11:32 PM (IST) Aug 02

India Latest News Live 2 August 2026 ಮದುವೆಗೂ ಮುನ್ನ ರಾಜೀವ್ ಹಾಕಿದ ಷರತ್ತು - ಇಲ್ಲಿದೆ ಆ್ಯಂಕರ್ ಸುಮಾ ಜೀವನದ ರೋಚಕ ಅಧ್ಯಾಯ

ಖ್ಯಾತ ನಿರೂಪಕಿ ಸುಮಾ ಮತ್ತು ನಟ ರಾಜೀವ್ ಕನಕಾಲ ಸುಮಾರು 30 ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಇವರ ಮದುವೆಗೂ ಮುನ್ನ ನಡೆದ ಒಂದು ಘಟನೆ ನಿಮಗೆ ಗೊತ್ತಾ? ಸುಮಾ ಅವರಿಗೆ ರಾಜೀವ್ ಹಾಕಿದ್ದ ಆ ಕಂಡೀಷನ್ ಯಾವುದು?

Read Full Story
10:02 PM (IST) Aug 02

India Latest News Live 2 August 2026 ಕಾಡ್ಗಿಚ್ಚು ನಂದಿಸುತ್ತಿದ್ದ ವೇಳೆ ಆಗಸದಲ್ಲೇ ಎರಡು ಹೆಲಿಕಾಪ್ಟರ್ ಡಿಕ್ಕಿ , ಮೊಬೈಲ್‌ನಲ್ಲಿ ಪತನದ ದೃಶ್ಯ ಸೆರೆ

ಭೀಕರ ಕಾಡ್ಗಿಚ್ಚು ನಿಯಂತ್ರಸಲು ಹೆಲಿಕಾಪ್ಟರ್‌ ಮೂಲಕ ನೀರು ಹಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪರಿಣಾಮ ಒಂದು ಹೆಲಿಕಾಪ್ಟರ್ ಸಂಪೂರ್ಣ ಪತನಗೊಂಡಿದೆ. ರಕ್ಷಣಾ ತಂಡಗಳು ಕ್ಯಾಪ್ಟನ್ ಹುಡುಕಾಟದಲ್ಲಿ ನಿರತವಾಗಿದೆ.

Read Full Story
09:35 PM (IST) Aug 02

India Latest News Live 2 August 2026 ಸಂಸದೆಯಾಗಿದ್ದರೆ ಸೌಂದರ್ಯ ಜನರಿಗೆ ಏನು ಮಾಡುತ್ತಿದ್ದರು? ಕೊನೆಯ ಸಂದರ್ಶನದಲ್ಲಿ ನಟಿ ಹೇಳಿದ್ದೇನು?

Soundarya Last Interview: ದಿವಂಗತ ನಟಿ ಸೌಂದರ್ಯ ಅವರು ಸಿನಿಮಾದಿಂದ ರಾಜಕೀಯಕ್ಕೆ ಬಂದು ಏನಾದರೂ ಸಾಧಿಸಬೇಕೆಂದು ಬಯಸಿದ್ದರು. ಅದರಲ್ಲೂ ಜನರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಅವರಿಗಿತ್ತು.

Read Full Story
08:54 PM (IST) Aug 02

India Latest News Live 2 August 2026 'ಆದಿಪುರುಷ್' ಕಥೆ ಬೇಡ, 'ರಾಮಾಯಣ' ಸಿನಿಮಾ ಮೊದ್ಲು ನಮಗೆ ತೋರಿಸಿ - ರಾಮಲೀಲಾ ಮಹಾಸಂಘದ ಎಚ್ಚರಿಕೆ

Shri Ramlila Mahasangh: ಯಶ್, ರಣಬೀರ್ ಕಪೂರ್ ನಟನೆಯ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರವನ್ನು ಬಿಡುಗಡೆಗೂ ಮುನ್ನ ತಮಗೆ ತೋರಿಸಬೇಕೆಂದು ಶ್ರೀ ರಾಮಲೀಲಾ ಮಹಾಸಂಘ ಆಗ್ರಹಿಸಿದೆ.

Read Full Story
08:53 PM (IST) Aug 02

India Latest News Live 2 August 2026 ಮೋದಿಯ ಸೀತೆ ಯಾರು? ಪ್ರಧಾನಿ ಟೀಕಿಸಿ ಭಕ್ತರ ನಂಬಿಕೆ ಘಾಸಿಗೊಳಿಸಿದ್ರಾ ಕಾಂಗ್ರೆಸ್ ನಾಯಕ?

ಕಾಕ್ರೋಚ್ ಹೋರಾಟದಲ್ಲಿ ಪ್ರಧಾನಿ ಮೋದಿ ತಾಯಿ ವಿರುದ್ಧ ಅವಾಚ್ಯ ಶಬ್ದ ಪ್ರಯೋಗಿಸಲಾಗಿತ್ತು. ಇದೀಗ ಕಾಂಗ್ರೆಸ್ ನಾಯಕ ಮೋದಿಯ ಸೀತೆ ಯಾರು ಎಂದು ಪ್ರಶ್ನಿಸುವ ಮೂಲಕ ರಾಮಾಯಣ ಎಳೆದುತಂದು ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Read Full Story
08:19 PM (IST) Aug 02

India Latest News Live 2 August 2026 ಮಧ್ಯರಾತ್ರಿ ಎದ್ದು ಮೇಕಪ್​ ಮಾಡಿಕೊಳ್ಳೋ ಪತ್ನಿ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ ಗಂಡ - ಕೋರ್ಟ್​ ಹೇಳಿದ್ದೇನು

ಮಧ್ಯರಾತ್ರಿ 2 ಗಂಟೆಗೆ ಪತ್ನಿ ಕಾಜಲ್, ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದರಿಂದ ಆಕೆ ಮಾನಸಿಕ ಅಸ್ವಸ್ಥೆ ಎಂದು ಪತಿಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಜಾರ್ಖಂಡ್ ಹೈಕೋರ್ಟ್, ಮಹಿಳೆ ಯಾವುದೇ ಸಮಯದಲ್ಲಿ ಅಲಂಕಾರ ಮಾಡಿಕೊಳ್ಳುವುದು ಮಾನಸಿಕ ಅಸ್ವಸ್ಥತೆಯ ಲಕ್ಷಣವಲ್ಲ ಎಂದು ಸ್ಪಷ್ಟಪಡಿಸಿದೆ. ವರದಕ್ಷಿಣೆ ಕಿರುಕುಳವೇ ಈ ದೂರಿಗೆ ನಿಜವಾದ ಕಾರಣ ಎಂದು ಪತ್ನಿ ಆರೋಪಿಸಿದ್ದರು.
Read Full Story
07:56 PM (IST) Aug 02

India Latest News Live 2 August 2026 ವಂದೇ ಭಾರತ್​ ಹೊಸ ಇತಿಹಾಸ - ಜೀವಂತ ಹೃದಯ ಸಾಗಾಟ- 2 ಗಂಟೆಯಲ್ಲಿ 250 ಕಿ.ಮೀ ವೇಗ

ಭಾರತೀಯ ರೈಲ್ವೆ ಇತಿಹಾಸದಲ್ಲಿ ಮೊದಲ ಬಾರಿಗೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಜೀವಂತ ಹೃದಯವನ್ನು ಸೂರತ್‌ನಿಂದ ಅಹಮದಾಬಾದ್‌ಗೆ ಯಶಸ್ವಿಯಾಗಿ ಸಾಗಿಸಲಾಗಿದೆ. ಈ ಕ್ಷಿಪ್ರ ಸಾರಿಗೆ ಮತ್ತು ಗ್ರೀನ್ ಕಾರಿಡಾರ್ ವ್ಯವಸ್ಥೆಯಿಂದಾಗಿ, ಗಂಭೀರ ಹೃದಯ ರೋಗಿಯೊಬ್ಬರಿಗೆ   ಹೊಸ ಜೀವನ ನೀಡಲು ಸಾಧ್ಯವಾಯಿತು.

Read Full Story
07:17 PM (IST) Aug 02

India Latest News Live 2 August 2026 ಷೇರು ವಹಿವಾಟು-ಹೂಡಿಕೆದಾರರೇ ಗಮನಿಸಿ, ಸೋಮವಾರದಿಂದ ಸ್ಟಾಕ್ ಮಾರ್ಕೆಟ್‌ ಸಮಯ ಬದಲಾವಣೆ

ಷೇರು ವಹಿವಾಟು, ಷೇರುಗಳ ಮೇಲೆ ಹೂಡಿಕೆ ಮಾಡಿರುವ ಮಂದಿ ಇಲ್ಲಿ ಗಮನಿಸಿ. ಸೋಮವಾರದಿಂದ ಷೇರು ವಹಿವಾಟಿನ ಸಮಯ ಬದಲಾಗುತ್ತಿದೆ. ಯಾವೆಲ್ಲಾ ಸಮಯದಲ್ಲಿ ಷೇರು ವಹಿವಾಟು ನಡೆಸಲು ಸಾಧ್ಯ, ಭಾರತದ ಷೇರು ಮಾರುಕಟ್ಟೆ ಹೊಸ ಸಮಯದ ವಿವರ ಇಲ್ಲಿದೆ.

Read Full Story
06:39 PM (IST) Aug 02

India Latest News Live 2 August 2026 ಜಿರಳೆಗಳ ಪ್ರತಿಭಟನೆಯಲ್ಲಿ ಕೇಳಿ ಬರ್ತಿರೋ ZERO FIR ಅಂದ್ರೆ ಏನು? ಇದನ್ನು ದಾಖಲಿಸಿದ್ರೆ ಏನಾಗತ್ತೆ

ಝೀರೋ ಎಫ್‌ಐಆರ್ ಎಂದರೆ ಅಪರಾಧ ನಡೆದ ಸ್ಥಳದ ವ್ಯಾಪ್ತಿ ಮೀರಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ವ್ಯವಸ್ಥೆ. ನಿರ್ಭಯಾ ಪ್ರಕರಣದ ನಂತರ ಪರಿಚಯಿಸಲಾದ ಈ ಕಾನೂನು, ಸಂತ್ರಸ್ತರಿಗೆ ತಕ್ಷಣದ ನ್ಯಾಯ ಒದಗಿಸಲು ಸಹಾಯ ಮಾಡುತ್ತದೆ ಮತ್ತು ಪೊಲೀಸರು ವ್ಯಾಪ್ತಿಯ ಕಾರಣ ನೀಡಿ ದೂರು ನಿರಾಕರಿಸುವುದನ್ನು ತಡೆಯುತ್ತದೆ. ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದಲ್ಲಿ ಇದನ್ನು ಶಾಸನಬದ್ಧವಾಗಿ ಸೇರಿಸಲಾಗಿದೆ.
Read Full Story
06:35 PM (IST) Aug 02

India Latest News Live 2 August 2026 ಕಾಕ್ರೋಚ್ ಜನತಾ ಪಾರ್ಟಿ ಮುಂದಿನ ನಡೆ ಏನು? ಆಗಸ್ಟ್ 5ಕ್ಕೆ ದೀಪ್ಕೆ ಮನೆಯಿಂದ ಮಹತ್ವದ ಘೋಷಣೆ

ನೀಟ್ ಪಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಹೋರಾಟದ ಮೂಲಕ ಕ್ರಾಂತಿ ಮಾಡಿರುವ ಅಭಿಜಿತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ ಮುಂದಿನ ನಡೆ ಕುರಿತು ಆಗಸ್ಟ್ 5ರಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ. ಮುಂದಿನ ಹೋರಾಟ ಏನು?

Read Full Story
05:54 PM (IST) Aug 02

India Latest News Live 2 August 2026 ಮೋದಿಗೆ ಕೆಟ್ಟದ್ದಾಗಿ ಬೈದಾಕೆ ಯುವತಿ, ಕ್ಷಮೆ ಕೋರಿದಾಕೆ ಬಾಲಕಿ? ಕೇಸ್​ನಿಂದ ತಪ್ಪಿಸಿಕೊಳ್ಳುವ ತಂತ್ರನಾ? ಏನಿದು ವಿವಾದ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿಯವರನ್ನು ನಿಂದಿಸಿದ ಯುವತಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ನಂತರ 16 ವರ್ಷದ ಬಾಲಕಿಯೊಬ್ಬಳು ಕ್ಷಮೆ ಕೋರಿದ್ದು, ಪ್ರತಿಭಟಿಸಿದ ಯುವತಿ ಮತ್ತು ಕ್ಷಮೆ ಕೋರಿದ ಬಾಲಕಿ ಇಬ್ಬರೂ ಬೇರೆ ಬೇರೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಇದು ಕಾನೂನಿನಿಂದ ತಪ್ಪಿಸಿಕೊಳ್ಳಲು ಮಾಡಿದ ಪಿತೂರಿಯೇ ಎಂಬ ಚರ್ಚೆ ಶುರುವಾಗಿದೆ.
Read Full Story
05:38 PM (IST) Aug 02

India Latest News Live 2 August 2026 ರಾಮಾಯಣದಲ್ಲಿ ರಣಬೀರ್, ಯಶ್‌ಗೆ ಕೋಟಿ ಕೋಟಿ ಸಂಭಾವನೆ - ಈ ನಟ ಮಾತ್ರ ಹಣವೇ ಪಡೆಯಲಿಲ್ಲ!

ಸುಮಾರು ₹4,000 ಕೋಟಿ ಬಜೆಟ್‌ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿದೆ ಎನ್ನಲಾಗುತ್ತಿರುವ ರಾಮಾಯಣ ಸಿನಿಮಾ, ಭಾರತೀಯ ಚಿತ್ರರಂಗದ ಅತಿದೊಡ್ಡ ಪೌರಾಣಿಕ ಚಿತ್ರವಾಗುವ ಗುರಿಯೊಂದಿಗೆ ಸಿದ್ಧವಾಗುತ್ತಿದೆ.

Read Full Story
04:58 PM (IST) Aug 02

India Latest News Live 2 August 2026 'ಜನರು ನನ್ನ ಮೊಡವೆಗಳನ್ನೇ ನೋಡುತ್ತಿದ್ದರು' - ರಾಮಾಯಣ ವಿವಾದದ ನಡುವೆ ಸಾಯಿ ಪಲ್ಲವಿ ಹೇಳಿದ್ದೇನು?

ನಟಿ ಸಾಯಿ ಪಲ್ಲವಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ. ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಅವರ ಆಯ್ಕೆ ಆಗಿರುವುದು.

Read Full Story
04:23 PM (IST) Aug 02

India Latest News Live 2 August 2026 ಚಾಯ್‌ವಾಲಾ ಕೆಫೆ ಸಂಸ್ಥಾಪಕ ರೋಹಿತ್ ಶರ್ಮಾ ಬಾಳಲ್ಲಿ ಬಿರುಗಾಳಿ, 30ರ ಉದ್ಯಮಿ ಶವವಾಗಿ ಪತ್ತೆ

ಚಾಯ್‌ವಾಲಾಝ್ ಕೆಫೆ ಸ್ಟಾರ್ಟ್ಅಫ್ ಉದ್ಯಮಿ ಆರಂಭಿಸಿ ಭಾರಿ ಯಶಸ್ಸು ಕಂಡ ರೋಹಿತ್ ಶರ್ಮಾ ಬಾಳಲ್ಲಿ ಬಿರುಗಾಳಿ ಎದ್ದು ಕೆಲ ದಿನಗಳು ಉರುಳಿತ್ತು. ಇದೀಗ 30ರ ಹರೆಯದ ಉದ್ಯಮಿ ಶವವಾಗಿ ಪತ್ತೆಯಾಗಿದ್ದಾರೆ.

Read Full Story
02:35 PM (IST) Aug 02

India Latest News Live 2 August 2026 ಪುರಾತತ್ವ ತಾಣ ವೀಕ್ಷಿಸಲು ತೆರಳಿದ ಪ್ರವಾಸಿಗರಿದ್ದ ವಿಮಾನ ಪತನ, 13 ಮಂದಿ ಸಾವು, ಘಟನೆ ದೃಶ್ಯ ಸೆರೆ

ಪುರಾತತ್ವ ಇಲಾಖೆ ನಿರ್ವಹಿಸುವ ಪ್ರಾಚೀನ ತಾಣ ವೀಕ್ಷಿಸಲು ತೆರಳಿದ ಪ್ರವಾಸಿಗರಿದ್ದ ವಿಮಾನ ಪತನಗೊಂಡಿದೆ. ಪರಿಣಾಮ ವಿಮಾನದಲ್ಲಿ 13 ಪ್ರವಾಸಿಗರು ಜೀವಂತ ದಹನವಾಗಿದ್ದಾರೆ. ಘಟನೆ ದೃಶ್ಯಗಳು ಹೊರಬಂದಿದ್ದು, ಭೀಕರತೆಯ ಸಾರುತ್ತಿದೆ.

Read Full Story
01:47 PM (IST) Aug 02

India Latest News Live 2 August 2026 'ಅವ್ರು ಮಗಳ ಬ್ರೈನ್​ವಾಷ್​ ಮಾಡಿದ್ರು, ನೀವು ಜೀವದಾನ ಕೊಟ್ರಿ' - ಪ್ರಧಾನಿಯನ್ನು ನಿಂದಿಸಿದ್ದ ಬಾಲಕಿ ಅಮ್ಮನಿಂದ ಸಂದೇಶ

ಸೋಷಿಯಲ್ ಮೀಡಿಯಾದಿಂದ ಪ್ರಭಾವಿತಳಾಗಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿದ್ದ 15 ವರ್ಷದ ಬಾಲಕಿಯ ಮೇಲೆ ಎಫ್‌ಐಆರ್ ದಾಖಲಾಗಿತ್ತು. ನಂತರ ತನ್ನ ತಪ್ಪು ಅರಿತು ಕ್ಷಮೆ ಕೋರಿದ ಬಳಿಕ, ಪ್ರಕರಣವನ್ನು ಹಿಂಪಡೆಯಲಾಗಿದೆ. ಮಗಳ ತಪ್ಪನ್ನು ಕ್ಷಮಿಸಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಸಲ್ಲಿಸಿರುವ ತಾಯಿ, 20 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ನಿಷೇಧಿಸುವಂತೆ ಮನವಿ ಮಾಡಿದ್ದಾರೆ.

Read Full Story
01:43 PM (IST) Aug 02

India Latest News Live 2 August 2026 ಸಿಜೆಪಿ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಭಯ ಹುಟ್ಟಿಸಲು ಸಂಚು! ಪೊಲೀಸ್ ಸಮವಸ್ತ್ರದಲ್ಲಿ ದಾಳಿಗೆ ಪ್ಲಾನ್, ಉಗ್ರನ ಗೆಳತಿ ಅರೆಸ್ಟ್!

ನೀಟ್ ಪೇಪರ್ ಸೋರಿಕೆ ಪ್ರತಿಭಟನೆಯನ್ನು ಬಳಸಿಕೊಂಡು ದೆಹಲಿಯಲ್ಲಿ ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರ ಹಮೀಮ್ ಮಂಡಲ್‌ನ ಗೆಳತಿ ಅರ್ಪಿತಾ ಸರ್ಕಾರ್‌ನನ್ನು ಪಶ್ಚಿಮ ಬಂಗಾಳ ಎಸ್‌ಟಿಎಫ್ ಬಂಧಿಸಿದೆ.

Read Full Story
01:36 PM (IST) Aug 02

India Latest News Live 2 August 2026 ಭಾರೀ ಶಾಕ್.. 50 ಕೋಟಿ ಕಡಿಮೆಗೆ ಸಿನಿಮಾ ಒಪ್ಪಿಕೊಂಡ ಸಲ್ಮಾನ್ ಖಾನ್; ಸಂಭಾವನೆ ಅಷ್ಟೊಂದು ಕಡಿಮೆ ಆಗಿದ್ಯಾಕೆ?

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. ಇಂತಹ ಸಂದರ್ಭದಲ್ಲಿ ನಟರು ನೂರಾರು ಕೋಟಿ ಸಂಭಾವನೆ ಕೇಳುವುದು ನಿರ್ಮಾಪಕರಿಗೆ ಹೊರೆಯಾಗುತ್ತಿದೆ. ಸಲ್ಮಾನ್ ಖಾನ್ ಕಡಿಮೆ ಮಾಡಿದ್ದು ಇದಕ್ಕೇನಾ? ಅಥವಾ.. ಇನ್ನೇನು ಕಾರಣ?

Read Full Story
01:11 PM (IST) Aug 02

India Latest News Live 2 August 2026 'ದೃಶ್ಯಂ' ಚಿತ್ರದ ಮಾದರಿಯಲ್ಲೇ ಪತ್ನಿಯಿಂದ ಮರ್ಡರ್​ - ಗಂಡ ಫಾರಿನ್​ನಲ್ಲಿ, ಅವನ ಹೆಣ ಮನೆಯ ಬಾತ್​ರೂಮ್​ನಲ್ಲಿ

ಗುಜರಾತ್‌ನಲ್ಲಿ 'ದೃಶ್ಯಂ' ಸಿನಿಮಾ ಮಾದರಿಯ ಘಟನೆ ನಡೆದಿದೆ. ಪತಿಯನ್ನು ಕೊಲೆ ಮಾಡಿದ ಪತ್ನಿ, ಆತ ಆಸ್ಟ್ರೇಲಿಯಾಕ್ಕೆ ಹೋಗಿದ್ದಾನೆಂದು ಎರಡು ವರ್ಷಗಳ ಕಾಲ ಎಲ್ಲರನ್ನೂ ನಂಬಿಸಿದ್ದಳು. ಆದರೆ, ಮನೆಯ ಕಾಂಕ್ರೀಟ್ ನೆಲದಡಿಯಲ್ಲೇ ಆತನ ಶವ ಪತ್ತೆಯಾಗಿದೆ.
Read Full Story
12:46 PM (IST) Aug 02

India Latest News Live 2 August 2026 'ವಿದೇಶಿ ಫಂಡಿಂಗ್​ ಆಗ್ತಿರೋದು ನಿಜ, ಪ್ರೂವ್​ ಮಾಡಿ ನೋಡ್ವಾ' ಎಂದು ಸವಾಲು ಹಾಕಿದ್ದ ಜಿರಳೆ ದೀಪ್ಕೆ ಬುಡಕ್ಕೆ ಬೆಂಕಿ

ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ವಿದೇಶಿ ಫಂಡಿಂಗ್ ಆರೋಪದ ಮೇಲೆ ತನಿಖೆ ತೀವ್ರಗೊಂಡಿದೆ. ಆರ್‌ಟಿಐ ಕಾರ್ಯಕರ್ತರೊಬ್ಬರು ದೀಪ್ಕೆ ಕುಟುಂಬದ ಆರ್ಥಿಕ ಹಿನ್ನೆಲೆ ಮತ್ತು ಪಕ್ಷದ ಕಾನೂನು ನಿಧಿಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ನೀಟ್ ಪ್ರತಿಭಟನೆಯ ಹಿಂದಿನ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
Read Full Story