10:45 PM (IST) May 27

India Latest News Live 27 May 2026ವೈಭವ್ ಸೂರ್ಯವಂಶಿ ಔಟಾದಾಗ ಕಾವ್ಯಾ ಮಾರನ್ ಕೆಟ್ಟ ರಿಯಾಕ್ಷನ್ - ಸನ್‌ರೈಸರ್ಸ್‌ ಮಾಲೀಕಿಯ ನಡೆಗೆ ಕ್ರಿಕೆಟ್ ಪ್ರೇಮಿಗಳು ಫುಲ್ ಗರಂ!

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ವೈಭವ್ ಸೂರ್ಯವಂಶಿ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ, ಅವರು ಶತಕ ವಂಚಿತರಾಗಿ ಔಟಾದಾಗ, ಎಸ್‌ಆರ್‌ಎಚ್ ಮಾಲೀಕಿ ಕಾವ್ಯಾ ಮಾರನ್ ಕ್ರೀಡಾಸ್ಫೂರ್ತಿ ತೋರದೆ ನೀರಸವಾಗಿ ಪ್ರತಿಕ್ರಿಯಿಸಿದ್ದಾರೆ.

Read Full Story
10:17 PM (IST) May 27

India Latest News Live 27 May 2026ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಕ್ರಿಸ್ ಗೇಲ್ ಸಾರ್ವಕಾಲಿಕ ಸಿಕ್ಸರ್ ರೆಕಾರ್ಡ್ ನುಚ್ಚುನೂರು!

ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (65) ಬಾರಿಸಿದ ಕ್ರಿಸ್ ಗೇಲ್ ಅವರ ವಿಶ್ವದಾಖಲೆಯನ್ನು ಮುರಿದಿದ್ದಾರೆ.
Read Full Story
10:13 PM (IST) May 27

India Latest News Live 27 May 2026Breaking - ಇಸ್ರೋ ಮುಡಿಗೆ ಮತ್ತೊಂದು ಗರಿ, ಚಂದ್ರನ ದಕ್ಷಿಣ ಧ್ರುವದ ಆಳದಲ್ಲಿ ‘ಹಿಮದ ನಿಕ್ಷೇಪ’ ಪತ್ತೆಹಚ್ಚಿದ ಚಂದ್ರಯಾನ-2 ಆರ್ಬಿಟರ್!

ಭಾರತದ ಚಂದ್ರಯಾನ-2 ಆರ್ಬಿಟರ್, ಚಂದ್ರನ ಅತ್ಯಂತ ಕತ್ತಲೆಯ ಮತ್ತು ತಂಪಾದ ದಕ್ಷಿಣ ಧ್ರುವದ ಕುಳಿಗಳ ಆಳದಲ್ಲಿ ಭಾರಿ ಪ್ರಮಾಣದ ಮಂಜುಗಡ್ಡೆ ಇರುವುದಕ್ಕೆ ಬಲವಾದ ವೈಜ್ಞಾನಿಕ ಪುರಾವೆಗಳನ್ನು ಪತ್ತೆಹಚ್ಚಿದೆ. 

Read Full Story
09:35 PM (IST) May 27

India Latest News Live 27 May 2026ಐಪಿಎಲ್‌ ವೈಫಲ್ಯಕ್ಕೆ ಹಾರ್ದಿಕ್‌ ಪಾಂಡ್ಯ ಬೇಸರ, ಕಠಿಣ ನಿರ್ಧಾರ ಮಾಡಿದ ಮುಂಬೈ ಇಂಡಿಯನ್ಸ್‌ ನಾಯಕ!

ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ನಂತರ, ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ದಿಢೀರನೆ ಡಿಲೀಟ್ ಮಾಡಿದ್ದಾರೆ. ವೈಯಕ್ತಿಕ ವೈಫಲ್ಯ ಮತ್ತು ನಾಯಕತ್ವದ ಬಗ್ಗೆ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story
09:17 PM (IST) May 27

India Latest News Live 27 May 2026ಹಳೆ ಕಥೆ ಬೇಡ.. ನಟ ಪ್ರಭು ಜೊತೆ ಮದುವೆ, ವಿಚ್ಛೇದನದ ಬಗ್ಗೆ ರವಿಚಂದ್ರನ್ ಹೀರೋಯಿನ್ ಹೇಳಿದ್ದೇನು?

ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ರಣಧೀರ, ಅಂಜದ ಗಂಡು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಖುಷ್ಬೂ ಸದ್ಯ 'ಜಬರ್ದಸ್ತ್' ಶೋ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇದೀಗ ನಟ ಪ್ರಭು ಜೊತೆಗಿನ ಮದುವೆ ಹಾಗೂ ವಿಚ್ಛೇದನದ ವದಂತಿಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

Read Full Story
08:35 PM (IST) May 27

India Latest News Live 27 May 202629 ಎಸೆತದಲ್ಲಿ 97 ರನ್‌..ಶತಕ ಮಿಸ್‌ ಮಾಡಿಕೊಂಡ ವೈಭವ್‌ ಸೂರ್ಯವಂಶಿ, 14 ವರ್ಷಗಳಿಂದ ಇದ್ದ ಗೇಲ್‌ ರೆಕಾರ್ಡ್‌ ಬ್ರೇಕ್‌

ಐಪಿಎಲ್ ನಾಕೌಟ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ವೈಭವ್‌ ಸೂರ್ಯವಂಶಿ 97 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ ಸಿಡಿಸುವ ಮೂಲಕ, ಅವರು ಕ್ರಿಸ್ ಗೇಲ್ ಅವರ ಒಂದು ಸೀಸನ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳ ದಾಖಲೆಯನ್ನು ಮುರಿದು ಆರೆಂಜ್ ಕ್ಯಾಪ್ ಪಡೆದರು.
Read Full Story
07:54 PM (IST) May 27

India Latest News Live 27 May 2026ರಾಮ್ ಚರಣ್ ಜೊತೆ ಡ್ಯಾನ್ಸ್ ಮಾಡಿದ್ರೆ ಸಣ್ಣಗಾಗ್ತೀರಾ - ಶ್ರೀದೇವಿ ಮಗಳು ಹೀಗೆ ಹೇಳೋದಕ್ಕೂ ಕಾರಣವಿದ್ಯಾ?

ರಾಮ್ ಚರಣ್ ನಾಯಕರಾಗಿ ಮತ್ತು ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿರುವ 'ಪೆದ್ದಿ' ಸಿನಿಮಾ ಜೂನ್ 4 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಬುಚಿ ಬಾಬು ಸನಾ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಆಕ್ಷನ್, ಡ್ರಾಮಾ, ರೊಮ್ಯಾನ್ಸ್ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

Read Full Story
07:50 PM (IST) May 27

India Latest News Live 27 May 2026ಪಾರ್ಸೆಲ್ ಸೀಲ್ ಒಡೆದು ಕಾಮದ ಆಫರ್ ನೀಡಿದ ಕಾಮುಕ - 'ನನ್ನನ್ನೇ ಯೂಸ್ ಮಾಡ್ಕೋ..' ಎಂದ ಬ್ಲಿಂಕಿಟ್ ಡೆಲಿವರಿ ಏಜೆಂಟ್!

ಬ್ಲಿಂಕಿಟ್ ಮೂಲಕ ಲೈಂಗಿಕ ಕ್ಷೇಮ ಉತ್ಪನ್ನವನ್ನು ಆರ್ಡರ್ ಮಾಡಿದ್ದ ಯುವತಿಗೆ ಡೆಲಿವರಿ ಏಜೆಂಟ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಉತ್ಪನ್ನವನ್ನು ನೋಡಿ ಯುವತಿಯ ವೈಯಕ್ತಿಕ ಸಂಖ್ಯೆಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದು, ದೂರಿನ ನಂತರ ಕಂಪನಿಯು ಆತನನ್ನು ಕೆಲಸದಿಂದ ವಜಾಗೊಳಿಸಿದೆ.
Read Full Story
07:19 PM (IST) May 27

India Latest News Live 27 May 2026ಕುಡಿದ ಮತ್ತಲ್ಲಿ ಇಬ್ಬರ ಕೊಂದ ಬಾಲಕನಿಗೆ ಪ್ರಬಂಧ ಬರೆಯೋ ಶಿಕ್ಷೆ - ಸಾಕ್ಷಿ ನಾಶಕ್ಕೆ ನೋಡಿದ ಅಪ್ಪನಿಗೆ ಜಾಮೀನು

2024ರ ಪುಣೆ ಪೋರ್ಷೆ ಕಾರು ಅಪಘಾತದಲ್ಲಿ ಇಬ್ಬರು ಎಂಜಿನಿಯರ್‌ಗಳು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಸಾಕ್ಷ್ಯ ತಿರುಚಿದ ಆರೋಪದ ಮೇಲೆ ಬಂಧಿತನಾಗಿದ್ದ ಅಪ್ರಾಪ್ತನ ತಂದೆ ವಿಶಾಲ್ ಅಗರ್‌ವಾಲ್‌ಗೆ ಇದೀಗ ಜಾಮೀನು ಸಿಕ್ಕಿದ್ದು, ಆತನ ಕುಟುಂಬ ನೋಟಿನ ಹಾರ ಹಾಕಿ ಸಂಭ್ರಮಿಸಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story
06:33 PM (IST) May 27

India Latest News Live 27 May 20268th Pay Commission - ಬರುತ್ತಾ 5 ಹಂತಗಳ ‘ಫಿಟ್‌ಮೆಂಟ್ ಫ್ಯಾಕ್ಟರ್’ - ಹಿರಿಯ ಅಧಿಕಾರಿಗಳ ಬೇಸಿಕ್ ಪೇ ನೇರ ₹10.95 ಲಕ್ಷಕ್ಕೆ ಜಿಗಿತ!

8ನೇ ವೇತನ ಆಯೋಗದ ಮುಂದೆ ನೌಕರರ ಸಂಘಟನೆಗಳು ಹೊಸ 5 ಹಂತದ ಫಿಟ್‌ಮೆಂಟ್ ಫ್ಯಾಕ್ಟರ್ ಸೂತ್ರವನ್ನು ಪ್ರಸ್ತಾಪಿಸಿವೆ. ಈ ಪ್ರಸ್ತಾಪವು ಅಂಗೀಕಾರವಾದರೆ, ಕೆಲವು ಹಿರಿಯ ಅಧಿಕಾರಿಗಳ ವೇತನದಲ್ಲಿ ಶೇ. 400ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದ್ದು, ಇದು ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story
06:25 PM (IST) May 27

India Latest News Live 27 May 2026Diarrhea - ಪದೇ ಪದೇ ಭೇದಿ ಆಗ್ತಿದ್ಯಾ? ಈ ಗಂಭೀರ ಕಾಯಿಲೆಗಳ ಲಕ್ಷಣವಿರಬಹುದು, ಹುಷಾರ್!

ಕೆಲವರಿಗೆ ವಾರಗಟ್ಟಲೆ ಭೇದಿ ನಿಲ್ಲುವುದೇ ಇಲ್ಲ, ಅಥವಾ ಪದೇ ಪದೇ ಮರುಕಳಿಸುತ್ತಿರುತ್ತದೆ. ಇದು ಯಾವುದೋ ದೀರ್ಘಕಾಲದ ಜೀರ್ಣಕ್ರಿಯೆ ಸಮಸ್ಯೆಯ ಲಕ್ಷಣವಾಗಿರಬಹುದು. ಇದನ್ನು ಕಡೆಗಣಿಸುವುದು ಒಳ್ಳೆಯದಲ್ಲ.

Read Full Story
06:05 PM (IST) May 27

India Latest News Live 27 May 2026ಸಂಜು, ಶ್ರೇಯಸ್ ಅಯ್ಯರ್ ಅಲ್ಲವೇ ಅಲ್ಲ, ಭಾರತದ ಮುಂದಿನ T20 ಕ್ಯಾಪ್ಟನ್ ಇವರಾಗಲಿ - ಅಚ್ಚರಿಯ ಹೆಸರು ಸೂಚಿಸಿದ ರವಿಚಂದ್ರನ್ ಅಶ್ವಿನ್

ಭಾರತದ ಮುಂದಿನ T20 ನಾಯಕನಾಗಿ ಶ್ರೇಯಸ್ ಅಯ್ಯರ್ ಅಥವಾ ಸಂಜು ಸ್ಯಾಮ್ಸನ್ ಬದಲಿಗೆ ರಜತ್ ಪಾಟಿದಾರ್ ಸೂಕ್ತ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್‌ನಲ್ಲಿ ಪಾಟಿದಾರ್ ಅವರ ಸ್ಫೋಟಕ ಪ್ರದರ್ಶನ, ವಿಶೇಷವಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಅರ್ಧಶತಕವು ಅವರನ್ನು ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಗೆ ತಂದಿದೆ ಎಂದು ಅಶ್ವಿನ್ ಹೇಳಿದ್ದಾರೆ.
Read Full Story
05:56 PM (IST) May 27

India Latest News Live 27 May 2026ಗಂಡನ ಮುಂದೆಯೇ ಸಮಂತಾಗೆ ಪ್ರಪೋಸ್ ಮಾಡಿದ ಫ್ಯಾನ್ - ನಟಿ ಮಾಡಿದ ಕೆಲಸ ನೋಡಿ ಎಲ್ರೂ ಶಾಕ್!

ನಟಿ ಸಮಂತಾ ಅವರ ಪತಿ ರಾಜ್ ನಿಡಿಮೋರು ಅವರ ಮುಂದೆಯೇ ಅಭಿಮಾನಿಯೊಬ್ಬ ಪ್ರಪೋಸ್ ಮಾಡಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಸಮಯದಲ್ಲಿ ಸ್ಟಾರ್ ನಟಿ ಏನು ಮಾಡಿದರು ಗೊತ್ತಾ? ಸಮಂತಾ ಮಾಡಿದ ಕೆಲಸಕ್ಕೆ ಅಲ್ಲಿದ್ದವರು ಶಾಕ್ ಆಗಿದ್ದಾರೆ.

Read Full Story
05:47 PM (IST) May 27

India Latest News Live 27 May 2026ಒಂದು ವಿಕೆಟ್‌ಗೆ ₹4.50 ಕೋಟಿ..! ಈ ಬಾರಿಯ ಐಪಿಎಲ್‌ನ ಟಾಪ್-5 ದುಬಾರಿ ಬೌಲರ್‌ಗಳು ಇವರೇ ನೋಡಿ! ಬುಮ್ರಾಗೆ ಎಷ್ಟನೇ ಸ್ಥಾನ?

2026ರ ಐಪಿಎಲ್ ಟೂರ್ನಿಯಲ್ಲಿ ಕೆಲವು ಸ್ಟಾರ್ ಬೌಲರ್‌ಗಳ ವೈಫಲ್ಯ ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ. ಕೆಲವು ಸ್ಟಾರ್ ಬೌಲರ್‌ಗಳು ಲೀಗ್ ಹಂತದಲ್ಲಿ ವಿಕೆಟ್ ಕಬಳಿಸಲು ಪರದಾಡಿದ್ದು, ತಂಡದ ನಾಕೌಟ್ ಕನಸನ್ನು ನುಚ್ಚುನೂರು ಮಾಡಿತು. ಐಪಿಎಲ್‌ನ ಟಾಪ್-5 ದುಬಾರಿ ಬೌಲರ್‌ಗಳು ಯಾರು ನೋಡೋಣ ಬನ್ನಿ.

Read Full Story
05:10 PM (IST) May 27

India Latest News Live 27 May 2026ಒಂದೇ ಪಾಲಿಸಿಯಲ್ಲಿ ಗಂಡ-ಹೆಂಡ್ತಿ ಇಬ್ಬರಿಗೂ ರಕ್ಷಣೆ - ಜೂನ್ 1 ರಿಂದ ಖರೀದಿಗೆ ಸಿಗಲಿವೆ ಎಲ್‌ಐಸಿಯ ಸೂಪರ್ ಪ್ಲಾನ್‌ಗಳು!

ಭಾರತೀಯ ಜೀವ ವಿಮಾ ನಿಗಮ (LIC) ದಂಪತಿಗಳಿಗಾಗಿ 'ನ್ಯೂ ಜೀವನ್ ಸಾಥಿ' ಹೆಸರಿನ ಎರಡು ಹೊಸ ಜಂಟಿ ಜೀವ ವಿಮಾ ಯೋಜನೆಗಳನ್ನು (ಪ್ಲಾನ್ 888 ಮತ್ತು 889) ಬಿಡುಗಡೆ ಮಾಡಿದೆ. ಈ ಯೋಜನೆಗಳು ಉಳಿತಾಯ ಮತ್ತು ರಕ್ಷಣೆಯ ಜೊತೆಗೆ ಸಿಂಗಲ್ ಪ್ರೀಮಿಯಂ ಹಾಗೂ ಲಿಮಿಟೆಡ್ ಪ್ರೀಮಿಯಂ ಪಾವತಿ ಆಯ್ಕೆ ಒದಗಿಸುತ್ತವೆ.

Read Full Story
04:42 PM (IST) May 27

India Latest News Live 27 May 2026ಉಕ್ಕಿನ ವಲಯದಲ್ಲಿ ಭಾರತದ ಐತಿಹಾಸಿಕ ಸಾಧನೆ - ವಿಶ್ವದ ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿದ AM/NS ಇಂಡಿಯಾ!

ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS ಇಂಡಿಯಾ) ವಿಶ್ವದಲ್ಲೇ ಮೊದಲ ಬಾರಿಗೆ EQ70 ಗ್ರೇಡ್‌ನ ಅತ್ಯುನ್ನತ ಸಾಮರ್ಥ್ಯದ ವೆಲ್ಡೆಡ್ ಪೈಪ್‌ಗಳನ್ನು ವಾಣಿಜ್ಯಿಕವಾಗಿ ಉತ್ಪಾದಿಸಿ ಇತಿಹಾಸ ನಿರ್ಮಿಸಿದೆ. ಈ ಸಾಧನೆಯು 'ಆತ್ಮನಿರ್ಭರ ಭಾರತ'ಕ್ಕೆ ದೊಡ್ಡ ಯಶಸ್ಸು ತಂದಿದ್ದು, ಸಮುದ್ರದಾಳದ ಯೋಜನೆಗಳಿಗೆ ವಿದೇಶಿ ಅವಲಂಬನೆಯನ್ನು ಕೊನೆಗೊಳಿಸಿದೆ.
Read Full Story
04:27 PM (IST) May 27

India Latest News Live 27 May 2026ಯಾರು ಈ ಬಾಡಿಗಾರ್ಡ್? ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ - ಮೆಗಾ ಪವರ್ ಸ್ಟಾರ್‌ಗೆ ಇವರೇ ರಕ್ಷಾಕವಚ!

ಬಾಲಿವುಡ್‌ನ ಸ್ಟಾರ್ ನಟ-ನಟಿಯರು ಮಾತ್ರವಲ್ಲ, ನಮ್ಮ ಸೌತ್ ಹೀರೋಗಳು ಕೂಡ ಬಾಡಿಗಾರ್ಡ್‌ಗಳಿಗಾಗಿ ಭಾರಿ ಹಣ ಖರ್ಚು ಮಾಡುತ್ತಾರೆ. ಪ್ಯಾನ್ ಇಂಡಿಯಾ ಹೀರೋ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಬಾಡಿಗಾರ್ಡ್ ಯಾರು? ಅವರಿಗೆ ಚರಣ್ ಎಷ್ಟು ಸಂಬಳ ಕೊಡುತ್ತಾರೆ ಗೊತ್ತಾ?

Read Full Story
04:23 PM (IST) May 27

India Latest News Live 27 May 2026ತಲೆ ಬೋಳಿಸಿ, ಕೈಕೋಳ ಹಾಕಿ ಟಿಎಂಸಿ ಗೂಂಡಾಗಳ ಅರೆಬೆತ್ತಲೆ ಪರೇಡ್‌ ಮಾಡಿಸಿದ ಬಂಗಾಳ ಪೊಲೀಸ್‌

ಪಶ್ಚಿಮ ಬಂಗಾಳದಲ್ಲಿ, ಟಿಎಂಸಿ ಹಿನ್ನೆಲೆಯುಳ್ಳ ಪ್ರಭಾವಿ ರೌಡಿಗಳನ್ನು ಪೊಲೀಸರು ಒಳ ಉಡುಪಿನಲ್ಲಿ ಸಾರ್ವಜನಿಕವಾಗಿ ಪರೇಡ್ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ಈ ಕಠಿಣ ಕ್ರಮವನ್ನು ಟಿಎಂಸಿ 'ಮಾನವ ಹಕ್ಕುಗಳ ಉಲ್ಲಂಘನೆ' ಎಂದು ತೀವ್ರವಾಗಿ ಖಂಡಿಸಿದೆ.

Read Full Story
03:58 PM (IST) May 27

India Latest News Live 27 May 2026'ಎಣ್ಣೆ ಹೊಡೆಯೋದು ಬಿಟ್ಟ ಮೇಲೆ ಬದುಕು ಟ್ರ್ಯಾಕಿಗೆ ಬಂತು' - ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ!

Yuzvendra Chahal Opens Up on Quitting Alcohol After Divorce 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಭಿಯಾನ ಲೀಗ್ ಹಂತದಲ್ಲೇ ಮುಕ್ತಾಯವಾಗಿದೆ. ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಯುಜುವೇಂದ್ರ ಚಹಲ್ ತಮ್ಮ ಖಾಸಗಿ ಬದುಕಿನ ಅತ್ಯಂತ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

Read Full Story
03:34 PM (IST) May 27

India Latest News Live 27 May 2026ಅತಿಯಾದ ಇಂಧನ ವೆಚ್ಚ, ದೇಶೀಯ ವಿಮಾನ ಸೇವೆ ಕಡಿತ ಮಾಡಿದ ಏರ್‌ ಇಂಡಿಯಾ

ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, ಜೂನ್ ಮತ್ತು ಆಗಸ್ಟ್ 2026 ರ ನಡುವೆ ಆಯ್ದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಿದೆ. 

Read Full Story