ನವದೆಹಲಿ(ಡಿ.29): ಕೊರೋನಾ ರೂಪಾಂತರ ವೈರಸ್ ತಳಿ ಪತ್ತೆಯಾಗಿರುವ ಕಾರಣ ದೇಶದಲ್ಲಿ ತೀವ್ರ ಮುನ್ನಚ್ಚೆರಿಕೆ ವಹಿಸಲಾಗುತ್ತಿದೆ. ರೂಪಾಂತರ ವೈರಸ್ ತೀವ್ರವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎಚ್ಚರಿಕೆ ಅತೀ ಅಗತ್ಯವಾಗಿದೆ. ಬೆಂಗಳೂರು ಸೇರಿದಂತೆ ರೂಪಾಂತರ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಇದೀಗ ಬ್ರಿಟನ್ ವಿಮಾನಗಳ ನಿರ್ಬಂಧ ಮುಂದುವರಿಸುವು ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ.

ಕೊರೋನಾ ಅತೀ ಹೆಚ್ಚು ಬಲಿ ಪಡೆದಿದ್ದು ಪುರುಷರನ್ನೋ-ಮಹಿಳೆಯರೋ? ಇಲಾಖೆ ವರದಿ ಪ್ರಕಟ

ಬ್ರಿಟನ್‌ನಲ್ಲಿ ಕಾಣಿಸಿಕೊಂಡ ರೂಪಾಂತರ ವೈರಸ್ ತೀವ್ರವಾಗಿ ಹರಡು ಆರಂಭಿಸಿದಾಗ, ಭಾರತ ಡಿಸೆಂಬರ್ 31ರ ವರೆಗೆ ಬ್ರಿಟನ್ ವಿಮಾನ್‌ಗಳ ಮೇಲೆ ನಿರ್ಬಂಧ ಹೇರಿತ್ತು. ಆದರೆ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ 6 ಮಂದಿಯಲ್ಲಿ ರೂಪಾಂತರ ವೈರಸ್ ತಳಿ ಪತ್ತೆಯಾದ ಕಾರಣ ಇದೀಗ ಬ್ರಿಟನ್ ವಿಮಾನ ನಿರ್ಬಂಧವನ್ನು ಜವರಿ ವರೆಗೂ ಮುಂದುವರಿಸುವ ಸಾಧ್ಯತ ಇದೆ.

ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಈ ಕುರಿತು ಮಾಹಿತಿ ನೀಡಿದ್ದಾರೆ. ಬ್ರಿಟನ್ ವಿಮಾನಕ್ಕೆ ತಾತ್ಕಾಲಿಕ ನಿಬ್ರಂಧ ವಿಧಿಸುವ ಮೂಲಕ ಹರಡುವಿಕೆಯನ್ನು ತಡೆಯುಲು ಸಾಧ್ಯವಿದೆ ಎಂದಿದ್ದಾರೆ.