- Home
- News
- India News
- India Latest News Live: ಸ್ಮೃತಿ ಇರಾನಿ, ಕರ್ನಾಟಕ ಬಿಜೆಪಿ ಹೊಸ ಉಸ್ತುವಾರಿ ದ್ವಿವೇದಿಗೆ ರಾಜ್ಯಸಭೆ ಟಿಕೆಟ್?
India Latest News Live: ಸ್ಮೃತಿ ಇರಾನಿ, ಕರ್ನಾಟಕ ಬಿಜೆಪಿ ಹೊಸ ಉಸ್ತುವಾರಿ ದ್ವಿವೇದಿಗೆ ರಾಜ್ಯಸಭೆ ಟಿಕೆಟ್?

ನವದೆಹಲಿ: ಎಲ್ ನಿನೋ ಪರಿಣಾಮದಿಂದಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಮುಂಬರುವ ಹಿಂಗಾರು ಬೆಳೆ ಅವಧಿ ಸವಾಲಾಗಿ ಪರಿಣಮಿಸಲಿದೆ. ಇದು ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ಆತಿಶ್ ಚಂದ್ರ ಎಚ್ಚರಿಸಿದ್ದಾರೆ.
ಹಿಂಗಾರು ಬೆಳೆ ಸಿದ್ಧತೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರಿನ ಬೆಳೆ ಅವಧಿಯೂ ಸವಾಲಿನಿಂದ ಕೂಡಿತ್ತು. ಹಲವು ರಾಜ್ಯಗಳು ಮೊದಲಿಗೆ ಬೆಳೆ ವ್ಯಾಪ್ತಿಯನ್ನು ಖಚಿತಪಡಿಸಲು ಪರದಾಡಿದರೆ, ಬಳಿಕ ಆ ಬೆಳೆ ಉಳಿಸಿಕೊಳ್ಳಲು ಹೆಣಗಾಡಿದವು ಎಂದರು.
ಮಳೆಯಾಶ್ರಿತ ಪ್ರದೇಶಗಳಲ್ಲಿ ಮುಂಗಾರು ಬೆಳೆಯ ರೀತಿ ಹಿಂಗಾರು ಬೆಳೆಯೂ ಸವಾಲುಗಳನ್ನು ಎದುರಿಸಲಿದೆ. ಕೆಲ ರಾಜ್ಯಗಳು ಹೆಚ್ಚಿನ ತೇವಾಂಶದ ಸಮಸ್ಯೆ ಎದುರಿಸಲಿವೆ, ಇನ್ನು ಕೆಲ ಪ್ರದೇಶಗಳು ಮಳೆ ಕೊರತೆಯಿಂದ ಒತ್ತಡ ಎದುರಿಸಲಿವೆ. ಹೀಗಾಗಿ ಹಿಂಗಾರು ಬೆಳೆ ಅವಧಿಗೆ ಸಂಬಂಧಿಸಿ ಕೃಷಿ ತಂತ್ರಗಾರಿಕೆಯನ್ನು ಸರಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದ ಅವರು, ಇದರ ಪರಿಣಾಮ ಬೆಳೆ ಅವಧಿಯಲ್ಲಿ ಆಹಾರ ಉತ್ಪಾದನೆ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ ಎಂದರು.