ಮಯನ್ಮಾರ್(ಅ.06): ಭಾರತ ಹೊರತು ಪಡಿಸಿ ಇತರ ನೆರೆಯ ರಾಷ್ಟ್ರಗಳ ಜೊತೆ ಚೀನಾ ಹಲವು ಮಹತ್ವದ ಒಪ್ಪಂದ ಮಾಡಿಕೊಳ್ಳುತ್ತಿದೆ. ಇದರಲ್ಲಿ ಪ್ರಮುಖವಾಗಿ ಎನರ್ಜಿ ಸೆಕ್ಟರ್‌ನಲ್ಲಿ ಮಯನ್ಮಾರ್ ಜೊತೆ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಲ್ಲಿ ತೈಲ ಶೇಖರಣೆ ಹಾಗೂ ವಿತರಣೆ ಕೂಡ ಪ್ರಮುಖವಾಗಿದೆ. ಇದೀಗ ಚೀನಾಗೆ ಸೆಡ್ಡು ಹೊಡೆಯಲು ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ.

ದೇಶಕ್ಕೆ ಸಹಸ್ರಾರು ಕೋಟಿ ಉಳಿಸಿದ ಮಂಗಳೂರು!..

ಮಯನ್ಮಾನ್ ಪ್ರವಾಸದಲ್ಲಿರುವ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲ ಹಾಗೂ ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ ನರವಾನೆ ತೈಲ ಸಂಸ್ಕರಣಗಾರ ಪ್ರಸ್ತಾಪ ಮುಂದಿಟ್ಟಿದ್ದಾರೆ. ಮಯನ್ಮಾರ್‌ನ ಯಂಗಾನ್‌ನ ತಾನ್‌ಲಿನ್ ಪ್ರಾಂತ್ಯದಲ್ಲಿ ಬರೋಬ್ಬರಿ 6 ಬಿಲಿಯನ್ ಡಾಲರ್ ಮೊತ್ತದಲ್ಲಿ ತೈಲ ಸಂಸ್ಕರಣಗಾರ ನಿರ್ಮಿಸಲು ಭಾರತ ಮುಂದಾಗಿದೆ. 

ಭಾರತದ ತೈಲ ಸಂಸ್ಕರಣಾಗಾರದಿಂದ ಉಭಯದೇಶಗಳಲ್ಲಿ ಅತ್ಯಂತ ಲಾಭವಾಗಲಿದೆ. ಇತ್ತ ಚೀನಾ ಶೇಕಡಾ 70 ವಿದೇಶಿ ಬಂಡವಾಳ ಹೂಡಿಯನ್ನುಎನರ್ಜಿ ಸೆಕ್ಟರ್‌ನಲ್ಲಿ ಮಾಡುತ್ತಿದೆ. ಇದೀಗ ಭಾರತ ಕೂಡ ಆಯಿಲ್ ರಿಫಿನರಿ ಯೋಜನೆ ಕೈಗೆತ್ತಿಕೊಂಡಿದ್ದು, ಚೀನಾಗೆ ಸೆಡ್ಡು ಹೊಡೆಯಲು ಮುಂದಾಗಿದೆ.