Rana Ayyub Case ರಾಣಾ ಅಯೂಬ್‌ಗೆ ಕಿರುಕುಳ ಎಂದ ವಿಶ್ವಸಂಸ್ಥೆಗೆ ಕಾನೂನು ಎಲ್ಲರಿಗೂ ಒಂದೆ ಎಂದು ಭಾರತ ತಿರುಗೇಟು!

  • ಪತ್ರಕರ್ತೆ ರಾಣಾ ಅಯೂಬ್ ಪರ ವಿಶ್ವಸಂಸ್ಥೆ ಬ್ಯಾಟಿಂಗ್
  • ಭಾರತದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ತಿರುಗೇಟು
  • ಅಕ್ರಮ ಹಣವರ್ಗಾವಣೆ ಪ್ರಕರಣ, ಬ್ಯಾಂಕ್ ಠೇವಣಿ ಜಪ್ತಿ
India  hit back United Nations says no one is above law after UN questions judicial harassment against Rana Ayyub ckm

ನವದೆಹಲಿ(ಫೆ.21): ಭಾರತದಲ್ಲಿ ಕಾನೂನು ಎಲ್ಲರಿಗೂ ಒಂದೇ. ಇದಕ್ಕೆ ಪತ್ರಕರ್ತೆ ರಾಣಾ ಅಯೂಬ್ ಹೊರತಲ್ಲ. ತಪ್ಪು ಮಾಹಿತಿಗಳನ್ನು ನೀಡಿ ವಿಶ್ವಸಂಸ್ಥೆ ತನ್ನ ಖ್ಯಾತಿಯನ್ನು ಹಾಳುಮಾಡುತ್ತಿದೆ ಎಂದು ಭಾರತ ತಿರುಗೇಟು ನೀಡಿದೆ. ಆಯೂಬ್ ಮೇಲೆ ನ್ಯಾಯಾಂಗ ಕಿರುಕುಳ ನೀಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಟ್ವೀಟ್ ಮೂಲಕ ಹೇಳಿದೆ. ಈ ಟ್ವೀಟ್‌ಗೆ ಭಾರತ ತಿರುಗೇಟು ನೀಡುವ ಮೂಲಕ ಖಡಕ್ ಉತ್ತರ ನೀಡಿದೆ.

ಕೊರೋನಾ ಸಂಕಷ್ಟದಲ್ಲಿ ಜನರು ನೀಡಿದ ದೇಣಿಗೆ ದುರ್ಬಳಕೆ,  ಅಕ್ರಣ ಹಣವರ್ಗಾವಣೆ ಪ್ರಕರಣ ಸಂಬಂಧ ಕುರಿತು ಜಾರಿ ನಿರ್ದೇಶನಾಲಯ ಪತ್ರಕರ್ತೆ ರಾಣಾ ಅಯೂಬ್ ಅವರ ಬ್ಯಾಂಕ್ ಖಾತೆ, ನಿಧಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರ ಜೊತೆಗೆ ಇತರ ಕೆಲ ಪ್ರಕರಣಗಳು ರಾಣಾ ಆಯೂಬ್ ಮೇಲಿದೆ. ಹಲವಾರು ವರ್ಷಗಳಿಂದ ಭಾರತ ಸರ್ಕಾರ ರಾಣಾ ಆಯೂಬ್ ಮಾನವ ಹಕ್ಕುಗಳ ವರದಿಗೆ ಕಿರುಕುಳ ನೀಡುತ್ತಿದೆ ಎಂದು ವಿಶ್ವಸಂಸ್ಥೆ ರಾಣಾ ಅಯೂಬ್ ಪರ ಟ್ವೀಟ್ ಮಾಡಿದೆ.  ಆಯೂಬ್‌ನನ್ನು ಭಾರತ ಹತ್ತಿಕ್ಕಿವು ಪ್ರಯತ್ನ ಮಾಡುತ್ತಿದೆ ಎಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತ ಸ್ಪಷ್ಟ ಮಾತುಗಳಲ್ಲೇ ಕಾನೂನಿಗಿಂತ ಯಾರೂ ಮೇಲಲ್ಲ ಎಂದಿದೆ.

ಕೋವಿಡ್‌ ದೇಣಿಗೆ ದುರ್ಬಳಕೆ: ಪತ್ರಕರ್ತೆ ರಾಣಾ ಅಯ್ಯುಬ್‌ ಬ್ಯಾಂಕ್‌ ಖಾತೆ ಜಪ್ತಿ!

ಸರಣಿ ಟ್ವೀಟ್ ಮಾಡಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ, ರಾಣಾ ಆಯೂಬ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿರಂತರ ದಾಳಿ ಮಾಡಲಾಗುತ್ತಿದೆ. ಪಂಥೀಯ ಆಧರಿತ ದಾಳಿಗಳು ಆಧಾರ ರಹಿತವಾಗಿದೆ. ಭಾರತ ಸಂಪೂರ್ಣ ತನಿಖೆ ನಡೆಸಬೇಕು. ಇಷ್ಟೇ ಅಲ್ಲ ಭಾರತ ನೀಡುತ್ತಿರವ ನ್ಯಾಯಾಂಗ ಕಿರುಕುಳ ತಕ್ಷಣ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಟ್ವೀಟ್ ಮಾಡಿದೆ.

 

ಕಳೆದ 6 ತಿಂಗಳಲ್ಲಿ 2 ಬಾರಿ ರಾಣಾ ಆಯೂಬ್ ಖಾನ್ ಅವರ ಮೇಲೆ ಜಾರಿ ನಿರ್ದೇಶನಾಲಯ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಈ ಹಣವನ್ನು ಸ್ವಂತಕ್ಕೆ ರಾಣಾ ಆಯೂಬ್ ಬಳಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ಈ ಆರೋಪದಡಿ ಪ್ರಾಥಮಿಕ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಫೆಬ್ರವರಿ 11 ರಂದು ರಾಣಾ ಆಯೂಬ್ ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದೆ. 

2020 ಹಾಗೂ 2011ರಲ್ಲಿ ರಾಣಾ ಆಯೂಬ್ ಅವರ ಕೆಟ್ಟೋ ಎಂಬ ಆನ್‌ಲೈನ್ ಕ್ರೌಡ್ ಫಂಡಿಂಗ್ ಸಂಸ್ಥೆ ಸರಿಸುಮೂರು 3 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ. ಇದು ಕೊರೋನಾ ಹೆಸರಿನಲ್ಲಿ ಈ ದೇಣಿಗೆ ಸಂಗ್ರಹಿಸಲಾಗಿತ್ತು. ಈ ಹಣಗಳನ್ನು ರಾಣಾ ಆಯೂಬ್ ತಮ್ಮ ಸ್ವಂತ ಖಾತೆಗೆ ವರ್ಗಾಯಿಸಿದ್ದಾರೆ. ಜಾರಿ ನಿರ್ದೇಶನಾಲಯಕ್ಕೆ ರಾಣಾ ಆಯೂಬ್ 31 ಲಕ್ಷ ರೂಪಾಯಿ ಖರ್ಚಿನ ದಾಖಲೆ ನೀಡಿದ್ದಾರೆ. ಆದರೆ ಈ ದಾಖಲೆಗಳಲ್ಲಿ 17.66 ಲಕ್ಷ ರೂಪಾಯಿ ಖರ್ಚಿನ ದಾಖಲೆಗಳು ಮಾತ್ ಮಾನ್ಯ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!

ಹಲವು ನಕಲಿ ಬಿಲ್ ತಯಾರಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಹಣವನ್ನು ಕೊರೋನಾ ಸಂತ್ರಸ್ತರಿಗೆ, ಕೊರೋನಾದಿಂದ ಬದುಕು ಕಳೆದುಕೊಂಡವರ ಏಳಿಗೆಗಾಗಿ, ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಬಳಸುವುದಾಗಿ ಹೇಳಲಾಗಿತ್ತು. ಆದರೆ ಕೊರೋನಾದ ಯಾವುದೇ ಉದ್ದೇಶಕ್ಕೆ ಈ ಹಣ ಬಳಕೆಯಾಗಿಲ್ಲ. ಬದಲಾಗಿ ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
 

Latest Videos
Follow Us:
Download App:
  • android
  • ios