Asianet Suvarna News Asianet Suvarna News

Netaji Birth Anniversary ಜರ್ಮನಿಯಲ್ಲಿ ವಿಶೇಷ ಔತಣಕೂಟ, ಜೈಹಿಂದ್ ಎಂದ ನೇತಾಜಿ ಪುತ್ರಿ

* ವೀರ ಸೇನಾನಿ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನುಮ ದಿನ
* ಜರ್ಮನಿಯಲ್ಲಿರುವ ನೇತಾಜಿ ಪುತ್ರಿಗೆ ವಿಶೇಷ ಔತಣಕೂಟ 
* ಗೆಸ್ಟ್ ಬುಕ್‌ನಲ್ಲಿ ಜೈಹಿಂದ್ ಅಂತ ಸಹಿ

India Hosts Dinner For Bose Daughter In Germany On Netaji 125th Birthday rbj
Author
Bengaluru, First Published Jan 23, 2022, 11:11 PM IST

ನವದೆಹಲಿ, (ಜ.23):  ಸದಾ ಕ್ರಿಯಾಶಿಲರಾಗಿದ್ದ ದೇಶಕ್ಕಾಗಿ ತಮ್ಮ ಬದುಕನ್ನೇ ಮುಡುಪಿಟ್ಟ ಆ ಮಹಾನ್ ಚೇತನವನ್ನು ನಾವೆಲ್ಲ ಒಂದಾಗಿ ಸ್ಮರಣೆ ಮಾಡಬೇಕಾದ ದಿವಸ ಇಂದು.

ಹೌದು...ಕ್ರಾಂತಿಯ ಮೂಲಕ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನ ಹಚ್ಚಿದ ವೀರ ಸೇನಾನಿ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನುಮ ದಿನ(Subhas Chandra Bose 125th Birth Anniversary.

Subhash Chandra Bose Statue : ಇಂಡಿಯಾ ಗೇಟ್ ನಲ್ಲಿ ಸ್ಥಾಪನೆಯಾಗಲಿದೆ ನೇತಾಜಿ ಪ್ರತಿಮೆ

ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನ ಪ್ರಯುಕ್ತ ನೇತಾಜಿ ಅವರ ಪುತ್ರಿ ಅನಿತಾ ಬೋಸ್, ಜರ್ಮನಿಯ ಭಾರತ ರಾಯಭಾರಿ ಕಚೇರಿ ಆಯೋಜಿಸಿದ್ದ ಭೋಜನಕೂಟದಲ್ಲಿ ಭಾಗಹಿಸಿದ್ದು, ಕೊನೆಗೆ ಜೈಹಿಂದ್ ಎಂದು ಸಹಿ ಹಾಕಿದ್ದಾರೆ.

 ಹೌದು...ಸ್ವಾತಂತ್ರ್ಯ ಹೋರಾಟಗಾರರ 125 ನೇ ಜನ್ಮ ವಾರ್ಷಿಕೋತ್ಸವದ ಹಿಂದಿನ ದಿನ ಭೋಜನಕ್ಕೆ ಆಹ್ವಾನಿಸಲಾಗಿತ್ತು. ಆ ವೇಳೆ ನೇತಾಜಿ ಅವರ ಪುತ್ರಿ ಅನಿತಾ ಬೋಸ್ ಅವರು ಅತಿಥಿಗಳ ಪುಸ್ತಕದಲ್ಲಿ ಜೈಹಿಂದ್ ಎಂದು ಸಹಿ ಹಾಕಿ ಗಮನಸೆಳೆದಿದ್ದಾರೆ. 

 ನೇತಾಜಿ 125 ನೇ ಜನ್ಮ ವಾರ್ಷಿಕೋತ್ಸವ ಮುನ್ನ ದಿನವೇ ಜರ್ಮನಿಯ ಇಂಡಿಯಾ ಹೌಸ್‌ನಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಜೈಹಿಂದ್ ಎಂದು ಅನಿತಾ ಬೋಸ್  ಗೆಸ್ಟ್‌ ಬುಕ್‌ನಲ್ಲಿ ಬರೆದಿದ್ದಾರೆ.

ಈ ಬಗ್ಗೆ ಜರ್ಮನಿಯ ಭಾರತ ರಾಯಭಾರಿ ಕಚೇರಿ ತನ್ನ ಟ್ವಿಟ್ಟರ್‌ನಲ್ಲಿ ಅನಿತಾ ಬೋಸ್ ಅವರು ಅತಿಥಿ ಬುಕ್‌ನಲ್ಲಿ ಬರೆದ ಫೋಟೋ ಸಮೇತ
ಹಂಚಿಕೊಂಡಿದೆ. 

ಇಂಡಿಯಾ ಗೇಟ್ ನಲ್ಲಿ ನೇತಾಜಿ ಪ್ರತಿಮೆ
ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಅವರ 125ನೇ ಜನ್ಮ ದಿನಾಚರಣೆಗೂ ಮುನ್ನ ಸ್ವಾತಂತ್ರ್ಯ ಚಳುವಳಿಗೆ (independence movement) ಅವರ ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಅವರ ಭವ್ಯ ಪ್ರತಿಮೆಯನ್ನು ಇಂಡಿಯಾ ಗೇಟ್ ನಲ್ಲಿ(India Gate) ಈಗಾಗಲೇ ಖಾಲಿ ಇರುವ ಭವ್ಯ ಮೇಲಾವರಣದ ಅಡಿಯಲ್ಲಿ ಸ್ಥಾಪನೆ ಮಾಡಲಾಗಿದೆ.

ಇಂಡಿಯಾ ಗೇಟ್‌ನಲ್ಲಿ ಹೊಲೊಗ್ರಾಮ್‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣ ಮಾಡಿದರು. ಇನ್ನು ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ 2019, 2020, 2021 ಮತ್ತು 2022 ರ ಸುಭಾಸ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರಗಳನ್ನು ಪ್ರದಾನ ಮಾಡಿದರು

ಇನ್ನು ಇಂಡಿಯಾ ಗೇಟ್‌ನಲ್ಲಿ ಹೊಲೊಗ್ರಾಮ್‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣ ಮಾಡಿದ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ನೇತಾಜಿ ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ಮುಂದೆ ತಲೆಬಾಗಲು ನಿರಾಕರಿಸಿದರು. ಶೀಘ್ರದಲ್ಲೇ ಹೊಲೊಗ್ರಾಮ್ ಪ್ರತಿಮೆಯನ್ನು ಭವ್ಯವಾದ ಗ್ರಾನೈಟ್ ಪ್ರತಿಮೆಯಾಗಿ ಬದಲಾವಣೆ ಮಾಡಲಾಗುವುದು. ನೇತಾಜಿ ಅವರ ಪ್ರತಿಮೆಯು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ," ಎಂದು ತಿಳಿಸಿದರು.

Follow Us:
Download App:
  • android
  • ios