ನವದೆಹಲಿ(ಅ. 07)  ಇದನ್ನು ಸಂತಸದ ಸುದ್ದಿ ಎಂದೆ ಭಾವಿಸಿಕೊಳ್ಳಬೇಕಿದೆ. ಕೊರೋನಾ ವೈರಸ್ ಸೋಂಕು ಚೇತರಿಕೆ ಪ್ರಮಾಣ ಭಾರತದಲ್ಲಿ  56.6 ಲಕ್ಷ ದಾಟಿದೆ. ರಾಷ್ಟ್ರೀಯ ಚೇತರಿಕೆ ದರ  ಶೇಕಡಾ 84.7 ಕ್ಕೆ ಏರಿದ್ದು ಆಶಾಭಾವ ಮೂಡಿಸಿದೆ.

 17 ರಾಜ್ಯಗಳು  ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚೇತರಿಕೆ ದರ ಇನ್ನು ಜಾಸ್ತಿಯಿರುವುದು ಕೊಂಚ ನೆಮ್ಮದಿ ತಂದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಮಾಹಿತಿ ನೀಡಿದೆ.

ಜಾಗತಿಕ ಮಟ್ಟದಲ್ಲಿಯೂ ಭಾಋತದ ಚೇತರಿಕೆ ಪ್ರಮಾಣವೇ ಜಾಸ್ತಿಯಿದೆ. ಕೊರೋನಾ ವೃಯಸ್ ಸೋಂಕು ದಾಖಲಾಗುತ್ತಿರುವ ಶೇಕಡಾವಾರು ಪ್ರಮಾಣವು ಕಳೆದ ಮೂರು ವಾರದಲ್ಲಿ ಇಳಿಕೆಯಾಗಿದೆ. ಸೋಂಕು ದಾಖಲಾಗುವ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಚೇತರಿಕೆ ಪ್ರಮಾಣ  ಲ್ಲಿ ಶೇಕಡಾ 37 ರಷ್ಟು  ಹೆಚ್ಚಿದೆ. ಅಂದರೆ ಮೂರು ವಾರದಲ್ಲಿ ಶೇಕಡಾ  56  ಏರಿಕೆ ಕಂಡಿರುವುದು ಒಳ್ಳೆಯ ಬೆಳವಣಿಗೆ.

ಮಣಿದ ಸರ್ಕಾರ; ಕೊನೆಗೂ ಮಾಸ್ಕ್ ದಂಡ ಇಳಿಸಿದ ಸರ್ಕಾರ

ಬಿಹಾರ,  ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಅಸ್ಸಾಂ, ತೆಲಂಗಾಣದಲ್ಲಿ ಮಾತ್ರ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಕಳೆದ ವಾರ ಭಾರತದ COVID-19 ಸಾವಿನ ಸಂಖ್ಯೆ ಒಂದು ಲಕ್ಷ ಪ್ರಕರಣಗಳನ್ನು ದಾಟಿದೆ. ಆರೋಗ್ಯ ಸಚಿವಾಲಯ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಭಾರತದ COVID-19 ಮೊತ್ತವು ಆಗಸ್ಟ್ 7 ರಂದು 20 ಲಕ್ಷ ದಾಟಿದ್ದರೆ, ಆಗಸ್ಟ್ 23 ರ ವೇಳೆಗೆ 30 ಲಕ್ಷ ಮತ್ತು ಸೆಪ್ಟೆಂಬರ್ 5 ರ ವೇಳೆಗೆ 40 ಲಕ್ಷ ಮೀರಿತ್ತು. . ಸೆಪ್ಟೆಂಬರ್ 25 ರ ವೇಳೆಗೆ COVID-19 ಎಣಿಕೆ 60 ಲಕ್ಷಕ್ಕೆ ತಲುಪಿ  ಆತಂಕಕ್ಕೆ ಕಾರಣವಾಗಿತ್ತು.

 2.10 ಲಕ್ಷ  ಜನರು ರೋಗಕ್ಕೆ ಬಲಿಯಾಗಿದ್ದಾರೆ.  66.23 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಭಾರತ ವಿಶ್ವದಲ್ಲಿ ಕೊರೋನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.