Asianet Suvarna News Asianet Suvarna News

ಕೋವಿಡ್‌ಗೆ ದಾಖಲೆಯ 1341 ಬಲಿ: 2.34 ಲಕ್ಷ ಮಂದಿಗೆ ಸೋಂಕು!

ಕೋವಿಡ್‌ಗೆ ದಾಖಲೆಯ 1341 ಬಲಿ| ಇದು ಈವರೆಗಿನ ಸಾರ್ವಕಾಲಿಕ ಏಕದಿನದ ದಾಖಲೆ| ದಾಖಲೆಯ 2.34 ಲಕ್ಷ ಮಂದಿಗೆ ಸೋಂಕು

India records 2 34 lakh fresh covid cases 1341 deaths pod
Author
Bangalore, First Published Apr 18, 2021, 8:14 AM IST

ನವದೆಹಲಿ(ಏ.18): ಈವರೆಗೆ ಸೋಂಕಿನಲ್ಲಿ ದಾಖಲೆ ಬರೆಯುತ್ತಿದ್ದ ಕೊರೋನಾ ವೈರಸ್‌, ಈಗ ದ್ವಿತೀಯ ಅಲೆಯಲ್ಲಿ ಸೋಂಕಿನ ಜತಾ ಸಾವಿನಲ್ಲೂ ದಾಖಲೆ ಬರೆದಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಯ ಅವಧಿಯಲ್ಲಿ ಸಾರ್ವಕಾಲಿಕ ದಾಖಲೆಯಾದ 1,341 ಜನ ಸಾವನ್ನಪ್ಪಿದ್ದಾರೆ. 2020ರ ಸೆ.18ರಂದು 1247 ಜನರು ಸಾವನ್ನಪ್ಪಿದ್ದೇ ಇದುವರೆಗಿನ ಗರಿಷ್ಠವಾಗಿತ್ತು.

ಇನ್ನೊಂದೆಡೆ ಚೇತರಿಕೆ ಪ್ರಮಾಣ ಕುಸಿಯುತ್ತಿದ್ದು, ಶೇ.87.23ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16 ಲಕ್ಷ ದಾಟಿದ್ದು, 16,79,740ಕ್ಕೆ ಏರಿದೆ. ಇದು ಒಟ್ಟಾರೆ ಪ್ರಕರಣಗಳ ಶೇ.11.56. ದೇಶದಲ್ಲಿ ಸತತ 38 ದಿನದಿಂದ ಸೋಂಕು ಏರುತ್ತಿದ್ದು, 2 ಲಕ್ಷಕ್ಕಿಂತ ಅಧಿಕ ಪ್ರಕರಣ ದಾಖಲಾಗಿದ್ದು ಸತತ 3ನೇ ದಿನ.

ಈವರೆಗೆ 1,45,26,609 ಜನರಿಗೆ ದೇಶದಲ್ಲಿ ಕೊರೋನಾ ಬಂದಿದ್ದು, 1,26,71,220 ಜನ ಗುಣವಾಗಿದ್ದಾರೆ. 1,75,649 ಜನರು ಸಾವನ್ನಪ್ಪಿದ್ದಾರೆ.

160: ಪ್ರತಿ ನಿಮಿಷಕ್ಕೆ ದಾಖಲಾಗುತ್ತಿರುವ ಸೋಂಕು

1: ಪ್ರತಿ ನಿಮಿಷಕ್ಕೆ ದಾಖಲಾಗುತ್ತಿರುವ ಸಾವಿನ ಸಂಖ್ಯೆ

Follow Us:
Download App:
  • android
  • ios