Asianet Suvarna News Asianet Suvarna News

ಭಾರತದಲ್ಲಿಯೇ ಗರಿಷ್ಠ ಕೋವಿಡ್ ಸಾವು ಎಂದ WHO, ಇದೆಲ್ಲವೂ ಸುಳ್ಳು ಎಂದ ಕೇಂದ್ರ ಸರ್ಕಾರ!

"ಹದಿನೇಳು ಭಾರತೀಯ ರಾಜ್ಯಗಳಿಗೆ ಸಂಬಂಧಿಸಿದಂತೆ ಡೇಟಾವನ್ನು ಕೆಲವು ವೆಬ್‌ಸೈಟ್‌ಗಳು ಮತ್ತು ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ ಮತ್ತು ಅವುಗಳನ್ನು ಗಣಿತದ ಮಾದರಿಯಲ್ಲಿ ಬಳಸಲಾಗಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವಾದವನ್ನು ಭಾರತವು ಸತತವಾಗಿ ಪ್ರಶ್ನೆ ಮಾಡಿದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

India Has highest Covid Deaths Says WHO this is Incorrect Says central Government san
Author
Bengaluru, First Published May 5, 2022, 10:39 PM IST

ನವದೆಹಲಿ (ಮೇ. 5): ಕೋವಿಡ್ (Covid) ಸಾವಿನ ಸಂಖ್ಯೆಯನ್ನು ಲೆಕ್ಕಾಚಾರ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (World Health Organisation) ಗಣಿತದ ಮಾದರಿಯ (mathematical model) ಬಳಕೆಯನ್ನು ಭಾರತ ಬಲವಾಗಿ ವಿರೋಧಿಸಿದೆ. "ಕೋವಿಡ್ ಸಾವಿನ ಅಂಕಿ-ಸಂಖ್ಯೆಯು ವಾಸ್ತವದಿಂದ ಬಹಳ ದೂರದಲ್ಲಿದೆ" ಎಂದು ಹೇಳಿದೆ. ದೇಶವು ಜನನ ಮತ್ತು ಮರಣಗಳ ನೋಂದಣಿಯ "ಅತ್ಯಂತ ದೃಢವಾದ" ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವಾಲಯವು ( Union health ministry) ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಪ್ರಶ್ನೆ ಮಾಡಿದೆ.

ಗಣಿತದ ಮಾದರಿಯಲ್ಲಿ ಈ ಡೇಟಾವನ್ನು ಸಂಗ್ರಹ ಮಾಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ(WHO)  ಹೇಳಿದೆ. ಡಬ್ಲ್ಯುಎಚ್ ಓ ದತ್ತಾಂಶ ಸಂಗ್ರಹದ ವ್ಯವಸ್ಥೆಯನ್ನು "ಸಂಖ್ಯಾಶಾಸ್ತ್ರೀಯವಾಗಿ ಅಸ್ಪಷ್ಟ ಮತ್ತು ವೈಜ್ಞಾನಿಕವಾಗಿ ಪ್ರಶ್ನಾರ್ಹ" ಎಂದು ಭಾರತ ಹೇಳಿದೆ.

ಗುರುವಾರ ಬಿಡುಗಡೆಯಾದ ವರದಿಯಲ್ಲಿ, WHO ಜನವರಿ 2020 ಮತ್ತು ಡಿಸೆಂಬರ್ 2021 ರ ನಡುವೆ ಭಾರತದಲ್ಲಿ 47 ಲಕ್ಷ ಕೋವಿಡ್ ಸಾವುಗಳು ಸಂಭವಿಸಿವೆ. ಇದು ಭಾರತ ಸರ್ಕಾರ ಪ್ರಕಟ ಮಾಡಿರುವ ಸಂಖ್ಯೆಗಿಂತ 10 ಪಟ್ಟು ಹೆಚ್ಚಾಗಿದೆ. ಜಾಗತಿಕವಾಗಿ ಮೂರನೇ ಒಂದು ಭಾಗದಷ್ಟು ಕೋವಿಡ್ ಸಾವುಗಳು ಇದಾಗಿದೆ. ವರದಿಯ ಪ್ರಕಾರ, ಜಾಗತಿಕವಾಗಿ 1.5 ಕೋಟಿ ಮಂದಿ ಸಾವಿಗೀಡಾಗಿದ್ದರೆ, ಈಗಿರುವ ಅಧಿಕೃತ ಮಾಹಿತಿಯ ಪ್ರಕಾರ ಇರುವ 60 ಲಕ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

2020 ರಲ್ಲಿ, ಸಿವಿಲ್ ನೋಂದಣಿ ವ್ಯವಸ್ಥೆಯ ಅಡಿಯಲ್ಲಿ ಭಾರತವು 4,74,806 ಸಾವುಗಳನ್ನು ದಾಖಲಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. "ಹದಿನೇಳು ಭಾರತೀಯ ರಾಜ್ಯಗಳಿಗೆ ಸಂಬಂಧಿಸಿದಂತೆ ಡೇಟಾವನ್ನು ಕೆಲವು ವೆಬ್‌ಸೈಟ್‌ಗಳು ಮತ್ತು ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ ಮತ್ತು ಅವುಗಳ ಗಣಿತದ ಮಾದರಿಯಲ್ಲಿ ಬಳಸಲಾಗಿದೆ ಎಂಬವಿಶ್ವ ಆರೋಗ್ಯ ಸಂಸ್ಥೆಯ ವಾದವನ್ನು ಭಾರತವು ಸತತವಾಗಿ ಪ್ರಶ್ನೆ ಮಾಡಿದೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

"ಇದು ಭಾರತದ ವಿಚಾರದಲ್ಲಿ ಹೆಚ್ಚಿನ ಮರಣದ ವರದಿಗಳನ್ನು ಮಾಡಲು ಸಂಖ್ಯಾಶಾಸ್ತ್ರೀಯವಾಗಿ ಅಸ್ಪಷ್ಟ ಮತ್ತು ವೈಜ್ಞಾನಿಕವಾಗಿ ಪ್ರಶ್ನಾರ್ಹವಾದ ಡೇಟಾ ಸಂಗ್ರಹಣೆಯ ವಿಧಾನವನ್ನು ಪ್ರತಿಬಿಂಬಿಸುತ್ತದೆ" ಎಂದು ಸರ್ಕಾರ ಹೇಳಿದೆ. "ಈ ಮಾಡೆಲಿಂಗ್ ಪ್ರಕ್ರಿಯೆ ವಿಧಾನ ಮತ್ತು ಫಲಿತಾಂಶದ ಬಗ್ಗೆ ಭಾರತದ ಆಕ್ಷೇಪಣೆಯ ಹೊರತಾಗಿಯೂ, ವಿಶ್ವ ಆರೋಗ್ಯ ಸಂಸ್ತೆ ಭಾರತದ ಕಳವಳಗಳನ್ನು ಸಮರ್ಪಕವಾಗಿ ಪರಿಹರಿಸದೆ ಹೆಚ್ಚುವರಿ ಮರಣದ ಅಂದಾಜುಗಳನ್ನು ಬಿಡುಗಡೆ ಮಾಡಿದೆ" ಎಂದು ಸಚಿವಾಲಯ ಹೇಳಿದೆ.

ತುಳಸಿಭಾಯ್‌, ಡಬ್ಲ್ಯುಎಚ್‌ಒ ಮುಖ್ಯಸ್ಥಗೆ ಮೋದಿಯಿಂದ ಹೊಸ ಹೆಸರು ನಾಮಕರಣ!

"ಡಬ್ಲ್ಯುಎಚ್‌ಒ ಜೊತೆಗಿನ ಮಾತುಕತೆ ಹಾಗೂ ಸಂವಹನದ ಪ್ರಕ್ರಿಯೆಯ ಉದ್ದಕ್ಕೂ, ಡಬ್ಲ್ಯುಎಚ್‌ಒ ಹಲವಾರು ಮಾದರಿಗಳನ್ನು ಉಲ್ಲೇಖಿಸಿ ಭಾರತಕ್ಕೆ ವಿಭಿನ್ನ ಹೆಚ್ಚುವರಿ ಮರಣ ಅಂಕಿಅಂಶಗಳನ್ನು ಯೋಜಿಸಿದೆ, ಇದು ಸ್ವತಃ ಬಳಸಿದ ಮಾದರಿಗಳ ಸಿಂಧುತ್ವ ಮತ್ತು ದೃಢತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೋವಿಡ್‌ ಸಾವಿನ ವರದಿ ಬಿಡುಗಡೆಗೆ ಭಾರತ ವಿರೋಧ, 5.2 ಲಕ್ಷ ಅಲ್ಲ 40 ಲಕ್ಷ ಸಾವು !

ಭಾರತದ ಮಾಹಿತಿಯನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಯ ಮಾಡಲಾಗಿದೆ: ದೇಶದಲ್ಲಿ ಹೆಚ್ಚಿನ ಕೋವಿಡ್ ಸಾವುಗಳು ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಬೆನ್ನಲ್ಲಿಯೇ ಭಾರತವು 2020ರ ನಾಗರೀಕ ನೋಂದಣಿ ವ್ಯವಸ್ಥೆಯನ್ನು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಹಂಚಿಕೊಂಡಿತ್ತು. ಆ ಮೂಲಕ ನಿಮ್ಮ ವರದಿಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದಿತ್ತು. ಆದರೆ, ತನ್ನ ಹೇಳಿಕೆಯನ್ನು ಬೆಂಬಲಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಭಾರತ ನೀಡಿದ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿರ್ಲಕ್ಷ್ಯ ಮಾಡಿದೆ. ಡಬ್ಲ್ಯುಎಚ್ ಓ ವಿಧಾನಗಳನ್ನು ಭಾರತ ಪ್ರಶ್ನೆ ಮಾಡಿದ್ದ ಸಲುವಾಗಿಯೂ ತನ್ನದೇ ಆದ, ಅಸಮರ್ಪಕ ಮಾಹಿತಿ ಒಳಗೊಂಡ ವಿಧಾನವನ್ನು ಬಳಸಿ ತಪ್ಪು ವರದಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Follow Us:
Download App:
  • android
  • ios