Asianet Suvarna News Asianet Suvarna News

ಬಹುಮತದ ಸರ್ಕಾರವಿದ್ದರೆ ಮಾತ್ರ ನಾರಿಶಕ್ತಿ ವಂದನ್‌ ಬಿಲ್‌ ಜಾರಿ ಸಾಧ್ಯ: ಪ್ರಧಾನಿ ಮೋದಿ

ದೇಶದಲ್ಲಿ ಒಂದು ಪೂರ್ಣ ಬಹುಮತದ ಸರ್ಕಾರಕ್ಕೆ ಅಧಿಕಾರ ಕೊಟ್ಟಾಗ ಮಾತ್ರ ನಾರಿಶಕ್ತಿ ವಂದನ್‌ ನಂತಹ ಕಾನೂನು ಜಾರಿಗೆ ತರಲು ಸಾಧ್ಯವಾಗುತ್ತದೆ.

India majority government only can be passed Nari Shakti Vandan Bill said PM Narendra Modi sat
Author
First Published Sep 22, 2023, 12:47 PM IST

ನವದೆಹಲಿ (ಸೆ.22): ದೇಶದಲ್ಲಿ ನಮ್ಮ ಸರ್ಕಾರಕ್ಕೆ ಪೂರ್ಣ ಬಹುಮತ ನೀಡಿ ಶಕ್ತಿ ನೀಡಿದ್ದೀರಿ. ನೀವು ನೀಡಿದ ತಾಕತ್ತಿನಿಂದ ಇಂತಹ ಒಂದು ದೊಡ್ಡ ಕಾನೂನು ಜಾರಿಗೆ ತರಲು ಸಾಧ್ಯವಾಯಿತು. ಇದರಿಂದಾಗಿಯೇ ಎರಡೂ ಸದನಗಳಲ್ಲಿ ಪೂರ್ಣ ಬಹುಮತದಿಂದ ಮಹಿಳಾ ನಾರಿಶಕ್ತಿ ವಂದನ್‌ ಕಾನೂನು ಜಾರಿಗೆ ತರಲು ಸಾಧ್ಯವಾಯಿತು. ದೇಶದಲ್ಲಿ ಪೂರ್ಣ ಬಹುಮತದ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಉತ್ತಮ ಕಾಯ್ದೆ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಲೋಸಕಭಾ ಸದನದಲ್ಲಿ ಮಹಿಳಾ ಬಿಲ್‌ ಮಂಡಿಸಿದ ಪ್ರಧಾನಿ ನರೇಂದ್ರ ಮೋದಿಗೆ ಶುಕ್ರವಾರ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಮಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಾರಿಶಕ್ತಿ ವಂದನ್‌ ಅಧಿನಿಯಮಕ್ಕೆ ದಾಖಲೆಯ ಮತಗಳಿಂದ ಜಯಗಳಿಸಿದೆ. ಇಡೀ ದೇಶಕ್ಕೆ ವಿಶೇಷ ದಿನವಾಗಿದೆ. ಬಿಜೆಪಿಯ ಪ್ರತೊಯೊಬ್ಬ ಕಾರ್ಯಕರ್ಯರ್ತರಿಗೆ ವಿಶೇ ದಿನವಾಗಿ ಮಾರ್ಪಟ್ಟಿದೆ. ನಾರಿ ಶಕ್ತಿ ವಂದನ್‌ ಅಧಿನಿಯಮ ಸಾಮಾನ್ಯ ಕಾನೂನಲ್ಲ. ಪ್ರತಿ ಮಹಿಳೆಯರಿಗೆ ಆತ್ಮವಿಶ್ವಾಸ ಆಕಾಶದೆತ್ತರಕ್ಕೆ ಏರಿದೆ. ಪ್ರತಿಯೊಬ್ಬ ಮಹಿಳೆಯರೂ ಖುಷಿಯಿಂದ ನನಗೆ ಆಶೀರ್ವಾದಿಸಿದ್ದಾರೆ ಎಂದರು.

ದೇಶದ ನಾರಿಶಕ್ತಿ ವಂದನ್‌ ಕಾನೂನು ಗುಣಮಟ್ಟದ ಜೀವನ ನಡೆಸಲು ಮಹಿಳೆಯರಿಗೆ ಮೋದಿ ನೀಡಿದ ಗ್ಯಾರಂಟಿಗೆ ಸಾಕ್ಷಿಯಾಗಿದೆ. ಭಾರತದ ಪ್ರತಿ ಮಹಿಳೆಯರನ್ನೂ ನಾನು ಅಭಿನಂದಿಸುತ್ತೇನೆ. ಭಾರತವು ಮಹಿಳಾ ಕೇಂದ್ರಿತ ಅಭಿವೃದ್ಧಿಯತ್ತ ಸಾಗುತ್ತಿದೆ. ದಶಕಗಳಿಂದ ಈ ಮಹಿಳಾ ಬಿಲ್‌ ಜಾರಿಗೆ ಚರ್ಚೆ ಮಾಡಲಾಗುತ್ತಿತ್ತು. ಆದರೆ, ಇಚ್ಛಾಶಕ್ತಿ ಪ್ರಾಮಾಣಿಕವಾಗಿದ್ದರೆ ಕೆಲಸ ನಡೆಯುತ್ತದೆ. ಇಲ್ಲವಾದರೆ ಚರ್ಚೆ ಮಾಡಿ ಕೈ ಬಿಡಲಾಗುತ್ತದೆ. ಹೊಸ ಸಂಸತ್‌ ಭವನದಲ್ಲಿ ಮಹಿಳಾ ಬಿಲ್‌ಗೆ ಪಕ್ಷಾತೀತವಾಗಿ ಬೆಂಬಲ ಸಿಕ್ಕಿದೆ. ಭಾರತದ ನಾರಿ ಶಕ್ತಿಗೆ ಅವಕಾಶದ ಆಕಾಶವೇ ಸಿಕ್ಕಿದೆ. ಹೆಣ್ಣುಮಕ್ಕಳ ಎದುರಿಗಿದ್ದ ಅಡೆತಡೆಗಳು ಈಗ ನಿವಾರಣೆಯಾಗಿವೆ ಎಂದರು.

ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಬಿಡೆನ್‌ಗೆ ಆಹ್ವಾನ ನೀಡಿದ ಪ್ರಧಾನಿ ಮೋದಿ 

ನಮ್ಮ ಸರ್ಕಾರ ಒಂದಕ್ಕಿಂತ ಒಂದು ಇಂತಹ ಮಹತ್ತರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮಹಿಳೆಯರಿಗೆ ಗೌರವ, ಸೌಲಭ್ಯ ಹಾಗೂ ಸಮೃದ್ಧ ಜೀವನವನ್ನು ಒದಗಿಸುತ್ತಿದೆ. ಮಹಿಳೆಯರ ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಜಮಾ ಆಗುತ್ತಿದೆ. ನವಜಾತ ಹೆಣ್ಣು ಮಕ್ಕಳ ಸಾವನ್ನು ತಡೆಯುವ ನಿಟ್ಟಿನಲ್ಲಿ ಬೇಟಿ ಬಚಾವೋ ಯೋಜನೆ ಪ್ರಾರಂಭಿಸಿದ್ದೆವು. ಈಗ ಹೆಣ್ಣು- ಗಂಡು ಅನುಪಾತದಲ್ಲಿ ಸುಧಾರಣೆ ಕಂಡುಬರುತ್ತಿದೆ. ಶೌಚಾಲಯ, ಗ್ಯಾಸ್‌ ಸೌಲಭ್ಯ ಹಾಗೂ ಮನೆ ಮನೆಗೂ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಪ್ರತಿಯೊಬ್ಬರ ಕುಟುಂಬ ಸದಸ್ಯರಂತೆ ಹೆಣ್ಣುಮಕ್ಕಳ ಜೀವನ ಸುಧಾರಣೆಗೆ ಶ್ರಮಿಸುತ್ತಿದ್ದೇನೆ. ಜನ್‌ಧನ್‌ ಯೋಜನೆಯಿಂದ ಕೋಟಿ ಕೋಟಿ ಮಹಿಳೆಯರಿಗೆ ಅನುಕೂಲವಾಯಿತು. ತಾಯಿಯಾದ ನಂತರವೂ ಕೆಲಸ ಮಾಡುವುದಕ್ಕೆ ಅವಕಾಶವನ್ನು ನಿಡಲಾಯಿತು ಎಂದು ತಿಳಿಸಿದರು.

ಸೈನ್ಯದಲ್ಲಿಯೂ ಮಹಿಳೆಯರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಯಿತು. ತ್ರಿವಳಿ ತಲಾಖ್‌ನಂತಹ ಅಮಾನವೀಯ ಪದ್ಧತಿಯನ್ನು ತೊಡೆದು ಹಾಕಲು ಕಾನೀನಿನ ನೆರವು ನೀಡಲಾಯಿತು. ನಮ್ಮ ಸರ್ಕಾರಕ್ಕೆ ಪೂರ್ಣ ಬಹುಮತ ನೀಡಿ ಶಕ್ತಿ ನೀಡಿದ್ದೀರಿ. ನೀವು ನೀಡಿದ ತಾಕತ್ತಿನಿಂದ ಇಂತಹ ಒಂದು ದೊಡ್ಡ ಕಾನೂನು ಜಾರಿಗೆ ತರಲು ಸಾಧ್ಯವಾಯಿತು. ಇದರಿಂದಾಗಿಯೇ ಎರಡೂ ಸದನಗಳಲ್ಲಿ ಪೂರ್ಣ ಬಹುಮತದಿಂದ ಮಹಿಳಾ ನಾರಿಶಕ್ತಿ ವಂದನ್‌ ಕಾನೂನು ಜಾರಿಗೆ ತರಲು ಸಾಧ್ಯವಾಯಿತು. ದೇಶದಲ್ಲಿ ಪೂರ್ಣ ಬಹುಮತದ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಉತ್ತಮ ಕಾಯ್ದೆ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ಮಹಿಳೆಯರ ಸಾಮಥ್ರ್ಯದ ಬಗ್ಗೆ ನನಗೆ ಗೊತ್ತಿದೆ: ಈ ಹಿಂದೆ ಸದನದಲ್ಲಿ ಬಿಲ್‌ ಮಂಡನೆ ಮಾಡಿದಾಗ ಪೂರ್ಣ ಪ್ರಮಾಣದ ಬಹುಮತ ಸಿಕ್ಕಿರಲಿಲ್ಲ. ನಾರಿ ಶಕ್ತಿಗೆ ಅವಮಾನ ಮಾಡುವ ಕೆಲಸವೂ ನಡೆದಿತ್ತು. ನಾರಿಶಕ್ತಿಯೊಂದಿಗೆ ವಂದನೆ ಪದ ಸೇರಿಸಿದ್ದೇ ಕೆಲವರಿಗೆ ಹೊಟ್ಟೆ ಉರಿಯುವಂತಾಗಿದೆ. ನಮ್ಮ ಮಹಿಳೆಯರು ಮುಂದೆ ಸಾಗುವುದನ್ನು ತಡೆಯುತ್ತಿದ್ದರು. ಹೀಗಾಗಿ, ಪುರುಷರ ಅಹಂಕಾರದಿಂದ ಮಹಿಳೆಯನ್ನು ಈಗ ದೂರವಿಡಲಾಗಿದೆ. ನಮ್ಮ ಮಹಿಳೆಯರ ಸಾಮಥ್ರ್ಯ ನನಗೆ ಗೊತ್ತಿದೆ. ಮಾತೃ ಶಕ್ತಿಯ ಪರಿಣಾಮ ಹೇಗಿರುತ್ತದೆಂದು ನನಗೆ ಗೊತ್ತಿದೆ. 

Women Reservation Bill: ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪಾಸ್‌

ಇನ್ನು ಗುಜರಾತ್‌ನಲ್ಲಿ ನೂರಾರು ಪಂಚಾಯಿತಿಗಳಲ್ಲಿ ಒಬ್ಬರೂ ಪುರುಷ ಸದಸ್ಯರಿಲ್ಲ. ಮಹಿಳೆಯರ ಶಕ್ತಿ ಸಾಮಥ್ರ್ಯದ ಬಗ್ಗೆ ನಾನು ಗುಜರಾತ್‌ನಲ್ಲಿ ಪ್ರತ್ಯಕ್ಷವಾಗಿ ನೋಡಿದ್ದೇನೆ. ಮಹಿಳೆಯರಲ್ಲಿ ಸಕಾರಾತ್ಮಕ ಬದಲಾವಣೆಗೆ ಬೇಗನೇ ಹೊಂದಿಕೊಳ್ಳುವ ಗುಣವಿದೆ. ದೇಶದಲ್ಲಿ ನಿಜವಾದ ಬದಲಾವಣೆಯಾಗಬೇಕೆಂದರೆ ಮಹಿಳೆಯರು ಮುಂದೆ ಬರಬೇಕು. ನಾರಿಶಕ್ತಿ ವಂದನ್‌ ಅಧಿನಿಯಮವು ದೇಶದ ಭಾಗ್ಯವನ್ನೇ ಬದಲಿಸುತ್ತದೆ. ದೇಶಕ್ಕಾಗಿ ಕೆಲಸ ಮಾಡುವ ಶಕ್ತಿಯನ್ನು ಮಹಿಳೆಯರಲ್ಲಿ ತುಂಬುತ್ತದೆ. ನಾವು ಕೇಳುವ ದೊಡ್ಡದೊಡ್ಡ ಮನುಷ್ಯರ ಹೆಸರಿನ ಹಿಂದೆ ಮಹಿಳೆಯರಿರುತ್ತಾರೆ. ಮಹಿಳೆಯರಿಗೆ ದೇವರೇ ಅತ್ಯುತ್ತಮವಾದುದನ್ನು ಸೃಷ್ಟಿಸುವ ಶಕ್ತಿಯನ್ನು ಕೊಟ್ಟಿದ್ದಾನೆ. ಮಹಿಳೆಯರ ಈ ಕೌಶಲ ದೇಶಕ್ಕಾಗಿ ಉಪಯೋಗವಾದರೆ ದೇಶ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ಭಾರತ ಚಂದ್ರನಲ್ಲಿಗೆ ತಲುಪುವುದರಲ್ಲಿಯೂ ಮಹಿಳೆಯರ ಪಾತ್ರವಿದೆ. ಭಾರತ ಅಭಿವೃದ್ಧೊ ಹೊಂದಿದ ದೇಶವಾಗಲು ಮಹಿಳೆಯರ ಪಾತ್ರ ಇರಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Follow Us:
Download App:
  • android
  • ios