ನವದೆಹಲಿ(ನ.27): ಲಡಾಖ್‌ ಸೇರಿದಂತೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ತನ್ನ ಕಣ್ಗಾವಲು ವ್ಯವಸ್ಥೆಯನ್ನು ಇನ್ನಷ್ಟುಮೇಲ್ದರ್ಜೆಗೇರಿಸಲು ಮುಂದಾಗಿರುವ ಭಾರತೀಯ ಸೇನೆ, ಈ ನಿಟ್ಟಿನಲ್ಲಿ ಶೀಘ್ರವೇ ಇಸ್ರೇಲ್‌ ಮತ್ತು ಅಮೆರಿಕದಿಂದ ಅತ್ಯಾಧುನಿಕ ಡ್ರೋನ್‌ಗಳನ್ನು ಖರೀದಿಸಲು ನಿರ್ಧರಿಸಿದೆ.

ಚಂದ್ರನ ಕಲ್ಲು ತರುವ ಚೀನಾ ನೌಕೆ ಗಗನಕ್ಕೆ: ಡಿಸೆಂಬರಲ್ಲಿ ಲ್ಯಾಂಡಿಂಗ್‌!

ಈಗಾಗಲೇ ಇಸ್ರೇಲ್‌ನ ಹೆರಾನ್‌ ಡ್ರೋನ್‌ ಖರೀದಿ ಮಾತುಕತೆ ಮುಗಿದಿದ್ದು ಡಿಸೆಂಬರ್‌ನಲ್ಲಿ ಅಂತಿಮ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಮತ್ತೊಂದೆಡೆ ಅಮೆರಿಕದ ಮಿನಿ ಡ್ರೋನ್‌ಗಳ ಖರೀದಿಯ ಮಾತುಕತೆಯೂ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಈ ಪೈಕಿ ಹೆರಾನ್‌ ಡ್ರೋನ್‌ಗಳನ್ನು ಲಡಾಖ್‌ ಬಳಿ ನಿಯೋಜಿಸಲಾಗುವುದು. ಇದು ಲಡಾಖ್‌ ಭಾಗದಲ್ಲಿ ಚೀನಾ ಸೇನೆಯ ಚಟುವಟಿಕೆ ಮೇಲೆ ಕಣ್ಗಾವಲು ಇಡುವ ಭಾರತೀಯ ಸೇನೆಯ ಸಾಮರ್ಥ್ಯವನ್ನು ಇನ್ನಷ್ಟುಹೆಚ್ಚಿಸಲಿದೆ. ಇನ್ನು ಮಿನಿ ಡ್ರೋನ್‌ಗಳನ್ನು ಬೆಟಾಲಿಯನ್‌ ಹಂತದ ಪಡೆಗಳಿಗೆ ನೀಡಲಾಗುವುದು. ಇದು ನಿರ್ದಿಷ್ಟಪ್ರದೇಶಗಳ ಕುರಿತ ಮಾಹಿತಿ ಸಂಗ್ರಹಕ್ಕೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಿಂಗಪುರ್ ಕೊರೋನಾ ಮುಕ್ತ, ಯಾವ ಕ್ರಮ ಫಲಕೊಟ್ಟಿತು?

ಈ ಎಲ್ಲಾ ಖರೀದಿ ವ್ಯವಹಾರಗಳನ್ನು ರಕ್ಷಣಾ ಪಡೆಗಳಿಗೆ ತುರ್ತು ಹಣಕಾಸು ಅಧಿಕಾರ ಯೋಜನೆಯಡಿ ನಡೆಸಲಾಗುತ್ತಿದೆ. ಈ ಯೋಜನೆ ಮೂಲಕ ರಕ್ಷಣಾ ಪಡೆಗಳಿಗೆ 500 ಕೋಟಿ ರು. ಮೌಲ್ಯದ ಯಾವುದೇ ಉಪಕರಣ ಅಥವಾ ವ್ಯವಸ್ಥೆ ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಚೀನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರ ರಕ್ಷಣಾ ಪಡೆಗಳಿಗೆ ಈ ವಿಶೇಷ ಅಧಿಕಾರ ನೀಡಿದೆ.