ನವದೆಹಲಿ(ಜೂ.27): ಸಿಖ್‍‌ರ ಪವಿತ್ರ ಕ್ಷೇತ್ರಕ್ಕೆ ತೆರಳಲು ಭಾರತ ಹಾಗೂ ಪಾಕಿಸ್ತಾನ ಕಳೆದ ವರ್ಷ ಕರ್ತಾರ್‌ಪುರ್ ಕಾರಿಡಾರ್ ಯೋಜನೆ ಆರಂಭಿಸಿತ್ತು. ಈ ಮೂಲಕ ಹಲವು ದಶಕಗಳ ಬೇಡಿಕೆ ಈಡೇರಿತ್ತು. ಆದರೆ ಕೊರೋನಾ ವೈರಸ್ ಕಾರಣ ಭಾರತ ಕರ್ತಾರ್‌ಪುರ್‌ ಸೇವೆ ಸ್ಥಗಿತಗೊಳಿಸಿತ್ತು. ಇದೀಗ ಪಾಕಿಸ್ತಾನ ಜೂನ್ 29 ರಿಂದ ಕರ್ತಾರ್‌ಪುರ್ ಕಾರಿಡಾರ್ ಯೋಜನೆ ಪುನರ್ ಆರಂಭಕ್ಕೆ ಮನವಿ ಮಾಡಿದೆ. ಆದರೆ ಪಾಕಿಸ್ತಾನ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಕರ್ತಾರ್‌ಪುರ್‌ಕ್ಕೆ ತೆರಳೋ ಭಾರತೀಯರಿಗೆ ಪಾಕಿಸ್ತಾನ ಬಸ್ ಚಾಲಕನ ಸಂದೇಶ!.

ಮಹಾರಾಜ ರಂಜಿತ್ ಸಿಂಗ್ ಪುಣ್ಯತಿಥಿ ಅಂಗವಾಗಿ ಪವಿತ್ರ ಕ್ಷೇತ್ರ ತೆರಯಲು ಪಾಕಿಸ್ತಾನ ನಿರ್ಧರಿಸಿದೆ. ಈ ಸಂದರ್ಭದಲ್ಲಿ ಭಕ್ತರಿಗೆ ಅವಕಾಶವಾಗುವಂತೆ ಕರ್ತಾರ್‌ಪುರ್ ತೆರಯಲು ಭಾರತಕ್ಕೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಮನವಿ ಮಾಡಿದ್ದರು.

ಸಿಖ್ಖರ ಬಹುಕಾಲದ ಬೇಡಿಕೆ ಸಾಕಾರ; ಇಂಡೋ-ಪಾಕ್‌ನ ಸಂಬಂಧ ಸೇತುವಾಗುತ್ತಾ ಕಾರಿಡಾರ್‌?

ಮಾರ್ಚ್ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಕರ್ತಾರ್‌ಪುರ್ ಪ್ರವೇಶ ಸ್ಥಗಿತಗೊಳಿಸಿತ್ತು. ಸದ್ಯ ಭಾರತ ಹಾಗೂ ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದೆ. ಭಾರತದಲ್ಲಿನ ಪಾಕಿಸ್ತಾನ ಹೈಕಮಿಶನರ್ ಕಚೇರಿ ಅಧಿಕಾರಿಗಳನ್ನು ಭಾರತ ತಕ್ಷಣವೇ ಹಿಂತಿರುಗಲು ಸೂಚಿಸಿತ್ತು. ಹಲವು ಘಟನೆಗಳು ಇಂಡೋ-ಪಾಕ್ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿತ್ತು. ಹೀಗಾಗಿ ಪಾಕಿಸ್ತಾನ ಎರಡು ದೇಶದ ಉತ್ತಮ ಸಂಬಂಧಕ್ಕೆ ಕರ್ತಾರ್‌ಪುರ್ ಕಾರಿಡಾರ್ ಆರಂಭ ಸೂಕ್ತ ಎಂದಿತ್ತು. ಆದರೆ ಸದ್ಯ ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.