Asianet Suvarna News Asianet Suvarna News

ಭಾರತಕ್ಕೆ ಕೋವಿಡ್ 4ನೇ ಅಲೆ ಭೀತಿ, ಹೊಸ ವರ್ಷದ ಆರಂಭದಿಂದ ನಿರ್ಬಂಧ ಜಾರಿ!

ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆದರೆ ವಿದೇಶಗಳಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಭಾರತದಲ್ಲಿ 4ನೇ ಅಲೆ ಭೀತಿ ಎದುರಾಗಿದೆ. ಇದರ ಪರಿಣಾಮ ಇದೀಗ 5 ದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ RT PCR ನೆಗಟೀವ್ ವರದಿ ಕಡ್ಡಾಯ ಮಾಡಲಾಗಿದೆ.

India implement RT PCR negative report mandatory for international travelers from 5 countries include china ckm
Author
First Published Dec 29, 2022, 6:10 PM IST

ನವದೆಹಲಿ(ಡಿ.29):  ಭಾರತದಲ್ಲಿ ಕೋವಿಡ್ ಭೀತಿ ಹೆಚ್ಚಾಗಿದೆ. ಚೀನಾದಲ್ಲಿನ ಪ್ರತಿ ದಿನ ಪ್ರಕರಣ ಸಂಖ್ಯೆ 5 ಲಕ್ಷ ದಾಟಿದೆ. ಆಸ್ಪತ್ರೆಗಳು ಭರ್ತಿಯಾಗಿವೆ. ಸಾವಿನ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಭಾರತದಲ್ಲೂ ಒಂದೊಂದೆ ನಿರ್ಬಂಧ ಜಾರಿಯಾಗುತ್ತಿದೆ. ಇದೀಗ ಭಾರತದಲ್ಲಿ ಕೋವಿಡ್ ನಾಲ್ಕನೇ ಅಲೆ ಭೀತಿ ಎದುರಾಗಿರುವ ಕಾರಣ ಜನವರಿ 1 ರಿಂದ ಕೋವಿಡ್ ನಿಯಮ ಮತ್ತಷ್ಟು ಕಠಿಣವಾಗುತ್ತಿದೆ. ಮೊದಲ ಹಂತದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿರುವ ಚೀನಾ ಸೇರಿದಂತೆ 5 ದೇಶಗಳ ಪ್ರಯಾಣಿಕರಿಗೆ ನಿರ್ಬಂದ ವಿಧಿಸಲಾಗಿದೆ. ಚೀನಾ, ಜಪಾನ್, ಹಾಂಕ್ ಕಾಂಗ್, ಸೌತ್ ಕೊರಿಯಾ, ಸಿಂಗಾಪುರ ಹಾಗೂ ಥಾಯ್‌ಲೆಂಡ್ ದೇಶದಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ ಪಿಸಿಆರ್ ನೆಗಟೀವ್ ವರದಿ ಆಗಿರಬೇಕು ಎಂದು ಭಾರತ ಹೊಸ ಮಾರ್ಗಸೂಚಿ ಹೊರಡಿಸಿದೆ.

5 ದೇಶಗಳ ಪ್ರಯಾಣಿಕರು ಭಾರತಕ್ಕೆ ಆಗಮಿಸುವಾಗ ಕೋವಿಡ್ ನೆಗಟೀವ್ ವರದಿ ತರಬೇಕು. ಈ ವರದಿ 72 ಗಂಟೆ ಮೀರಿರಬಾರದು. ಈ ನಿಯಮ ಜನವರಿ 1, 2023ರಿಂದ ಜಾರಿಯಾಗುತ್ತಿದೆ. ಈಗಾಗಲೇ ಭಾರತದಲ್ಲಿ ಒಂದೊಂದೆ ನಿಯಮಗಳು ಜಾರಿಯಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೋವಿಡ್ ಮಾರ್ಗಸೂಚಿ ಪಾಲನೆ ಸೇರಿದಂತೆ ಹಲವು ನಿಯಮಗಳು ಜಾರಿಯಾಗಿದೆ. 

ಜನವರಿ, ಫೆಬ್ರವರಿ ತಿಂಗಳಲ್ಲಿ ಕೊರೊನಾ ಹೆಚ್ಚಾಗಲಿದೆ: ಡಾ. ಸಿ ಎನ್ ಮಂಜುನಾಥ್

ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಇನ್ನು ಕ್ವಾರಂಟೈನ್ ನಿಯಮವನ್ನು ಜಾರಿಗೆ ತರಲಾಗಿದೆ. ಇವೆಲ್ಲವೂ ಅಂತಾರಾಷ್ಟ್ರೀಯ ಪ್ರಯಾಣಿರಿಗೆ ಅನ್ವಯವಾಗಲಿದೆ. ಕಠಿಣ ನಿಯಮಗಳ ಜಾರಿಯಿಂದ ಭಾರತದಲ್ಲೂ ಆತಂಕ ಹೆಚ್ಚಾಗುತ್ತಿದೆ

ಗುರುವಾರ ಭಾರತದಲ್ಲಿ 268 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಭಾರತದ ಸಕ್ರಿಯ ಕೋವಿಡ್ ಪ್ರಕರಣ ಸಂಖ್ಯೆ 3,552ಕ್ಕೆ ಏರಿಕೆಯಾಗಿದೆ. ಕೋವಿಡ್ ಸುದ್ದಿಗಳಿಂದ ಆತಂಗೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ಮುಂಜಾಗ್ರತೆ ವಹಿಸಿ ಎಂದು ಸಲಹೆ ನೀಡಿದೆ.

ಮುಂದಿನ 40 ದಿನದಲ್ಲಿ ಕೋವಿಡ್ ಸ್ಫೋಟ, ಅಪಾಯದ ತೀವ್ರತೆ ಕಡಿಮೆ; ಆರೋಗ್ಯ ಸಚಿವಾಲಯದ ಎಚ್ಚರಿಕೆ!

ಇನ್ನು 40 ದಿನ ಎಚ್ಚರ ವಹಿಸಿ
ಚೀನಾ, ಜಪಾನ್‌, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್‌ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ 35-40 ದಿನಗಳು ಭಾರತದ ಪಾಲಿಗೆ ಅತ್ಯಂತ ಮಹತ್ವದ್ದು. ಈ ಅವಧಿಯನ್ನು ಎದುರಿಸುವುದು ಅತ್ಯಂತ ನಿರ್ಣಾಯಕ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಈ ಮೂಲಕ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ, ಸೋಂಕು ನಿಗ್ರಹ ನಿಟ್ಟಿನಲ್ಲಿ ಕೆಲವೊಂದು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬಹುದು ಎಂಬ ಸುಳಿವು ಸಿಗತೊಡಗಿದೆ.ಈ ಹಿಂದಿನ ಅಲೆಗಳ ವೇಳೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೋವಿಡ್‌ಗೆ ಅರಿವಿದ್ದೋ, ಇಲ್ಲದೆಯೋ ತುತ್ತಾಗಿರುವ ಕಾರಣ ಅವರಲ್ಲಿ ಹೈಬ್ರಿಡ್‌ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಹೀಗಾಗಿ ಮತ್ತೆ ಅವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಸರ್ಕಾರದ ಸೂಚನೆಯಿಂದ ಪ್ರಸಕ್ತ ವಾರದಿಂದ ಸೋಂಕು ಹೆಚ್ಚಿರುವ ನಿಗದಿತ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಕಡ್ಡಾಯವಾಗಿ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಅಂತೆಯೇ ಬುಧವಾರ 110 ಪ್ರಯಾಣಿಕರ ಮಾದರಿಯನ್ನು ವಿಮಾನ ನಿಲ್ದಾಣದಲ್ಲಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ದುಬೈ, ಅಬುದಾಬಿ ಹಾಗೂ ಕತಾರ್‌ನಿಂದ ಬಂದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
 

Follow Us:
Download App:
  • android
  • ios