ಕಾಠ್ಮಂಡು(ಏ.22): ಭಾರತ ಗುರುವಾರ ವೆಂಟಿಲೇಟರ್ ಅಳವಡಿಸಲಾದ ಸುಸಜ್ಜಿತ 39 ಆಂಬುಲೆನ್ಸ್ ಮತ್ತು 6 ಸ್ಕೂಲ್‌ಬಸ್‌ಗಳನ್ನು ನೇಪಾಳಕ್ಕೆ ಗಿಫ್ಟ್ ಮಾಡಿದೆ. ಕೊರೋನಾ ವಿರುದ್ಧ ನೇಪಾಳದ ಹೋರಾಟಕ್ಕೆ ಅಭಿನಂದನೆಯಾಗಿ ಮತ್ತು ಮುಂದುವರಿದ ಬೆಂಬಲದ ಭಾಗವಾಗಿ ಈ ರೀತಿ ಸಹಾಯ ನೀಡಲಾಗಿದೆ.

ಕೊರೋನಾ ವಿರುದ್ಧ ನೇಪಾಳದ ಹೋರಾಟ ಮತ್ತು ನೇಪಾಳಕ್ಕೆ ಭಾರತ ನೀಡುವ ನೆರವಿನ ಭಾಗವಾಗಿ ಭಾರತದ ರಾಯಭಾರಿ ಕಚೇರಿ ಇಸಿಜಿ, ಆಕ್ಸಿಜನ್, ವೆಂಟಿಲೇಟರ್ ಇರುವ 39 ಆಂಬುಲೆನ್ಸ್ ಹಾಗೂ ಇತರ ಅಗತ್ಯ ವೈದ್ಯಕೀಯ ಸಲಕರಣೆಯನ್ನು ನೇಪಾಳಕ್ಕೆ ನೀಡಿದೆ ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ಕೊರೋನಾ 2ನೇ ಅಲೆ: ಕೇಂದ್ರದ ಅಂಕಿ ಅಂಶದಲ್ಲಿ ಬಯಲಾಯ್ತು ಮಹತ್ವದ ವಿಚಾರ!

ಇದರ ಜೊತೆ 6 ಸ್ಕೂಲ್‌ಬಸ್‌ಗಳನ್ನೂ ನೀಡಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ಸಂಭ್ರಮದಲ್ಲಿ ಇದನ್ನು ನೀಡಲಾಗಿದೆ ಎನ್ನಲಾಗಿದೆ. ಕಳೆದ ವರ್ಷ ನೇಪಾಳಕ್ಕೆ 41 ಆಂಬುಲೆನ್ಸ್, 6 ಸ್ಕೂಲ್ ಬಸ್ ನೀಡಲಾಗಿತ್ತು.