ಸಿಂಗಪುರ್(ನ. 25) ಒಂದು ಸಮಯ ಆಗ್ನೇಯ ಏಷ್ಯಾದಲ್ಲಿ  ಅತಿ ಹೆಚ್ಚು COVID-19 ಪ್ರಕರಣ ಹೊಂದಿದ್ದ ಸಿಂಗಾಪುರ್ ಈಗ ಕೊರೋನಾ ಮುಕ್ತವಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಕಳೆದ  14 ದಿನಗಳಿಂದ ಯಾವುದೇ ಹೊಸ ಸೋಂಕಿನ ಪ್ರಕರಣ ದಾಖಲಾಗಿಲ್ಲ.

ಕೊರೋನಾ ವೈರಸ್ ತನ್ನ ಕೊನೆ ಹಂತವನ್ನು ಮುಗಿಸಿದೆ ಎಂದು ವಿಶ್ಲೇಷಿಸಲಾಗಿದೆ. ಬಾಂಗ್ಲಾದೇಶ, ಭಾರತ ಮತ್ತು ಚೀನಾದ ಯುವಕರು ಉದ್ಯೋಗ ಅರಿಸಿ ಇಲ್ಲಿದ್ದಾರೆ. ಇಕ್ಕಟ್ಟಾದ ವಸತಿ ಪ್ರದೇಶಗಳು ಇದ್ದು ಸೋಂಕಿನ ಸಾಧ್ಯತೆ ಜಾಸ್ತಿಯಾಗೆ ಇತ್ತು.

ಭಾರತಕ್ಕೆ ಕೊರೋನಾ ಲಸಿಕೆ ಯಾವಾಗ? ಸಂಪೂರ್ಣ ಮಾಹಿತಿ

ಕಳೆದ ಎರಡು ವಾರಗಳಿಂದ  ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ವಿದೇಶದಿಂದ ಆಗಮಿಸುವವರನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.

ಚೀನಾದ ನಂತರ ಕೊರೋನಾ ಕಾಣಿಸಿಕೊಂಡ ದೇಶಗಳಲ್ಲಿ ಸಿಂಗಪುರ್ ಕೂಡ ಒಂದು. ಇಲ್ಲಿವರೆಗೆ  58,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.  ಆದರೆ ಸಾವಿನ ಸಂಖ್ಯೆ ಅತಿ ಕಡಿಮೆ ಇದೆ. ಕೇವಲ 28 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಸಿಂಗಾಪುರದ ಬಹುಪಾಲು ಪ್ರಕರಣಗಳು ಜನವಸತಿ ಜಾಸ್ತಿ ಇರುವ ಪ್ರದೇಶದಲ್ಲಿ ಕಂಡುಬಂದಿದ್ದವು.  ಮಾನವ ಹಕ್ಕು ಸಂಸ್ಥೆಗಳಿಂದ ಟೀಕೆಗೆ ಗುರಿಯಾದರೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದರು.  ಆದರೂ ಕೊರೋನಾ ಸಂಪೂರ್ಣವಾಗಿ ನಿಗ್ರಹ ಮಾಡಲು ಕೆಲ ತಿಂಗಳು ಬೇಕಾದವು.

ಏಪ್ರಿಲ್‌ನಲ್ಲಿ ರೋಗ ಹರಡುವುದನ್ನು ತಡೆಯಲು ಸಿಂಗಾಪುರ್ ನಲ್ಲಿ ಎರಡು ತಿಂಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು.  ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಡ್ಡಾಯ ಮಾಡಿ ಕಾನೂನು ಜಾರಿ ಮಾಡಿದ್ದರ ಪರಿಣಾಮ ಕೊರೋನಾ ಆತಂಕದಿಂದ ದೇಶ ಹೊರಗೆ ಬಂದಿದೆ.