India

ಸ್ವಾತಂತ್ರ್ಯ ದಿನಾಚರಣೆ: PM ಮೋದಿ ಟರ್ಬನ್ ಫ್ಯಾಷನ್

2014- ಜೋಧಪುರಿ ಬಂಧೇಜ್ ಪೇಟ

ಪ್ರಧಾನಿಯಾಗಿ ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಂದು ನರೇಂದ್ರ ಮೋದಿ ಹೊಳೆಯುವ ಹಸಿರು ಮತ್ತು ಕೆಂಪು ಬಣ್ಣದ ಜೋಧಪುರಿ ಬಂಧೇಜ್ ಪೇಟವನ್ನು ಆಯ್ಕೆ ಮಾಡಿದ್ದರು.

2015- ಕ್ರಿಸ್ ಕ್ರಾಸ್ ಹಳದಿ ಪೇಟ

ಈ ಬಾರಿ ಬೇಸ್ ಕಲರ್ ಹಳದಿ ಬಣ್ಣದ್ದಾಗಿತ್ತು. ಅದರ ಮೇಲೆ ಅದೇ ಬಣ್ಣದ ಜೊತೆಗೆ ಕೆಂಪು ಮತ್ತು ಹಸಿರು ಬಣ್ಣದ ವಿವಿಧ ಛಾಯೆಗಳ ಕ್ರಾಸ್-ಕ್ರಾಸ್ ಲೈನ್‌ಗಳಿದ್ದವು.

2016- ಟೈ & ಡೈ ಲಹರಿಯಾ ಪೇಟ

ಈ ವರ್ಷ ಪ್ರಧಾನಿ ಗುಲಾಬಿ ಮತ್ತು ಹಳದಿ ಬಣ್ಣದ ಟೈ & ಡೈ ಪೇಟವನ್ನು ಧರಿಸಿದ್ದರು. ಮೃದುವಾದ ಬಟ್ಟೆಯು ಮೋದಿಯವರ ನೋಟವನ್ನು ವಿಭಿನ್ನವಾಗಿಸಿತ್ತು.

 

2017- ಹಳದಿ-ಕೆಂಪು ಗೋಟಾ ಲೈನ್ ಪೇಟ

ಈ ವರ್ಷ ಮಿಶ್ರಿತ ಕೆಂಪು ಮತ್ತು ಹಳದಿ ಬಣ್ಣದ ಟೈಲ್ ಪೇಟವನ್ನು ಆಯ್ಕೆ ಮಾಡಲಾಗಿತ್ತು. ಅದರ ಮೇಲೆ ಎಲ್ಲೆಡೆ ಕ್ರಾಸ್-ಕ್ರಾಸ್ ಗೋಲ್ಡನ್ ಗೋಟಾ ಲೈನ್‌ಗಳಿದ್ದವು.

 

2018- ಭಗವಾ ಪೇಟ

ಈ ಕೇಸರಿಪೇಟವು ಛಾಯೆಯ ಕೆಂಪು ಬಣ್ಣವನ್ನು ಸಹ ಹೊಂದಿತ್ತು ಮತ್ತು ಅದರ ಉದ್ದನೆಯ ಬಾಲವು ಪ್ರಧಾನ ಮಂತ್ರಿಯ ಲುಕ್ಅನ್ನು ಭಿನ್ನವಾಗಿರಿಸಿತ್ತು.

2019- ವರ್ಣರಂಜಿತ ಪೇಟ

ಕೆಂಪು ಕೋಟೆಯಲ್ಲಿ ಅವರ ಉಡುಗೆ ತೊಡುಗೆ ಒಂದು ಸಂಪ್ರದಾಯವಾಗಿದೆ. ಈ ವರ್ಷ ಹಳದಿ, ಕೆಂಪು, ಹಸಿರು ಮತ್ತು ಕಿತ್ತಳೆ ಬಣ್ಣದ ಬಹುವರ್ಣದ ಪೇಟವನ್ನು ಅವರು ಆಯ್ಕೆ ಮಾಡಿದ್ದರು.

2020- ಭಗವಾ ಮತ್ತು ಕ್ರೀಮ್ ಪೇಟ

ಈ ವರ್ಷ ಕೇಸರಿ ಮತ್ತು ಕ್ರೀಮ್ ಬಣ್ಣದ ಪೇಟ ಧರಿಸಿದ್ದರು. 'ಸಾಫಾ'ವನ್ನು ಅರ್ಧ ತೋಳಿನ ಆಫ್ ವೈಟ್ ಕುರ್ತಾ ಮತ್ತು ಫಿಟ್ಟೆಡ್ ಲಾಂಗ್‌ ಡ್ರೆಸ್‌ನೊಂದಿಗೆ ಧರಿಸಿದ್ದರು.

2021- ಕೇಸರಿ ಬಣ್ಣದ ಪೇಟ

ತಮ್ಮ 8 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ PM ಮೋದಿ ಮತ್ತೆ ಕೇಸರಿ ಪೇಟವನ್ನು ಧರಿಸಲು ಆಯ್ಕೆ ಮಾಡಿದ್ದರು. 

2022- ರಾಷ್ಟ್ರಧ್ವಜ ಪೇಟ

ಕೆಂಪು ಕೋಟೆಯಿಂದ ತಮ್ಮ ಒಂಬತ್ತನೇ ಭಾಷಣ ಮಾಡಿದ ಪ್ರಧಾನಿ ಮೋದಿ ತಮ್ಮ ತಲೆಯ ಮೇಲೆ ರಾಷ್ಟ್ರಧ್ವಜದ ಸಾಫಾ ಧರಿಸುವ ಮೂಲಕ ವಿಭಿನ್ನ ಹೆಜ್ಜೆ ಇಟ್ಟಿದ್ದರು. 

2023- ರಾಜಸ್ಥಾನಿ ಪೇಟ

77 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಉದ್ದನೆಯ ಬಾಲವನ್ನು ಹೊಂದಿರುವ ಎದ್ದುಕಾಣುವ ರಾಜಸ್ಥಾನಿ ಶೈಲಿಯ ಪೇಟವನ್ನು ಆಯ್ಕೆ ಮಾಡಿದ್ದರು.

 

Find Next One