Asianet Suvarna News Asianet Suvarna News

ಸತತ 5ನೇ ದಿನವೂ 3 ಲಕ್ಷಕ್ಕಿಂತ ಕಡಿಮೆ ಕೇಸು!

* ಸತತ 5ನೇ ದಿನವೂ 3 ಲಕ್ಷಕ್ಕಿಂತ ಕಡಿಮೆ ಕೇಸು

* 2.59 ಲಕ್ಷ ಕೇಸು, 4209 ಜನರ ಸಾವು

* 2.27 ಲಕ್ಷ ಜನರು ಸೋಂಕಿಂದ ಚೇತರಿಕೆ

India records 2 59 lakh new Covid 19 cases in 24 hrs fatalities go above 4000 pod
Author
Bangalore, First Published May 22, 2021, 9:19 AM IST

ನವದೆಹಲಿ(ಮೇ.22): ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 2,59,551 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಜೊತೆಗೆ 4209 ಜನರು ವೈರಸ್‌ಗೆ ಬಲಿಯಾಗಿದ್ದಾರೆ.

ಇದರೊಂದಿಗೆ ಸತತ 5ನೇ ದಿನವೂ ದೇಶದಲ್ಲಿ 3 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾದಂತೆ ಆಗಿದ್ದು, ಇದು 2ನೇ ಅಲೆ ಇಳಿಕೆಯ ಸುಳಿವು ಎಂದು ವಿಶ್ಲೇಷಿಸಲಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2.27 ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಶುಕ್ರವಾರದ ಸೋಂಕಿತರ ಸೇರ್ಪಡೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿರ ಪ್ರಮಾಣ 2.60 ಕೋಟಿಗೆ ಏರಿಕೆಯಾಗಿದ್ದರೆ, ಸಾವಿನ ಪ್ರಮಾಣ 2.91 ಲಕ್ಷಕ್ಕೆ ತಲುಪಿದೆ. ಇದೇ ವೇಳೆ ದೇಶದಲ್ಲಿ 30.27 ಲಕ್ಷ ಸಕ್ರಿಯ ಸೋಂಕಿತರಿದ್ದಾರೆ. ಇದು ಒಟ್ಟು ಸೋಂಕಿತರ ಪ್ರಮಾಣದಲ್ಲಿ ಶೇ.11.63ರಷ್ಟು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮತ್ತೊಂದೆಡೆ ಚೇತರಿಕೆ ಪ್ರಮಾಣ ಶೇ.87.25ಕ್ಕೆ ಏರಿಕೆಯಾಗಿದೆ. ಆದರೆ ಸಾವಿನ ಪ್ರಮಾಣ ಏರುಗತಿಯಲ್ಲಿರುವ ಕಾರಣ, ಪ್ರತಿ 100 ಜನರಲ್ಲಿ ಸಾವಿಗೀಡಾಗುತ್ತಿರುವವರ ಪ್ರಮಾಣ ಶೇ.1.12ಕ್ಕೆ ಹೆಚ್ಚಳವಾಗಿದೆ.

ಅತಿ ಹೆಚ್ಚು ಸಾವು

ರಾಜ್ಯ ಶುಕ್ರವಾರ ಒಟ್ಟು

ಮಹಾರಾಷ್ಟ್ರ 548 85355

ಕರ್ನಾಟಕ 397 22579

ತಮಿಳುನಾಡು 236 18588

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios