ಯುದ್ಧದಿಂದ ಎಲ್‌ಪಿಜಿ ಪೂರೈಕೆಯ ಮೇಲೆ ಉಂಟಾದ ಪರಿಣಾಮದಿಂದಾಗಿ, ಕೇಂದ್ರ ಸರ್ಕಾರವು 21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಯನ್ನು ಪುನರಾರಂಭಿಸಿದೆ. ಪೆಟ್ರೋಲ್, ಡೀಸೆಲ್ ಅಥವಾ ಗ್ಯಾಸ್‌ಗೆ ಯಾವುದೇ ಕೊರತೆಯಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.
- Home
- News
- India News
- India Latest News Live: ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್ - ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆಗೆ ಸದ್ಯ ಅವಕಾಶ - ಕೇಂದ್ರ
LIVE NOW
India Latest News Live: ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್ - ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆಗೆ ಸದ್ಯ ಅವಕಾಶ - ಕೇಂದ್ರ

ಸಾರಾಂಶ
ಪಾಲಕ್ಕಾಡ್: ಪ್ರಧಾನಿ ನರೇಂದ್ರ ಮೋದಿಯವರು ಕೇರಳದ ಪಾಲಕ್ಕಾಡ್ನಲ್ಲಿ ಭಾಗಿಯಾಗಿದ್ದ ಚುನಾವಣಾ ರ್ಯಾಲಿ ವೇಳೆ ಆಂಪ್ಲಿಫೈಯರ್ನಿಂದ ಹೊಗೆ ಕಾಣಿಸಿಕೊಂಡಿದೆ. ಇದು ಕೆಲ ಕಾಲ ಆತಂಕಕ್ಕೆ ಕಾರಣವಾಗಿದೆ.
ರ್ಯಾಲಿ ನಡೆಯಬೇಕಿದ್ದ ಸ್ಥಳವಾದ ಕೊಟ್ಟಮೈಡನಂಗೆ ಆಗಮಿಸುವ ಅರ್ಧ ಗಂಟೆಗೂ ಮುನ್ನ ಮೈಕ್ರೊಫೋನ್ಗಳಿಗೆ ಸಂಪರ್ಕಗೊಂಡಿರುವ ಆಂಪ್ಲಿಫೈಯರ್ನಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಕೂಡಲೇ ಹೊಗೆ ನಿಲ್ಲಿಸಲು ಕ್ರಮ ಕೈಗೊಂಡಿದ್ದಾರೆ. ಓವರ್ಲೋಡ್ನಿಂದ ಆಂಪ್ಲಿಫೈಯರ್ ಹೆಚ್ಚು ಬಿಸಿಯಾಗಿ ಘಟನೆ ನಡೆದಿದೆ ಎನ್ನಲಾಗಿದೆ.
08:24 AM (IST) Mar 30
India Latest News Live 30 March 2026ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್ - ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆಗೆ ಸದ್ಯ ಅವಕಾಶ - ಕೇಂದ್ರ
Read Full Story
08:22 AM (IST) Mar 30
India Latest News Live 30 March 2026ಶುಭಾರಂಭಕ್ಕೆ ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಫೈಟ್! ಸಂಜು-ಜಡೇಜಾ ಮೇಲೆ ಎಲ್ಲರ ಕಣ್ಣು
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್‌ನಲ್ಲಿ ಸೆಣಸಾಡಲಿವೆ. ಈ ಬಾರಿ ರವೀಂದ್ರ ಜಡೇಜಾ ರಾಜಸ್ಥಾನ ಪರ ಆಡಿದರೆ, ಸಂಜು ಸ್ಯಾಮ್ಸನ್ ಚೆನ್ನೈ ಪರ ಕಣಕ್ಕಿಳಿಯಲಿದ್ದು, ಇದು ಕುತೂಹಲ ಕೆರಳಿಸಿದೆ. ಗಾಯದ ಸಮಸ್ಯೆಯಿಂದಾಗಿ ಎಂ.ಎಸ್.ಧೋನಿ ಹಾಗೂ ಡೆವಾಲ್ಡ್ ಬ್ರೆವಿಸ್ ಚೆನ್ನೈ ತಂಡಕ್ಕೆ ಅಲಭ್ಯರಾಗಿದ್ದಾರೆ.
Read Full Story 07:47 AM (IST) Mar 30
India Latest News Live 30 March 2026IPL 2026 - ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಐಪಿಎಲ್‌ನಲ್ಲಿ 13 ವರ್ಷಗಳ ಬಳಿಕ ತನ್ನ ಆರಂಭಿಕ ಪಂದ್ಯವನ್ನು ಗೆದ್ದ ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕೆಕೆಆರ್ ನೀಡಿದ 221 ರನ್‌ಗಳ ಬೃಹತ್ ಗುರಿಯನ್ನು, ರೋಹಿತ್ ಶರ್ಮಾ ಮತ್ತು ರಿಕೆಲ್ಟನ್ ಅವರ ಸ್ಫೋಟಕ ಆರಂಭಿಕ ಜೊತೆಯಾಟದ ನೆರವಿನಿಂದ ಮುಂಬೈ ಯಶಸ್ವಿಯಾಗಿ ಬೆನ್ನಟ್ಟಿತು.
Read Full Story 07:34 AM (IST) Mar 30
India Latest News Live 30 March 2026ದೆವ್ವ ಹಿಡಿದಿದೆ ಅಂತ ಫ್ಲೈಟ್ ತುರ್ತು ದ್ವಾರ ತೆರೆಯಲೆತ್ನಿಸಿವನ ಬಂಧನ - ಬೆಂಗಳೂರು ಕಾಶಿ ವಿಮಾನದಲ್ಲಿ ಆತಂಕದ ಘಟನೆ
ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಎರಡು ಬಾರಿ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದಾನೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ 'ನನ್ನ ಮೈಮೇಲೆ ದೆವ್ವ ಬಂದಿತ್ತು' ಎಂಬ ವಿಚಿತ್ರ ಹೇಳಿಕೆ ನೀಡಿದ್ದಾನೆ.