Asianet Suvarna News Asianet Suvarna News

ಕೆಂಪು ಕೋಟೆಯಲ್ಲಿ ರಾರಾಜಿಸಿದ ತಿರಂಗ: ಯೋಧರು, ರೈತರು, ಯುವ ಸಮೂಹಕ್ಕ ಮೋದಿ ಸಲ್ಯೂಟ್!

78ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೇರವೇರಿಸಿದ್ದಾರೆ. ಇದೇ ವೇಳೆ ದೇಶದ ಜನತೆಗೆ ಶುಭಕೋರಿದ್ದಾರೆ. ಇಷ್ಟೇ ಅಲ್ಲ ಮಹತ್ವದ ಸಂದೇಶ ಸಾರಿಸಿದ್ದಾರೆ.

India independence day 2024 PM Modi modi address nation aftet hoisting flag at red fort ckm
Author
First Published Aug 15, 2024, 8:00 AM IST | Last Updated Aug 15, 2024, 11:30 AM IST

ದೆಹಲಿ(ಅ.15) ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 11ನೇ ಬಾರಿಗೆ ಪ್ರಧಾನಿಯಾಗಿ ಧ್ವಜಾರೋಹಣ ನೇರವೆರಿಸಿದ್ದಾರೆ. ದೇಶದ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಇದೇ ವೇಳೆ ದೇಶವನ್ನು ತಮ್ಮ ಕಠಿಣ ಪರಿಶ್ರಮದ ಮೂಲಕ ಸಮರ್ಥವಾಗಿ ಮುನ್ನಡೆಸುತ್ತಿರುವ ಯೋಧರು, ರೈತರು ಯುವ ಸಮೂಹ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮೋದಿ ಸಲಾಂ ಹೇಳಿದ್ದಾರೆ. ಭಾರತ ದೇಶ ಇದೀಗ ಆತ್ಮವಿಶ್ವಾಸದಲ್ಲಿದೆ. ಎಲ್ಲವನ್ನು ಸಾಧಿಸಿ ತೋರಿಸುವ ಉತ್ಸಾಹದಲ್ಲಿದೆ ಎಂದು ಮೋದಿ ಹೇಳಿದ್ದಾರೆ. 

ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿ ಮಾತನಾಡಿ ಮೋದಿ, ಈ ಬಾರಿಯ ಪ್ರಾಕೃತಿಕ ವಿಕೋಪದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ. ಈ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಾನು ಆ ಕುಟಂಬಕ್ಕೆ ಸಂತಾಪ ಸೂಚಿಸುತ್ತಾ, ಅವರ ಕುುಟುಂಬದ ಜೊತೆ ನಾವಿದ್ದೇವೆ ಎಂದು ಭರವಸೆ ನೀಡುತ್ತಿದ್ದೇನೆ ಎಂದರು. ದೇಶದ ಮೂಲೆ ಮೂಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದೆ. ಈ ವೇಳೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಪಂಚಾಯಿತಿಯಿಂದ ಕೇಂದ್ರ ಸರ್ಕಾರದ ವರೆಗೆ ಎಲ್ಲಾ ಹಂತದಲ್ಲಿ ಸರ್ಕಾರ ಮಿಷನ್ ಮೂಡ್‌ನಲ್ಲಿ ಕಾರ್ಯನಿರ್ವಹಿಸಬೇಕು. ಈ ಮೂಲಕ ಜನರ ಜೀವನ ಸುಧಾರಿಸಲು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ 

ಸ್ವಾತಂತ್ರ್ಯೋತ್ಸವ ಸಂಭ್ರಮದಂದು ಪ್ರಧಾನಿ ಮೋದಿ ಅವರ ಟರ್ಬನ್‌ ಫ್ಯಾಶನ್‌!

40 ಕೋಟಿ ಭಾರತೀಯರು ಒಗ್ಗಟ್ಟಾಗಿ ಹೋರಾಡಿದ ದೇಶವನ್ನು ಸ್ವಾತಂತ್ರ್ಯಗೊಳಿಸಿತು. ಬ್ರಿಟಿಷ್ ಆಡಳಿತದಿಂದ ದೇಶ ಮುಕ್ತಿಗೊಂಡಿತು. ಇದೀಗ 140 ಕೋಟಿ ದೇಶ ನಮ್ಮದು. ಶಕ್ತಿಶಾಲಿ ಭಾರತ ಇದೀಗ ಅಸಾಧ್ಯವಾದದ್ದನ್ನೂ ಸಾಧಿಸುವ ತೋರಿಸುವ ಸಾಮರ್ಥ್ಯ ಹೊಂದಿದೆ. ಅಂದು 40 ಕೋಟಿ ಜನ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದರು. ಇದೀಗ 140 ಕೋಟಿ ಜನರು ಈ ದೇಶವನ್ನು ಮತ್ತಷ್ಟು ಅಭಿವೃದ್ಧಿ ಹಾಗೂ ಶಕ್ತಿಶಾಲಿ ದೇಶವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. 

ಭಾರತದ ಯುವ ಸಮೂಹ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ. ಇದು ಸುವರ್ಣಯುಗ. ಹಲವು ದಶಕಗಳ ಕಾಲ ಭಾರತ ಕುಟುಂಬ ಪರಿವಾರ ಆಡಳಿತ ನೋಡಿದೆ. ಇದರ ಪರಿಣಾವನ್ನೂ ಎದುರಿಸಿದೆ. ಕೋವಿಡ್ ಸಂದರ್ಭದಲ್ಲಿ ನಮ್ಮ ಕೊರೋನಾ ವಾರಿಯರ್ಸ್ ಮುಂದೆ ನಿಂತು ಜನರ ಪ್ರಾಣ ಉಳಿಸುವ ಕೆಲಸ ಮಾಡಿದರು. ನಮ್ಮ ಸೇನೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ಭಾರತ ತನ್ನ ಶಕ್ತಿ ಸಾಮರ್ಥ್ಯವನ್ನು ತೋರಿಸಿದೆ ಎಂದು ಮೋದಿ ಹೇಳಿದ್ದಾರೆ.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ದೇಶ ಮಾಡಲು ನಾಗರೀಕರು ಹಲವು ಸಲಹೆಗಳನ್ನು ನೀಡಿದ್ದಾರೆ. ಭಾರತವನ್ನು ಉತ್ಪಾದನಾ ಹಬ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಶಕ್ತಗೊಳಿಲು ಮಹತ್ವದ ಸಲಹೆ ನೀಡಿದ್ದಾರೆ. ಭಾರತ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಮೋದಿ ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ: ಅಂಬೇಡ್ಕರ್ ಫೋಟೋ ಕಡ್ಡಾಯ, ಸಚಿವರ ಸೂಚನೆ

ನಮ್ಮ ದೇಶ ಹೊಸ ಆತ್ಮವಿಶ್ವಾಸದಲ್ಲಿದೆ. ನಮ್ಮ ಯುವ ಸಮೂಹ ಉನ್ನತಿಗೆ ಶ್ರಮಿಸುತ್ತಿದೆ. ಇವರಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ನಾಗರೀಕರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಪ್ರಮುಖ ಆದ್ಯತೆ ನೀಡಿದೆ. ಇಂದು ಸಮಾಜದಲ್ಲಿ ವಿಶ್ವಾಸ ತುಂಬಿಕೊಂಡಿದೆ. ಎಲ್ಲರು ಜೊತೆಯಾಗಿ ಭಾರತ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಜಾಗತಿಕ ಅಭಿವೃದ್ಧಿಯಲ್ಲಿ ಭಾರತದ ಕೂಡುಗೆ ಮಹತ್ವವಾಗಿದೆ. ಭಾರತದ ರಫ್ತು, ಭಾರತದ ಉತ್ಪಾದನೆ, ಹೂಡಿಕೆ ಹೆಚ್ಚಾಗಿದೆ. ಇದೀಗ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದರು.   

Latest Videos
Follow Us:
Download App:
  • android
  • ios