ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್, ಸಂವಿಧಾನ ಪೀಠಿಕೆಯಲ್ಲಿ ಭಾರತ ಹಿಂದೂ ರಾಷ್ಟ್ರ ಎಂಬುದು ಸೇರಿಸಬೇಕೆ ಅನ್ನೋದಕ್ಕೆ ಮೋಹನ್ ಭಾಗವತ್ ಉತ್ತರಿಸಿದ್ದಾರೆ. 

ನವದೆಹಲಿ (ಡಿ.22) ಭಾರತ ಜಾತ್ಯಾತೀಯ ರಾಷ್ಟ್ರ, ಭಾರತ ಹಿಂದೂ ರಾಷ್ಟ್ರ ಅನ್ನೋ ಕುರಿತು ಭಾರಿ ಚರ್ಚೆ, ವಾದ ವಿವಾದಗಳು ನಡೆಯುತ್ತಲೇ ಇದೆ. ಆರ್‌ಎಸ್ಎಸ್, ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಭಾರತ ಹಿಂದೂ ರಾಷ್ಟ್ರ ಎಂದು ವಾದಿಸಿದರೆ, ಇತ್ತ ಇತರ ಪಕ್ಷಗಳು ಜ್ಯಾತ್ಯಾತೀತ ರಾಷ್ಟ್ರ ಎಂದು ಚರ್ಚೆ ಮಾಡಿದೆ. ಭಾರತದ ಸಂವಿದಾನದ ಪೀಠಿಕೆಯಲ್ಲಿ ಜಾತ್ಯಾತೀತ ಎಂಬ ಪದವನ್ನು ಸೇರಿಸಲಾಗಿದೆ. ಆರ್‌ಎಸ್‌ಎಸ್ 100ನೇ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸರಸಂಘ ಚಾಲಕ ಮೋಹನ್ ಭಾಗವತ್, ಭಾರತ ಹಿಂದೂ ರಾಷ್ಟ್ರ. ಇದನ್ನು ಸಂವಿಧಾನ ಪೀಠಿಕೆ ಮೂಲಕ, ಅಥವಾ ಅನುಮೋದನೆ ಮೂಲಕ ಹೇಳಬೇಕಿಲ್ಲ ಎಂದಿದ್ದಾರೆ.

ತಾಯಿನಾಡು ಎಂದು ಪರಿಗಣಿಸುವವರೆಗೆ ಇದು ಹಿಂದೂ ರಾಷ್ಟ್ಕ

ಎಲ್ಲಿಯವರೆಗೆ ಜನ ಭಾರತವನ್ನು ತಾಯಿ ನಾಡು ಎಂದು ಪರಿಗಣಿಸುತ್ತಾರೆ, ಅಲ್ಲೀವರೆಗೆ ಭಾರತ ಹಿಂದೂ ರಾಷ್ಟ್ರ ಆಗಿರುತ್ತದೆ. ಕಡೆಗೆ ಒಬ್ಬ ವ್ಯಕ್ತಿ ನನ್ನ ತಾಯಿ ನೆಲ ಎಂದು ಹೆಮ್ಮೆಯಿಂದ ಹೇಳಿಕೊಂಡರೆ ಇದು ಹಿಂದೂ ರಾಷ್ಟ್ರ. ನಮ್ಮ ಪೂರ್ವಜನಕರು ಹಿಂದೂ ರಾಷ್ಟ್ರವನ್ನು ಉಳಿಸಿ ನಮಗೆ ಕೊಟ್ಟಿದ್ದಾರೆ. ನಾವು ಉಳಿಸಿ ಬೆಳೆಸಬೇಕಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಹಿಂದೂ ರಾಷ್ಟ್ರ ಯಾವತ್ತೂ ಜಾತ್ಯಾತೀತ ರಾಷ್ಟ್ರ. ಹಿಂದೂ ರಾಷ್ಟ್ರದ ಕಾರಣದಿಂದ ಇಲ್ಲಿ ಎಲ್ಲಾ ಧರ್ಮ, ಭಾಷೆ, ಸಮುದಾಯಗಳಿಗೆ ಪ್ರಾತಿನಿದ್ಯವಿದೆ. ಭಾರತದ ಸಂವಿಧಾನದಲ್ಲಿ ಜಾತ್ಯಾತೀಯ ಅನ್ನೋ ಪದವನ್ನು 42ನೇ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. 1976ರಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಬೆನ್ನಲ್ಲೇ ಜಾತ್ಯಾತೀತ ಪದ ಸೇರಿಸಲಾಯಿತು. ಭಾರತ ಯಾವತ್ತೂ ಹಿಂದೂ ರಾಷ್ಟ್ರವೇ . ಇದಕ್ಕೆ ಹಿಂದೂ ರಾಷ್ಟ್ರ ಎಂದು ಸಂವಿಧಾನದಲ್ಲಿ ಸೇರಿಸಬೇಕು ಎಂದಿಲ್ಲ ಎಂದಿದ್ದಾರೆ.

ಆರ್‌ಎಸ್ಎಸ್ ಶಾಖೆ ಮುಕ್ತ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಬಹುತೇಕ ಕಡೆ ಶಾಖೆ ನಡೆಸುತ್ತದೆ. ಇದು ಮುಕ್ತ ಶಾಖೆ ಇಲ್ಲಿ ಯಾರ ವಿರುದ್ಧ ದ್ವೇಷ ಕಾರುವ ಪದ್ಧತಿ, ಅಜೆಂಡಾಗಳು ನಮ್ಮಲ್ಲಿ ಇಲ್ಲ. ಭಾರತದ ಸಂಸ್ಕೃತಿ, ಇಲ್ಲಿನ ನಾಗೀರಕತೆ, ಭಾರತದ ಸಂಪ್ರದಾಯ, ಆಚರಣೆ, ಈ ಮಣ್ಣಿನ ಮೇಲಿನ ಪ್ರೀತಿ ಇವೇ ನಮ್ಮ ಆದ್ಯತೆಯ ವಿಷಯಗಳು. ಹಿಂದೂ ಸಂಸ್ಕೃತಿ, ಹಿಂದೂ ಸಮುದಾಯನ್ನು ಒಗ್ಗೂಡಿಸುವುದು, ಸುಧಾರಣೆ ತರುವುದು, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಎಲ್ಲಾ ವಲಯದಲ್ಲಿ ಭಾರತ ಸಶಕ್ತಗೊಳಿಸುವುದರ ಜೊತೆ ನಮ್ಮ ಸಂಸ್ಕೃತಿಯ ಹಿರಿಯ, ಹೆಮ್ಮೆ ನಮಗಿರಬೇಕು ಅನ್ನೋ ಉದ್ದೇಶದಿಂದ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತೇವೆ. ಯಾವುದೇ ಸಂದರ್ಭದಲ್ಲಿ ಯಾವುದೇ ಸೂಚನೆ ಇಲ್ಲದೆ ಬಂದು ಶಾಖೆಯ ಕಾರ್ಯವೈಖರಿ ವೀಕ್ಷಿಸಬಹುದು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.