ಭಾರತ ಎಂದೂ ಹಿಂದೂ ದೇಶ ಆಗಿಲ್ಲ, ಮುಂದೆ ಕೂಡ ಆಗಲ್ಲ ಎಂದು ಎಸ್‌ಪಿ ಮುಖಂಡ ಮೌರ್ಯ ಹೇಳಿದ್ದಾರೆ. ಇನ್ನೊಂಡೆದೆ ‘ಇಂಡಿಯಾ’ ಬದಲು ‘ಭಾರತ’ ಎನ್ನಿ ಎಂದು ಮೋಹನ್‌ ಭಾಗವತ್‌ ಕರೆ ಕೊಟ್ಟಿದ್ದಾರೆ.

ಲಖನೌ (ಸೆ.3): ಭಾರತ ಹಿಂದೂ ರಾಷ್ಟ್ರ ಎಂದು ಹೇಳಿದ್ದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆಗೆ ಸಮಾಜವಾದಿ ಪಕ್ಷದ ಶಾಸಕ ಸ್ವಾಮಿ ಪ್ರಸಾದ್‌ ಮೌರ್ಯ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿದ ಮೌರ್ಯ,‘ಇಂಡಿಯಾ ಯಾವತ್ತೂ ಹಿಂದೂ ರಾಷ್ಟ್ರವಲ್ಲ, ಇದು ಬಹುತ್ವವನ್ನು ಆಚರಿಸಿಕೊಂಡು ಬಂದಿರುವ ದೇಶವಾಗಿದೆ. ನಮ್ಮ ಸಂವಿಧಾನವು ಜಾತ್ಯಾತೀತ ಮೌಲ್ಯದ ಆಧಾರದಲ್ಲಿ. ದೇಶದಲ್ಲಿರುವವರೆಲ್ಲರೂ ಇಂಡಿಯನ್ಸ್‌, ನಮ್ಮ ಸಂವಿಧಾನವು ಎಲ್ಲ ಧರ್ಮ, ಸಂಸ್ಕೃತಿ, ಆಚರಣೆಗಳನ್ನು ಒಲಗೊಂಡು ರಚಿಸಲಾಗಿದೆ’ ಎಂದು ತಿರುಗೇಟು ನೀಡಿದರು. ಮೋಹನ್‌ ಭಾಗವತ್‌ ನಾಗಪುರದ ಕಾರ್ಯಕ್ರಮದಲ್ಲಿ ಭಾರತ ಹಿಂದೂ ರಾಷ್ಟ್ರ ಎಂದು ಹೇಳಿದ್ದರು.

ಡಿಗ್ರಿ, ತಾತ್ಕಾಲಿಕ ಪ್ರಮಾಣ ಪತ್ರದಲ್ಲಿ ಆಧಾರ್‌ ನಮೂದಿಗೆ ನಿಷೇಧ

ಎಲ್ಲ ಭಾರತೀಯರೂ ಹಿಂದೂ, ಹಿಂದೂ ಎಂಬುದು ಭಾರತೀಯತೆ ಸಂಕೇತ: ಭಾಗವತ್‌
‘ದೇಶದ ಪ್ರತಿಯೊಬ್ಬರು ಹಿಂದೂಗಳು ಹಾಗೂ ಹಿಂದೂ ಎಂದರೆ ಭಾರತೀಯತೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಶುಕ್ರವಾರ ದೈನಿಕ್‌ ತರುಣ್‌ ಭಾರತ್‌ ಹಿಂದಿ ದಿನಪತ್ರಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಹಿಂದೂಸ್ತಾನವು ಹಿಂದೂ ರಾಷ್ಟ್ರವಾಗಿದ್ದು, ಇದು ವಾಸ್ತವ. ಅದೇ ರೀತಿ ಸೈದಾಂತಿಕವಾಗಿ ಪ್ರತಿ ಭಾರತೀಯನೂ ಹಿಂದೂ ಹಾಗೂ ಹಿಂದೂ ಎಂದರೆ ಭಾರತೀಯತೆ. ಪ್ರಸ್ತುತ ಭಾರತದಲ್ಲಿರುವ ಎಲ್ಲರಿಗೂ ಹಿಂದೂಗಳ ಹಿನ್ನೆಲೆ ಇದ್ದೇ ಇರುತ್ತದೆ. ಇದನ್ನು ಕೆಲವರು ಅರಿತುಕೊಂಡು ಅನುಸರಿಸುತ್ತಿದ್ದರೆ, ಇನ್ನು ಕೆಲವರು ಸ್ವಾರ್ಥ ಹಾಗೂ ಹವ್ಯಾಸಕ್ಕಾಗಿ ಅವಲಂಬಿಸಿಕೊಂಡಿಲ್ಲ. ಇನ್ನು ಕೆಲವರು ಅರಿತುಕೊಳ್ಳಲು ಆಗದೇ ಅಥವಾ ಮರೆತುಹೋಗಿದ್ದಾರೆ’ ಎಂದರು.

ಲಿವ್‌ ಇನ್‌ ರಿಲೇಶನ್‌ಶಿಪ್‌ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ, ವೈವಾಹಿಕ ವ್ಯವಸ್ಥೆ ನಾಶವೆಂದು

ಇಂಡಿಯಾ ಬದಲು ಭಾರತ ಎನ್ನಿ: ಮೋಹನ್‌ ಭಾಗವತ್‌ ಕರೆ
ಗುವಾಹಟಿ: ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಸಂಭೋಧಿಸಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷರಾದ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,‘ಭಾರತ ಎಂಬ ಹೆಸರು ಹಿಂದಿನಿಂದಲೂ ಇರುವಂಥದ್ದು, ಹಾಗಾಗಿ ಜನರು ಇಂಡಿಯಾ ಬದಲು ಭಾರತ ಎಂದು ಕರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂದರು. ಜೊತೆಗೆ ಯೋಗದ ಬಗ್ಗೆ ಮಾತನಾಡಿದ ಅವರು,‘ಇಂದು ಜಗತ್ತಿಗೆ ಭಾರತ ಬೇಕಾಗಿದೆ. ನಮ್ಮನ್ನು ಬಿಟ್ಟಿರಲು ಜಗತ್ತಿಗೆ ಅಸಾಧ್ಯವಾಗಿದೆ. ಯೋಗದ ಮೂಲಕ ಭಾರತ ವಿಶ್ವದ ಜೊತೆ ಬೆಸೆದುಕೊಂಡಿದೆ. ಪೋಷಕರು ತಮ್ಮ ಮಕ್ಕಳಿಗೆ ಭಾರತದ ಸಂಸ್ಕೃತಿಯನ್ನು ಕಲಿಸಿಕೊಡಬೇಕು’ ಎಂದರು.