Asianet Suvarna News Asianet Suvarna News

ಜಾಗತಿಕ ಹಸಿವು ಸೂಚ್ಯಂಕದಲ್ಲಿ ನೇಪಾಳ, ಬಾಂಗ್ಲಾ, ಪಾಕಿಸ್ತಾನಕ್ಕಿಂತಲೂ ಕೆಳಗಿದೆ ಭಾರತ!

ಜಾಗತಿಕ ಹಸಿವು ಸೂಚ್ಯಂಕ ಬಿಡುಗಡೆ| 107 ರಾಷ್ಟ್ರಗಳ ಪೈಕಿ ಭಾರತ 94ನೇ ಸ್ಥಾನ| ನೆರೆ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕಿಂತಲೂ ಭಾರತ ಕೆಳ ಸ್ಥಾನದಲ್ಲಿ

India ranks 94 on Global Hunger Index 2020 below Nepal Bangladesh and Pakistan pod
Author
Bangalore, First Published Oct 17, 2020, 5:07 PM IST
  • Facebook
  • Twitter
  • Whatsapp

ನವದೆಹಲಿ(ಅ.17): ಜಾಗತಿಕ ಹಸಿವು ಸೂಚ್ಯಂಕ ಬಿಡುಗಡೆಯಾಗಿದ್ದು, ಈ ಬಾರಿ 107 ರಾಷ್ಟ್ರಗಳ ಪೈಕಿ ಭಾರತ 94ನೇ ಸ್ಥಾನದಲ್ಲಿದೆ. ಅದರಲ್ಲೂ ವಿಶೇಷವಾಗಿ ನೆರೆ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕಿಂತಲೂ ಭಾರತ ಕೆಳ ಸ್ಥಾನದಲ್ಲಿದೆ.

ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ಕಾಡಿದ್ದು, ಈ ನಡುವೆ ವಿಶ್ವಾದ್ಯಂತ ಹಸಿವಿನ ಮಟ್ಟ ಮತ್ತು ಅಪೌಷ್ಟಿಕತೆ ಲೆಕ್ಕಹಾಕುವ ಸೂಚ್ಯಂಕ ಶುಕ್ರವಾರ ಬಿಡುಗಡೆ ಯಾಗಿದೆ. ನೇಪಾಳ ಮತ್ತು ಬಾಂಗ್ಲಾದೇಶ 73 ಮತ್ತು 75 ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 88 ನೇ ಸ್ಥಾನದಲ್ಲಿದೆ. ಇನ್ನು ಕೊರೋನಾ ಬಹುತೇಕ ರಾಷ್ಟ್ರಗಳ ಆಹಾರ ಮತ್ತು ಪೌಷ್ಠಿಕಾಂಶದ ಸುರಕ್ಷತೆಯನ್ನು ದುರ್ಬಲಗೊಳಿಸಿದೆ. ಇದರ ಪರಿಣಾಮಗಳು ಭವಿಷ್ಯದಲ್ಲಿ ಏರಿಳಿತ ಉಂಟುಮಾಡಬಹುದೆಂದು ಎಂದು ವರದಿ ತಿಳಿಸಿದೆ.

Global Hunger Index 2020 ವರದಿಯನ್ನು ವೆಲ್ತುಂಗರ್ಹಿಲ್ಫ್ ಮತ್ತು ಕನ್ಸರ್ನ್ ವರ್ಲ್ಡ್ ವೈಡ್ ಜಂಟಿಯಾಗಿ ಬಿಡುಗಡೆಗೊಳಿಸಿದೆ. ಈ ವರದಿಯನ್ವಯ ಭಾರತದಲ್ಲಿ ಹಸಿವಿನ ಮಟ್ಟ 27.2 ರೊಂದಿಗೆ ಗಂಭೀರವಾಗಿದೆ ಎಂದು ತಿಳಿಸಲಾಗಿದೆ. 

ಇನ್ನು ಈ ವರದಿ ಭಾರತದ ವಾಸ್ತವ ಪರಿಸ್ಥಿತಿ ಬಹಿರಂಗಪಡಿಸಿದೆ. ದೇಶದಲ್ಲಿನ ಹಸಿವಿನ ಮಟ್ಟವನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಹಾರ ಭದ್ರತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೋರಾಟಗಾರರು ಹೇಳಿದ್ದಾರೆ.

Follow Us:
Download App:
  • android
  • ios