ನವ​ದೆ​ಹ​ಲಿ(ಜೂ.05): ಕೊರೋನಾ ವೈರ​ಸ್‌ನ ಮೂಲ ಪತ್ತೆಯ ತನಿ​ಖೆಗೆ ಪಾಶ್ಚಿ​ಮಾತ್ಯ ರಾಷ್ಟ್ರ​ಗ​ಳ ಒತ್ತಾ​ಯದ ಬೆನ್ನಲ್ಲೇ, ವೈರಸ್‌ ಮೂಲದ ವಿರುದ್ಧ ಕ್ರಿಮಿ​ನಲ್‌ ತನಿ​ಖೆ ನಡೆ​ಸಲು ಭಾರತ ಸರ್ಕಾರ ಚಿಂತನೆ ನಡೆ​ಸಿದೆ ಎಂದು ಮೂಲ​ಗಳು ತಿಳಿ​ಸಿವೆ.

ಈ ಕುರಿ​ತ ಎಫ್‌​ಐ​ಆರ್‌ಗಾಗಿ ಕರಡು ಪ್ರಸ್ತಾ​ವನೆ ಸಿದ್ಧ​ವಾ​ಗಿದ್ದು, ಈ ಪ್ರಸ್ತಾ​ವನೆ ಅನು​ಮೋ​ದ​ನೆ​ಗೊಂಡಲ್ಲಿ, ‘ವೆಪನ್ಸ್‌ ಆಫ್‌ ಮಾಸ್‌ ಡಿಸ್ಟ್ರ​ಕ್ಷನ್‌ ಕಾಯ್ದೆ-2005’ ಹಾಗೂ ಇತರ ಕಾಯ್ದೆಯಡಿ ಕೇಸ್‌ ದಾಖ​ಲಾ​ಗಬಹುದು. ಕೊರೋನಾ ಮೂಲ ಪತ್ತೆಯಾಗಿದ್ದು ಚೀನಾದ ವುಹಾನ್‌ನಲ್ಲಿ. ಇದನ್ನು ಜೈವಿಕ ಯುದ್ಧಕ್ಕೆ ಚೀನಾ ಬಳಸಿಕೊಂಡಿದೆ ಎಂಬ ದೂರು ದಾಖಲಿಸಿಕೊಂಡು ಎನ್‌ಐಎ ಇದರ ತನಿಖೆ ಆರಂಭಿಸಬಹುದು. ಪ್ರಕರಣದ ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷದಿಂದ ಗರಿಷ್ಠ ಜೀವಾವಧಿವರೆಗೆ ಶಿಕ್ಷೆ ಆಗಲಿದೆ. ಆದರೆ ಇದನ್ನೂ ಚಿಂತನಾ ಹಂತದಲ್ಲಿದ್ದು ಅಂತಿಮ ನಿರ್ಧಾರ ಆಗಿಲ್ಲ ಎಂದು ತಿಳಿದುಬಂದಿದೆ.

ಆದರೂ ಈ ಕೇಸ್‌ ಕೇವಲ ಸಾಂಕೇ​ತಿ​ಕ​ವಾ​ಗಿ​ರಬಹುದು. ಭಾರ​ತವು ಯಾವುದೇ ಕಾರ​ಣಕ್ಕೂ ಜೈವಿಕ ಯುದ್ಧ​ವನ್ನು ಸಹಿ​ಸು​ವು​ದಿಲ್ಲ ಎಂಬ ಸಂದೇಶವನನ್ನು ವಿಶ್ವಕ್ಕೆ ಸಾರಲು ಮುಂದಾ​ಗಿದೆ ಎಂದು ಗೊತ್ತಾಗಿದೆ.