ್‌ಸೈಟ್‌ಗಳನ್ನು ಮಂಗಳವಾರ ಲೋಕಾರ್ಪಣೆ ಮಾಡಿದೆ.
ನವದೆಹಲಿ: 19 ದೇಶಗಳು ಹಾಗೂ ಐರೋಪ್ಯ ಒಕ್ಕೂಟ (ಅದರಲ್ಲಿ 27 ದೇಶಗಳಿವೆ) ಒಳಗೊಂಡ ವಿಶ್ವದ ಅತ್ಯಂತ ಪ್ರಭಾವಿ ಕೂಟ ‘ಜಿ 20’ಯ ಅಧ್ಯಕ್ಷತೆಯನ್ನು ಡಿ.1ರಿಂದ ವಹಿಸಿಕೊಳ್ಳುತ್ತಿರುವ ಭಾರತ ಈ ಐತಿಹಾಸಿಕ ಜವಾಬ್ದಾರಿಯ ಸಂಭ್ರಮಕ್ಕಾಗಿ ಲಾಂಛನ, ಧ್ಯೇಯ (ಥೀಮ್) ಹಾಗೂ ವೆಬ್‌ಸೈಟ್‌ಗಳನ್ನು ಮಂಗಳವಾರ ಲೋಕಾರ್ಪಣೆ ಮಾಡಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಮೂರನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು. ಜಿ20 ಅಧ್ಯಕ್ಷತೆ ದೇಶಕ್ಕೆ ಐತಿಹಾಸಿಕ ಕ್ಷಣವಾಗಿದೆ. ವಸುಧೈವ ಕುಟುಂಬಕಂ ಎಂಬುದು ಭಾರತದ ಕರುಣೆಯ ಸಂಕೇತ. ಲಾಂಛನದಲ್ಲಿರುವ ಕಮಲ ವಿಶ್ವವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ವಿಶ್ವಾಸವನ್ನು ಬಿಂಬಿಸುತ್ತದೆ ಎಂದು ಬಣ್ಣಿಸಿದರು.
ಕೋವಿಡ್ ಸಾಂಕ್ರಾಮಿಕದ (Covid pandemic) ನಂತರ ಕಂಡುಬಂದ ಪರಿಣಾಮಗಳನ್ನು ಇಡೀ ವಿಶ್ವದ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಜಿ20 ಲಾಂಛನ (G20 emblem) ಆಶಾವಾದದ ಪ್ರತೀಕ. ಎಂತಹುದೇ ಪರಿಸ್ಥಿತಿ ಇದ್ದರೂ ಕಮಲ ಅರಳುತ್ತದೆ ಎಂಬುದರ ಸೂಚಕ ಎಂದು ಹೇಳಿದರು.ಲಾಂಛನದಲ್ಲಿರುವ ಕಮಲದ ಏಳು ದಳಗಳು (seven petals)ವಿಶ್ವದ 7 ಖಂಡಗಳನ್ನು, ಸಂಗೀತ 7 ಸ್ವರಗಳನ್ನು ಪ್ರತಿನಿಧಿಸುತ್ತದೆ. ಜಿ20 ಎಂಬುದು ವಿಶ್ವವನ್ನು ಸೌಹಾರ್ದತೆಯೆಡೆಗೆ ಒಯ್ಯುತ್ತದೆ. ಈ ಲಾಂಛನ ಭಾರತದ ಪುರಾತನ ಸಂಸ್ಕೃತಿ(ancient culture), ನಂಬಿಕೆ, ಬುದ್ಧಿವಂತಿಕೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು.
G20 Presidency: ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಥೀಮ್‌ನಲ್ಲಿ ಭಾರತದ ಆಯೋಜನೆ
ಡಿ.1ರಿಂದ ಅಧ್ಯಕ್ಷತೆ:
ಜಿ20 ಎಂಬುದು ಅಂತಾರಾಷ್ಟ್ರೀಯ ಸಹಕಾರದ (international cooperation) ಉದ್ದೇಶದಿಂದ ಸ್ಥಾಪಿಸಲಾಗಿರುವ ಪ್ರತಿಷ್ಠಿತ ವೇದಿಕೆ. ವಿಶ್ವದ ಜಿಡಿಪಿಯಲ್ಲಿ ಶೇ.85ರಷ್ಟುಹಾಗೂ ಜಾಗತಿಕ ವ್ಯಾಪಾರದಲ್ಲಿ ಶೇ.75ರಷ್ಟುಮತ್ತು ವಿಶ್ವ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟುಪಾಲನ್ನು ಜಿ20 ಹೊಂದಿದೆ. ಸದ್ಯ ಇದರ ಅಧ್ಯಕ್ಷತೆ ಇಂಡೋನೇಷ್ಯಾ (Indonesia) ಬಳಿ ಇದ್ದು, ಡಿ.1ರಂದು ಭಾರತದ ಅದರ ಹೊಣೆ ಹೊತ್ತುಕೊಳ್ಳಲಿದೆ. ಅದಾದ ಬಳಿಕ ಭಾರತವು ದೇಶದ 32 ವಿವಿಧ ವಲಯಗಳಲ್ಲಿ 200 ಸಭೆಗಳನ್ನು ಆಯೋಜಿಸಲಿದೆ. ಬಳಿಕ ಮುಂದಿನ ವರ್ಷ ಜಿ20 ಶೃಂಗವನ್ನು ಏರ್ಪಡಿಸಲಿದೆ. ಅದು ವಿಶ್ವದ ಅತ್ಯುನ್ನತ ಜಾಗತಿಕ ಮೇಳಗಳಲ್ಲಿ ಒಂದಾಗಿರಲಿದೆ.
ಪೋಪ್ ಜೊತೆ ಪ್ರಧಾನಿ ಮೋದಿ ಮೊದಲ ಭೇಟಿ: 20 ನಿಮಿಷದ ಮಾತುಕತೆ 1 ತಾಸಿಗೆ ವಿಸ್ತರಣೆ!
ಈ ಲೋಗೋವನ್ನು ಪ್ರಧಾನಿ (Prime Minister) ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲೋಗೋದಲ್ಲಿರುವ ತಾವರೆ ಹೂ ಅಥವಾ ಕಮಲದ ಹೂವು ಭರವೆಸಯ ಸಂಕೇತ ಎಂದು ಅವರು ಬರೆದುಕೊಂಡು ಲೋಗೋ ಬಿಡುಗಡೆ ಮಾಡಿದ್ದಾರೆ. ಈ ಜಿ20 ಶೃಂಗದಲ್ಲೂ ಲೋಗೋ ಇರುವುದನ್ನು ನೋಡಿದ ನೆಟ್ಟಿಗರು ಭಿನ್ನವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದು, ಪ್ರತಿ ಮನೆ ಅಲ್ಲ ಇಡೀ ವಿಶ್ವದಲ್ಲೇ ಪ್ರಧಾನಿ ಕಮಲ ಅರಳಿಸಲು ಹೊರಟಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಲೋಗೋದಲ್ಲಿ ಲೋಟಸ್ ನೋಡಿದ ನಂತರ ಬಹಳಷ್ಟು ಲಿಬ್ಬೀಸ್ ಹಾಗೂ ಲಿಲ್ಲೀಸ್‌ಗಳಿಗೆ ಬೇಧಿಯಾಗುವ ಸಾಧ್ಯತೆ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಲೋಗೋವನ್ನು ಜಿ-ಶೃಂಗದಲ್ಲಿರುವ ದೇಶಗಳ ರಾಯಭಾರಿಗಳೆಲ್ಲರೂ ಶೇರ್ ಮಾಡಿಕೊಂಡಿದ್ದಾರೆ.