Asianet Suvarna News Asianet Suvarna News

ಗಡಿಯಲ್ಲಿ418 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪಿಸಿದ ಭಾರತ: ನಮ್ಮ ಅಣ್ವಸ್ತ್ರವೆಲ್ಲಾ ಮುಸ್ಲಿಮರಿಗೆ ಎಂದ ಪಾಕ್ ಸಚಿವ

ಪಂಜಾಬ್‌ನ ಅಮೃತಸರದ ಅಟ್ಟಾರಿ ವಾಘಾ ಗಡಿಯಲ್ಲಿ ದೇಶದಲ್ಲೇ ಅತಿ ಎತ್ತರವಾದ, 418 ಅಡಿ ಎತ್ತರವಿರುವ ರಾಷ್ಟ್ರ ಧ್ವಜ ಸ್ತಂಭವನ್ನು ನಿರ್ಮಿಸಲಾಗಿದೆ. ಹೀಗಾಗಿ ಇನ್ನು ಕರ್ನಾಟಕದ ಬೆಳಗಾವಿಯಲ್ಲಿರುವ 361 ಅಡಿ ಎತ್ತರದ ಧ್ವಜಸ್ತಂಭವು ದೇಶದ 2ನೇ ಅತಿ ಎತ್ತರದ ಧ್ವಜ ಸ್ತಂಭದ ಸ್ಥಾನಕ್ಕೆ ಇಳಿದಿದೆ. 

India installed a 418 feet high flag pole on the border Pakistan minister said all our nuclear weapons are for Muslims comunity akb
Author
First Published Oct 20, 2023, 10:06 AM IST

ಅಮೃತಸರ: ಪಂಜಾಬ್‌ನ ಅಮೃತಸರದ ಅಟ್ಟಾರಿ ವಾಘಾ ಗಡಿಯಲ್ಲಿ ದೇಶದಲ್ಲೇ ಅತಿ ಎತ್ತರವಾದ, 418 ಅಡಿ ಎತ್ತರವಿರುವ ರಾಷ್ಟ್ರ ಧ್ವಜ ಸ್ತಂಭವನ್ನು ನಿರ್ಮಿಸಲಾಗಿದೆ. ಹೀಗಾಗಿ ಇನ್ನು ಕರ್ನಾಟಕದ ಬೆಳಗಾವಿಯಲ್ಲಿರುವ 361 ಅಡಿ ಎತ್ತರದ ಧ್ವಜಸ್ತಂಭವು ದೇಶದ 2ನೇ ಅತಿ ಎತ್ತರದ ಧ್ವಜ ಸ್ತಂಭದ ಸ್ಥಾನಕ್ಕೆ ಇಳಿದಿದೆ. 

ಅಟ್ಟಾರಿ ವಾಘಾ ಗಡಿಯಲ್ಲಿ (Attari Wagah border)ಪಾಕಿಸ್ತಾನದ 400 ಅಡಿ ಎತ್ತರದ ಧ್ವಜವಿದ್ದು, ಇದು ಪಾಕಿಸ್ತಾನದ ಅತ್ಯಂದ ದೊಡ್ಡ ಧ್ವಜಸ್ತಂಭವಾಗಿತ್ತು. ಆದರೀಗ ಪಾಕಿಸ್ತಾನ ಧ್ವಜಕ್ಕಿಂತ 18 ಅಡಿಗಳಷ್ಟು ಎತ್ತರವಿರುವ ಧ್ವಜವನ್ನು ಭಾರತ ನಿರ್ಮಿಸಿದೆ. 3.5 ಕೋಟಿ ರು. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಈ ಧ್ವಜ ಸ್ಥಂಭವನ್ನು ಗುರುವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ (Union Road Transport and Highways Minister) ನಿತಿನ್ ಗಡ್ಕರಿ (Nitin Gadkari) ಗುರುವಾರ ಉದ್ಘಾಟಿಸಿದರು.

ಇಸ್ರೇಲ್‌ ಪೊಲೀಸರಿಗೆ ಕೇರಳದಿಂದ ಸಮವಸ್ತ್ರ ಪೂರೈಕೆ: ಯುದ್ಧಾರಂಭದ ನಂತರ ಹೆಚ್ಚಿದ ಬೇಡಿಕೆ

ನಮ್ಮ ಅಣ್ವಸ್ತ್ರ ಎಲ್ಲ ಮುಸ್ಲಿಮರಿಗೆ ಸೇರಿದ್ದು

ಪೇಶಾವರ: ವಿಶ್ವದಾದ್ಯಂತ ಮುಸ್ಲಿಮರು ಸಮಸ್ಯೆ ಎದುರಿಸುತ್ತಿರುವಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ. ನಮ ಅಣ್ವಸ್ತ್ರಗಳು ವಿಶ್ವದ ಎಲ್ಲ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ (Pakistan Prime Minister Nawaz Sharif) ಅಳಿಯ ಮೊಹಮ್ಮದ್‌ ಸಫ್ಗಾರ್‌ (Mohammad Safgar) ಹೇಳಿದ್ದಾರೆ. ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ದಾಳಿ ಹೊತ್ತಿನಲ್ಲಿ ಪಾಕ್‌ ರಾಜಕೀಯ ನಾಯಕರೊಬ್ಬರು ನೀಡಿದ ಈ ಹೇಳಿಕೆ ಸಾಕಷ್ಟು ಆತಂಕ ಹುಟ್ಟುಹಾಕಿದೆ.

ಇಂಥ ಹೇಳಿಕೆಗಳು, ಪಾಕಿಸ್ತಾನದಲ್ಲಿ ಅಣ್ವಸ್ತ್ರಗಳು ಸುರಕ್ಷಿತರ ಕೈಯಲಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಭಾರತದ ಗುಪ್ತಚರ ಇಲಾಖೆ ಮೂಲಗಳು (India's intelligence department) ಕೂಡಾ ಕಳವಳ ವ್ಯಕ್ತಪಡಿಸಿವೆ. ಪೇಶಾವರದ ರ್‍ಯಾಲಿಯಲ್ಲಿ ಮಾತನಾಡಿದ ಕ್ಯಾ. ಮೊಹಮ್ಮದ್‌ ಸಫ್ಗಾರ್‌, ಜಗತ್ತಿನಲ್ಲಿ (ಪ್ಯಾಲೆಸ್ತೀನ್‌) ದುರಂತ ನಡೆಯುತ್ತಿರುವಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ. ನಮ್ಮ ಅಣ್ವಸ್ತ್ರಗಳು ಎಲ್ಲ ಮುಸ್ಲಿಮರಿಗೂ ಸೇರಿದ್ದು, ಅದನ್ನು ಯಾರು ಬೇಕಾದರೂ ಬಳಕೆ ಮಾಡಬಹುದು ಎಂಬ ಹೇಳಿಕೆ ನೀಡಿದ್ದಾರೆ.

20 ದಿನದಲ್ಲಿ ತಮ್ಮದೇ ಕುಟುಂಬದ ಐವರ ಕೊಂದ ಇಬ್ಬರು ನಾರಿಯರು!

ಈ ಕುರಿತು ರಾಜಕೀಯ ಸಮಾರಂಭವೊಂದರಲ್ಲಿ ಮಾತನಾಡುತ್ತಾ ನಮ್ಮ ಮಾವ ಮಾಜಿ ಪ್ರಧಾನಿ ನವಾಜ಼್ ಷರೀಫ್‌ (Nawaz Sharif) ಅವರು ಹೊಂದಿದ್ದ ದಿಟ್ಟತನ ಯಾರಿಗೂ ಇಲ್ಲ. ಅವರೊಬ್ಬರೇ ಇಸ್ರೇಲ್‌ ವಿರುದ್ಧ ಮೆಟ್ಟಿ ನಿಲ್ಲುವ ಧೈರ್ಯ ತೋರಿಸಿದ್ದರು. ಅಲ್ಲದೆ ಪ್ರತಿಪಕ್ಷ ನಾಯಕನಾಗಿದ್ದಾಗ ಅಣ್ವಸ್ತ್ರದ ಕುರಿತು ಮಾತನಾಡಿ ಭಾರತದ ಎದೆ ನಡುಗಿಸಿದ್ದರು ಎಂದು ಹೇಳಿದ್ದಾರೆ.

ಚುನಾವಣೆ ಹೊತ್ತಲ್ಲೇ ತೆಲಂಗಾಣದಲ್ಲಿ 750 ಕೋಟಿ ರು. ತುಂಬಿದ್ದ ಟ್ರಕ್‌ ಪತ್ತೆ

Follow Us:
Download App:
  • android
  • ios