2 ಮೇಡ್ ಇನ್ ಇಂಡಿಯಾ ಲಸಿಕೆಯಿಂದ ಮನುಕುಲ ಉಳಿಸಲು ಭಾರತ ಸಜ್ಜು: ಮೋದಿ!
ಭಾರತದಲ್ಲಿ ನಿರ್ಮಾಣವಾದ ಎರಡು ಕೊರೋನಾ ಲಸಿಕೆ| ಕೊರೋನಾ ಲಸಿಕೆಯಿಂದ ಮಾನವರ ಉಳಿಸಲು ದೇಶ ಸಜ್ಜಾಗಿದೆ| 16ನೇ ಪ್ರವಾಸಿ ಭಾರತೀಯ ದಿನ ಸಮಾವೇಶದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
ನವದೆಹಲಿ(ಜ.09): ಭಾರತದಲ್ಲಿ ನಿರ್ಮಾಣವಾದ ಎರಡು ಕೊರೋನಾ ಲಸಿಕೆಯಿಂದ ಮಾನವರ ಉಳಿಸಲು ದೇಶ ಸಜ್ಜಾಗಿದೆ ಎಂದು ಪಿಎಂ ಮೋದಿ ತಿಳಿಸಿದ್ದಾರೆ. ವಿದೇಶ ವ್ಯವಹಾರಗಳ ಸಚಿವಾಲಯ ಆನ್ಲೈನ್ನಲ್ಲಿ ಆಯೋಜಿಸಿದ 16ನೇ ಪ್ರವಾಸಿ ಭಾರತೀಯ ದಿನ ಸಮಾವೇಶವದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜಾಗತಿಕವಾಗಿ ಭಾರತೀಯ ಸಮುದಾಯ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
16ನೇ ಪ್ರವಾಸಿ ಭಾರತೀಯ ದಿನ ಸಮಾವೇಶದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನಾವು ವಿಶ್ವದ ವಿವಿಧ ಮೂಲೆ ಮೂಲೆಗಳಿಂದ ಇಂಟರ್ನೆಟ್ ಮೂಲಕ ಸಂಪರ್ಕದಲ್ಲಿದ್ದೇವೆ. ಆದರೆ, ನಮ್ಮ ಮನಸ್ಸು ಯಾವತ್ತೂ ಭಾರತ ಮಾತೆಯೊಂದಿಗಿದೆ. ಕಳೆದ ಕೆಲ ತಿಂಗಳಲ್ಲಿ ವಿವಿಧ ದೇಶಗಳ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ಸಾಮಾನ್ಯ ಜನರಿಂದ ಹಿಡಿದು ವೈದ್ಯರವರೆಗೆ ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ದೇಶದ ಸಮಾಜಕ್ಕೆ ನೀಡಿದ ಸೇವೆ ಬಗ್ಗೆ ಆ ಮುಖಂಡರು ನನಗೆ ತಿಳಿಸಿದ್ದಾರೆ' ಎಂದು ಪ್ರಧಾನಿ ಮೋದಿ ಹೇಳಿದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶವು ಮೊದಲು ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಮತ್ತು ಟೆಸ್ಟಿಂಗ್ ಕಿಟ್ ಅನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ನಾವು ಸ್ವಾವಲಂಬಿಗಳಾಗಿದ್ದೇವೆ, ನಮ್ಮ ದೇಶದಲ್ಲೇ ಎರಡು ಕೋವಿಡ್-19 ಲಸಿಕೆ ತಯಾರಾಗಿದೆ ಎಂದು ಮೋದಿ ಹೇಳಿದ್ದಾರೆ.